ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಸವಾರರಿಗೆ ಗಂಭೀರ ಗಾಯ
ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗ ನಗರದ ಸೋಮಿನಕೊಪ್ಪದಲ್ಲಿ ನಡೆದಿದೆ.
ಸೋಮಿನಕೊಪ್ಪದ ಕೆ ಹೆಚ್ ಬಿ ಪ್ರೆಸ್ ಕಾಲೋನಿಯ, ಅಮರ್ ಗ್ರಾನೈಟ್ ಗೋಡೌನ್ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ನಡೆದಿದ್ದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಗುರುಪುರ ಬಡಾವಣೆ ನಿವಾಸಿ ಮುರುಗ (33) ಹಾಗೂ ಹುಣಸೋಡು ಗ್ರಾಮದ ನಿವಾಸಿ ನಾಯ್ಕ್ (24) ಗಾಯಗೊಂಡ ಬೈಕ್ ಸವಾರರು ಎಂದು ಗುರುತಿಸಲಾಗಿದೆ. ಇವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೋಂಡಾ ಆಕ್ಟೀವಾ ಹಾಗೂ ಪಲ್ಸರ್ ಬೈಕ್ ಗಳ ನಡುವೆ ಈ ಮುಖಾಮುಖಿ ಅಪಘಾತ ಸಂಭವಿಸಿದೆ. ಸ್ಥಳೀಯ ನಾಗರೀಕರು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ನೆರವಾಗಿದ್ದಾರೆ.
ಅವಘಡದ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.
