Headlines

ಶಾರೂಕ್ ಖಾನ್ ಕೊಲೆ ಪ್ರಕರಣ – ಆರೋಪಿಗಳಿಗೆ ಆಜೀವ ಕಾರಾಗೃಹ ಶಿಕ್ಷೆ

ಶಾರೂಕ್ ಖಾನ್ ಕೊಲೆ ಪ್ರಕರಣ – ಆರೋಪಿಗಳಿಗೆ ಆಜೀವ ಕಾರಾಗೃಹ ಶಿಕ್ಷೆ

ಭದ್ರಾವತಿ: ಶಾರೂಖ್‌ಖಾನ್ ಎಂಬ ಯುವಕನನ್ನು ಕೊಲೆಮಾಡಿದ್ದ ರಮೇಶ ಯಾನೆ ಹಂದಿ ರಮೇಶ, ವೆಂಕಟರಾಮ, ಚಂದ್ರ ಯಾನೆ ಚಾಣ, ಕಾರ್ತಿಕ, ಮಧುಸೂದನ ಯಾನೆ ಗುಂಡ, ರಮೇಶ ಯಾನೆ ಕೆಳವಿ ರಮೇಶ, ನಾಗರಾಜ, ಸಿದ್ಧಪ್ಪ ಎಂಬ 08 ಜನ ಆರೋಪಿಗಳಿಗೆ ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆಜೀವ ಕಾರಾಗೃಹವಾಸ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಹೊಸಮನೆ ನಿವಾಸಿಯಾದ ಶಾರೂಖ್ ಖಾನ್ ಎಂಬುವನಿಂದ ೧ನೇ ಆರೋಪಿ ಹಂದಿ ರಮೇಶ್ ೨೦೧೯ರಲ್ಲಿ ೨೦ಸಾವಿರ ರೂ ಸಾಲ ಪಡೆದಿದ್ದನೆಂದು ಹಣ ವಾಪಾಸು ಕೊಟ್ಟಿರದಿದ್ದ ಕಾರಣಕ್ಕೆ ಅವರಿಬ್ಬರ ನಡುವೆ ಜಗಳವಾಗಿತ್ತಂದು, ಅದೇ ರೀತಿ ಶಾರೂಖ್ ಖಾನ್ ತಾನು ಕೊಲೆಯಾಗುವ ೬ತಿಂಗಳ ಹಿಂದೆ ಸದರಿಪ್ರಕರಣದ ೨ನೆ ಆರೋಪಿ ವೆಂಕಟರಾಮನಿಗೆ ಚಾಕುಹಾಕಲು ಯತ್ನಿಸಿದ ಘಟನೆ ನಡೆದಿದ್ದು ಆ ಕುರಿತಂತೆ ಹೊಸಮನೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳು ಶಾರೂಖ್‌ಖಾನ್‌ನನ್ನು  ಕೊಲೆ ಮಾಡಬೇಕಂದು ನಿಶ್ಚಯಿಸಿದ್ದರು.  ವಿಷಯ ಶಾರೂಖ್ ಖಾನ್‌ಗೆ ತಿಳಿದು ಆತ ಕೆಲಕಾಲ ಭದ್ರಾವತಿ  ಬಿಟ್ಟು  ಬೆಂಗಳೂರಿಗೆ ಹೋಗಿದ್ದನು.  ೩೦-೦೯೨೦೨೦ರಂದು ಬೆಂಗಳೂರಿನಿಂದ ಭದ್ರಾವತಿಗೆ ವಾಪಾಸ್ ಬಂದಿದ್ದಾನೆಂಬ ವಿಷಯ ಆರೋಪಿಗಳಿಗೆ ತಿಳಿದು ಅರೋಪಿUಳು  ಶಾರೂಖ್‌ಖಾನ್ ಮನೆಗೆ ಹೋಗಿ ವಿಚಾರಿಸಿ  ಅವರ ಮನೆಯವರಿಗೆ ಬೆದರಿಕೆ ಹಾಕಿದ್ದರು.

ದಿ.೩೦-೦೯೨೦೨೦ರಂದು ರಾತ್ರಿ ೧೨.೪೫ರ ಸಮಯದಲ್ಲಿ  ಶಾರೂಖ್‌ಖಾನ್ ಹೊಸಮನೆಯ ಹುನಮಂತಕಾಲೋನಿಯ ಸಮೀಪದ ನೂರಾನಿ ಮಸಿದಿಯ ಬಳಿ ಆತನ ದೊಡ್ಡಮ್ಮನ ಮನೆ ಬಳಿ ಹೊರಗೆ ನಿಂತಿದ್ದಾಗ ಅಲ್ಲಿಗೆ ಆರೋಪಿUಳು ಕೊಲೆ ಮಾಡಲು ಹೋದಾಗ, ಶಾರೂಕ್‌ಖಾನ್ ಅವರಿಂದ ತಪ್ಪಿಸಿಕೊಳ್ಳಲು ಆ ಬಡಾವಣೆಯಲ್ಲೆಲ್ಲ ಓಡಿದ್ದರೂ ಅವನನ್ನು ಬೆನ್ನಟ್ಟಿ  ಮೊಬೈಲ್‌ಟಾರ್ಚ್  ಬೆಳಕಿನ್ನು ಬಿಟ್ಟು ಗಿಡಗಂಟಿಯ ಪೊದೆಯಲ್ಲಿ ಶಾರೂಖ್‌ಖಾನ್ ಬಚ್ಚಿಟ್ಟುಕೊಂಡಿರುವುದನ್ನು ಪತ್ತೆಹಚ್ಚಿ ಅವನನ್ನು ಹೊರಗೆಳೆದು ಅವನ ತಲೆಗೆ ಅಲ್ಲಿದ್ದ ಸಾರ್ವ ಮರದ ತುಂಡಿನಿಂದ ಬಲವಾಗಿ ಹೊಡೆದುಕುತ್ತಿಗೆಯನ್ನು ಕಾಲಿಂದ ತುಳಿದು, ನಾಲಿಗೆ ಹೊರಬರುವಂತೆ ಮಾಡಿ  ಬರ್ಬರವಾಗಿ ಕೊಲೆಮಾಡಿದ್ದರು.

ಶಾರೂಖ್‌ಖಾನ್ ತಂದೆ ಮಹಮದ್ ಅಖ್ತರ್ ಹೊಸಮನೆ ಪೋಲಿಸ್ ಠಾಣೆಗೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು.  ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ  ನ್ಯಾಯಾಧೀಶೆ  ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಎಲ್ಲಾ ೮ಜನ ಆರೋಪಿಗಳ ಮೇಲಿನ ಅರೋಪ ಸಾಬೀತಾದ ಕಾರಣ ಆರೋಪಿಗಳೆಲ್ಲರಿಗೂ  ವಿವಿಧ ಕಲಂನ   ಪ್ರತ್ಯೇಕ ಶಿಕ್ಷೆ ಪ್ರಕಟಿಸಿದ್ದಾರೆ.

ವಿವಿಧ ಆರೋಪಗಳ ಸಂಭಂಧ ತಲಾ ೧ಲಕ್ಷದ ೬೦ ಸಾವಿರ ದಂಡ ವಿಧಿಸಿ ಸದರಿ ದಂಡದ ಮೊತ್ತದಲ್ಲಿ ಕೊಲೆಯಾದ  ಶಾರೂಖ್ ಖಾನ್ ತಂದೆ ಮಹಮದ್ ಅಕ್ತರ್‌ಗೆ  ಹಾಗೂ ತಾಯಿ ಶಂಶದಾಬಾನು ಅವರಿಗೆ ತಲಾ ೧ಲಕ್ಷದ ೫೦ ಸಾವಿರ ರೂಗಳನ್ನು ನೀಡಬೇಕೆಂದು ಆದೇಶಿಸಿ ಸೋಮವಾರ ತೀರ್ಪು ನೀಡಿದರು.ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ರತ್ನಮ್ಮ.ಪಿ ವಾದಿಸಿದ್ದರು.

Exit mobile version