January 11, 2026

ತೋಟಗಾರಿಕೆಯಲ್ಲಿ ಮಿಶ್ರ ಬೆಳೆಗೆ ಆಧ್ಯತೆ ನೀಡಿ – ಆರಗ ಜ್ಞಾನೇಂದ್ರ

ತೋಟಗಾರಿಕೆಯಲ್ಲಿ ಮಿಶ್ರ ಬೆಳೆಗೆ ಆಧ್ಯತೆ ನೀಡಿ – ಆರಗ ಜ್ಞಾನೇಂದ್ರ

ರಿಪ್ಪನ್‌ಪೇಟೆಯ ಸೆಲಿ ಜೊಸೇಫ್ ತೋಟದಲ್ಲಿ ರೈತರೊಂದಿಗೆ ಆರಗ ಜ್ಞಾನೇಂದ್ರ ಸಮಾಲೋಚನೆ

ರಿಪ್ಪನ್‌ಪೇಟೆ : ಇತ್ತೀಚೆನ ವರ್ಷಗಳಲ್ಲಿ ಆಡಿಕೆ ಬೆಳೆಗೆ ಎಲೆಚುಕ್ಕೆ ರೋಗದಿಂದಾಗಿ ಇಳುವರಿ ಕುಂಠಿತಗೊಂಡಿದ್ದು ಅಲ್ಲದೆ ಅಡಿಕೆ ಸೇವನೆಯಂದ ಮಾರಕ ರೋಗ ಕ್ಯಾನ್ಸರ್ ನಂತಹ ಕಾಯಿಲೆ  ಬರುತ್ತದೆಂದು ಸುಪ್ರೀಂ ಕೋರ್ಟ್ ನಲ್ಲಿ ದೂರು ದಾಖಲಾಗಿರುವ ಬಗ್ಗೆ ಅಡಿಕೆ ಬೆಳೆಗಾರರಲ್ಲಿ  ಗೊಂದಲ ನಿರ್ಮಾಣವಾಗಿದೆ. ಕಳೆದ ವರ್ಷದಲ್ಲಿ ಮಲೆನಾಡಿನ ವ್ಯಾಪ್ತಿಯಲ್ಲಿನ ಹೊಸನಗರ ಸಾಗರ   ತೀರ್ಥಿಹಳ್ಳಿ ಕೊಪ್ಪ ಶೃಂಗೇರಿ ಹಲವು   ಕಡೆಯಲ್ಲಿ ಅಡಿಕೆಯಲ್ಲಿ ಎಲೆ ಚುಕ್ಕೆ ರೋಗದಿಂದಾಗಿ ಅಡಿಕೆ ತೋಟ ಬರಿದಾಗುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು.

ಅವರು ರಿಪ್ಪನ್‌ಪೇಟೆ ಸಮೀಪ ಕೆಂಚನಾಲ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಕೆದಲುಗುಡ್ಡೆಯ ಸೆಲಿ ಜೋಸೆಪ್ ಅವರ ಅಡಿಕೆ ತೋಟದಲ್ಲಿನ ಮಿಶ್ರಬೆಳೆ ಕಾಳುಮೆಣಸು ಕಾಪಿ ತೋಟಕ್ಕೆ ಭೇಟಿ ನೀಡಿ ರೈತರೊಂದಿಗೆ ಸಮಲೋಚನೆ ನಡೆಸಿ ತೋಟಗಾರಿಕೆಯಲ್ಲಿ ಮಿಶ್ರ ಬೆಳೆಯನ್ನು ಬೆಳೆಯುವುದರಿಂದ ಹೆಚ್ಚು ಲಾಭವಾಗುವುದೆಂದು ಹೇಳಿದರು.

9 ಅಡಿ ಅಗಲ 9 ಅಡಿ ಉದ್ದದ ಅಂತರದಲ್ಲಿ ಹಾಕಲಾದ ಅಡಿಕೆ ಗಿಡಗಳ ಮಧ್ಯದಲ್ಲಿ ಮಿಶ್ರಬೆಳೆಯಾದ ಕಾಫಿ ಮತ್ತು ಕಾಳು ಮೆಣಸು ಗಿಡಗಳನ್ನು ಬೆಳಸುವುದರಿಂದಾಗಿ ಹೆಚ್ಚು ಲಾಬವಾಗುವುದೆಂದು ವಿವರಿಸಿದ ಅವರು ಕಾಲ ಕ್ರಮೇಣ ಅಡಿಕೆ ಗಿಡಗಳಲ್ಲಿ ರೋಗ ಉಲ್ಬಣಗೊಂಡು ಗಿಡಗಳು ಸಂಪೂರ್ಣ ನಾಶವಾದರೂ ಕೂಡಾ ಮಿತ್ರ ಬೆಳೆಗಳಾದ ಕಾಫಿ ಮತ್ತು ಕಾಳುಮೆಣಸಿನ  ಉತ್ಪಾದನೆಯಂದಾಗಿ ಒಂದು ಬೆಳೆಯಲ್ಲಿ ನಷ್ಟವಾದರೆ ಇನ್ನೊಂದರಲ್ಲಿ ಲಾಭವಾಗುವುದೆಂದು ರೈತರು ಮನಗಾಣಬೇಕಾದ ಬಗ್ಗೆ ಇಲ್ಲಿನ ಸೆಲಿ ಜೋಸೆಪ್ ತೋಟದಲ್ಲಿ ಹಾಕಲಾದ ಕಾಫಿ ಕಾಳು ಮೆಣಸಿನ ಪ್ರಾತ್ಯೇಕ್ಷತೆಯನ್ನು ರೈತರಿಗೆ ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಪ್ರಗತಿಪರ ರೈತರನ್ನು ಕರೆತಂದು ತೋಟದ ಮಿಶ್ರಬೆಳೆಗಳಾದ ಅಡಿಕೆ ಕಾಫಿ.ಕಾಳುಮೆಣಸು ಮತ್ತು ಸಿಲ್ವರ್ ಗಿಡಗಳ ಬಗ್ಗೆ ಮಾಲೀಕರಿಂದ ಪ್ರಾತ್ಯಕ್ಷತೆಯನ್ನು ಪಡೆದರು.

ಪಿ.ಜೆ.ಸೆಲಿ ಜೋಸೆಫ್, ಪಿ.ಜೆ. ವರ್ಗೀಶ್,ಅಭಿನಂದನ್ ಜ್ಞಾನೇಂದ್ರ, ಮಹೇಶ ಹೆದ್ದೂರು,ದೇವರಾಜ್ ಕೆರೆಹಳ್ಳಿ , ಸಚಿನ್‌ ಕೆಂಚನಾಲ, ಇನ್ನಿತರರು ಹಾಜರಿದ್ದರು.

About The Author

Exit mobile version