ಗಾಂಧೀಜಿಯ ಆದರ್ಶಗಳೇ ದೇಶದ ಶಕ್ತಿ – ಬಿ ಜಿ ಚಂದ್ರಮೌಳಿ
ಹೊಸನಗರ: ಸತ್ಯ, ಪ್ರಾಮಾಣಿಕತೆ ಹಾಗೂ ಜನಪರ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ತತ್ತ್ವ–ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಬಿಜಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಅಹಿಂಸೆಯೇ ಗಾಂಧೀಜಿಯವರ ಮಹಾಸ್ತ್ರ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಲು ಅಕ್ಟೋಬರ್ 2 ಅನ್ನು ರಾಷ್ಟ್ರದಾದ್ಯಂತ ರಾಷ್ಟ್ರೀಯ ರಜಾದಿನವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯೂ ಈ ದಿನವನ್ನು ‘ಅಂತರಾಷ್ಟ್ರೀಯ ಅಹಿಂಸಾ ದಿನ’ವೆಂದು ಘೋಷಿಸಿ ಗಾಂಧೀಜಿಗೆ ಗೌರವ ಸಲ್ಲಿಸಿದೆ,” ಎಂದರು.
ಈ ಸಂದರ್ಭದಲ್ಲಿ ಎಂಪಿ ಸುರೇಶ್, ಪ್ರಭಾಕರ್, ಬಾಬು ಕಾಮತ್, ಚಂದ್ರಕಲಾ ನಾಗರಾಜ್, ರಾಧಿಕಾ ರತ್ನಾಕರ್, ನಾಗರಾಜ್, ಗುರುರಾಜ್, ಸ್ವಾಮಿ, ಲೋಕೇಶಪ್ಪ, ಗುಲಾಬಿ ಮರಿಯಪ್ಪ ಹಾಗೂ ಗುರು ಜಯನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
