January 11, 2026

ಕ್ಲಿನಿಕ್’ ಗೆ ಬಂದ ಯುವತಿಗೆ ಕಿಸ್ ಕೊಟ್ಟು, ಬಟ್ಟೆ ಬಿಚ್ಚಲು ಒತ್ತಾಯ –  ಕಾಮುಕ ವೈದ್ಯ ಅರೆಸ್ಟ್.!

ಕ್ಲಿನಿಕ್’ ಗೆ ಬಂದ ಯುವತಿಗೆ ಕಿಸ್ ಕೊಟ್ಟು, ಬಟ್ಟೆ ಬಿಚ್ಚಲು ಒತ್ತಾಯ –  ಕಾಮುಕ ವೈದ್ಯ ಅರೆಸ್ಟ್.!

ಕ್ಲಿನಿಕ್ ಗೆ ಬಂದ ಯುವತಿಗೆ ಕಿಸ್ ಕೊಟ್ಟು, ಬಟ್ಟೆ ಬಿಚ್ಚಲು ಒತ್ತಾಯಿಸಿದ ಕಾಮುಕ ವೈದ್ಯನೋರ್ವ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರಿನ ಖಾಸಗಿ ಕ್ಲಿನಿಕ್ ನಲ್ಲಿ ಈ ಘಟನೆ ನಡೆದಿದೆ. ಚರ್ಮರೋಗ ತಜ್ಞ ಈ ಕೃತ್ಯ ಎಸಗಿದ್ದಾನೆ.ಚರ್ಮದ ಸೋಂಕಿಗೆ ಒಳಗಾಗಿದ್ದ ಯುವತಿ ಡಾಕ್ಟರ್ ಬಳಿ ಬಂದಿದ್ದಾರೆ.

ಆಕೆಯನ್ನ ಪರೀಕ್ಷೆ ಮಾಡುವ ನೆಪದಲ್ಲಿ ಆಕೆಯನ್ನ ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಆಕೆಗೆ ಕಿಸ್ ಕೊಟ್ಟು ಬಲವಂತವಾಗಿ ತಬ್ಬಿಕೊಂಡಿದ್ದಾನೆ. ಅಲ್ಲದೇ ಬಟ್ಟೆ ಬಿಚ್ಚುವಂತೆ ವೈದ್ಯ ಒತ್ತಾಯಿಸಿದ್ದಾನೆ. ಅಲ್ಲದೇ ಖಾಸಗಿಯಾಗಿ ನನ್ನ ರೂಮ್ ಗೆ ಬಾ ಎಂದು ಒತ್ತಾಯಿಸಿದ್ದಾನೆ ಯುವತಿ ಆರೋಪಿಸಿದ್ದಾಳೆ.

ಘಟನೆ ಬಳಿಕ ಯುವತಿ ಪೋಷಕರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ಯುವತಿ ಕುಟುಂಬದವರು ಕ್ಲಿನಿಕ್ ಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ವೈದ್ಯನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

About The Author

Exit mobile version