Headlines

ಬ್ರೇಕ್‌ ಫೇಲ್ | ಪಾರ್ಕ್‌ ಮಾಡಿದ ಬೈಕ್‌ಗಳ ಮೇಲೆ ಹರಿದ್ ಬಸ್ – ತಪ್ಪಿದ ಭಾರಿ ಅನಾಹುತ

ಬ್ರೇಕ್‌ ಫೇಲ್ | ಪಾರ್ಕ್‌ ಮಾಡಿದ ಬೈಕ್‌ಗಳ ಮೇಲೆ ಹರಿದ್ ಬಸ್ – ತಪ್ಪಿದ ಭಾರಿ ಅನಾಹುತ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕೇಂದ್ರದಲ್ಲಿ ಇಂದು ಸಂಜೆ ನಡೆದ ಘಟನೆ ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದೆ. ಖಾಸಗಿ ಬಸ್‌ವೊಂದರ ಬ್ರೇಕ್‌ ಫೇಲ್‌ ಆಗಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಮೂರು ಬೈಕ್‌ಗಳ ಮೇಲೆ ಬಸ್ ಹರಿದ ಘಟನೆ ನಡೆದಿದೆ.

ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಸಂಭವಿಸಿದ ಈ ಅವಘಡದಲ್ಲಿ ಬೈಕ್‌ಗಳಿಗೆ ಗಂಭೀರ ಹಾನಿಯಾಗಿದೆ. ಅದೃಷ್ಟವಶಾತ್ ಘಟನೆ ವೇಳೆ ಯಾರಿಗೂ ಪೆಟ್ಟಾಗದೇ ದೊಡ್ಡ ಅನಾಹುತ ತಪ್ಪಿದೆ.

ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಕುರಿತಾಗಿ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

Exit mobile version