ದೈಹಿಕ ಶಿಕ್ಷಕನ ಮೊಬೈಲ್ ನಲ್ಲಿ ಬರೋಬ್ಬರಿ 2,500 ಸೆ*ಕ್ಸ್ ವೀಡಿಯೋಗಳು! ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಮತ್ತೊಂದು ಪ್ರಕರಣ
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರದಲ್ಲಿ ಕಂಬಿ ಹಿಂದೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದೀಗ ಅದರಂತೆ ರಾಜ್ಯದಲ್ಲಿ ಮತ್ತೆ ‘ಪ್ರಜ್ವಲ್ ರೇವಣ್ಣ ಮಾದರಿ’ ಪ್ರಕರಣ ಬೆಳಕಿಗೆ ಬಂದಿದೆ.
ಹೌದು.. ಕ್ರಿಕೆಟ್ ಕೋಚ್ ಮತ್ತು ಶಾಲಾ ದೈಹಿಕ ಶಿಕ್ಷಕನ ಬಳಿ ಬೇರೆ ಬೇರೆ ಮಹಿಳೆಯರ ಅಶ್ಲೀಲ ವಿಡಿಯೋಗಳು (obscene videos) ಇವೆ ಎಂದು ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಖಾಸಗಿ ಶಾಲೆಯೊಂದರ ದೈಹಿಕ ಶಿಕ್ಷಕನಾಗಿರುವ ಮ್ಯಾಥ್ಯೂ ಎನ್ನುವಾತನ ವಿರುದ್ಧ ಮಹಿಳೆ ಆರೋಪಿಸಿದ್ದು, ಕೆಲವು ಮಹಿಳೆಯರು ಮತ್ತು ಯುವತಿಯರ ಜೊತೆಗಿರುವ ಖಾಸಗಿ ಕ್ಷಣವನ್ನು ಮ್ಯಾಥ್ಯೂ ಸೆರೆ ಹಿಡಿದುಕೊಂಡಿದ್ದಾನೆ. ಸುಮಾರು 2500 ವಿಡಿಯೋಗಳಿವೆ ಎಂಬುವುದನ್ನು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಮ್ಯಾಥ್ಯೂ ವಿರುದ್ಧ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾಳೆ ಎಂದು ತಿಳಿದುಬಂದಿದೆ.
ತನ್ನನ್ನು ದೈಹಿಕವಾಗಿ ದುರ್ಬಳಕೆ ಮಾಡಿಕೊಂಡು, ಖಾಸಗಿ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಇದಲ್ಲದೇ, ಇತರ ಹಲವಾರು ಮಹಿಳೆಯರು ಮತ್ತು ಯುವತಿಯರ ಜೊತೆಗಿನ ಖಾಸಗಿ ಕ್ಷಣಗಳನ್ನು ಸಹ ಮ್ಯಾಥ್ಯೂ ಸೆರೆಹಿಡಿದುಕೊಂಡಿದ್ದು, ಒಟ್ಟು 2500 ವಿಡಿಯೋಗಳು ಆತನ ಬಳಿಯಿವೆ ಎಂಬ ಆರೋಪ ಕೇಳಿಬಂದಿದೆ.
ಸಂತ್ರಸ್ತೆಗೆ ಈಗಾಗಲೇ ಮದುವೆಯಾಗಿದ್ದು, ಒಂದು ಹೆಣ್ಣು ಮಗುವಿದೆ. ತನ್ನ ಪತಿಯಿಂದ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿರುವ ಈ ಮಹಿಳೆ, ತನ್ನ ಮಗಳು ಓದುತ್ತಿದ್ದ ಖಾಸಗಿ ಶಾಲೆಯಲ್ಲಿ ಮ್ಯಾಥ್ಯೂ ಪರಿಚಯವಾಗಿದೆ.ಮ್ಯಾಥ್ಯೂ ಆ ಶಾಲೆಯಲ್ಲಿ ಕ್ರಿಕೆಟ್ ಕೋಚ್ ಮತ್ತು ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಇಬ್ಬರ ನಡುವೆ ಪರಿಚಯ ಬೆಳೆದು, ಕೆಲವು ಕಾಲ ಜೊತೆಯಾಗಿ ವಾಸಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆಯಂತೆ ಇಬ್ಬರು ಚರ್ಚ್‌ನ ಮುಂದೆ ಮದುವೆಯಾಗಿದ್ದಾರೆ. ಆದರೆ, ಈ ಸಂದರ್ಭದಲ್ಲಿ ದೈಹಿಕ ಸಂಪರ್ಕದ ಕ್ಷಣಗಳನ್ನು ಮ್ಯಾಥ್ಯೂ ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಮದುವೆಯಾದ ನಂತರ ಮ್ಯಾಥ್ಯೂ ನ ನಿಜವಾದ ಸ್ವರೂಪ ತಿಳಿದುಬಂದಿದೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ‘ನಾವು ಕೆಲ ವರ್ಷಗಳ ಕಾಲ ಜೊತೆಯಾಗಿದ್ದೆವು. ಆದರೆ, ಒಂದು ರಾತ್ರಿ ನಾನು ಮಲಗಿದ್ದಾಗ ನನ್ನ ಮೊಬೈಲ್ ಸಮೇತ ಆತ ಓಡಿಹೋಗಿದ್ದಾನೆ. ಆ ಮೊಬೈಲ್‌ನಲ್ಲಿ ಈತನ ಕೃತ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಸಾಕ್ಷಿಗಳಿದ್ದವು ಎಂದು ಸಂತ್ರಸ್ತೆ ಹೇಳಿದ್ದಾಳೆ. ಇನ್ನು ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ತೆಗೆದುಕೊಳ್ಳಲುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದು, ಕೊನೆಗೆ ಮಹಿಳಾ ಆಯೋಗದ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ಬಳಿಕ ಮಹಿಳೆ ಮಾಡಿರುವ ಆರೋಪದ ಸತ್ಯಾಸತ್ಯತೆ ಆಚೆ ಬರಲಿದೆ.
ಮೊಬೈಲ್ ನಲ್ಲಿ 2500 ವಿಡಿಯೋ
ಈ ಸಂಬಂಧ ಮ್ಯಾಥ್ಯೂ ವಿರುದ್ಧ ಸಂತ್ರಸ್ಥ ಮಹಿಳೆ ಮಹಿಳಾ ಆಯೋಗದ ಮೆಟ್ಟಿಲೇರಿದ್ದು, ದೂರು ನೀಡಿದ್ದಾರೆ ಎನ್ನಲಾಗಿದೆ. ದೂರಿನಲ್ಲಿ ತನ್ನನ್ನು ದೈಹಿಕವಾಗಿ ದುರ್ಬಳಕೆ ಮಾಡಿಕೊಂಡು, ಖಾಸಗಿ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಇದಲ್ಲದೇ, ಇತರ ಹಲವಾರು ಮಹಿಳೆಯರು ಮತ್ತು ಯುವತಿಯರ ಜೊತೆಗಿನ ಖಾಸಗಿ ಕ್ಷಣಗಳನ್ನು ಸಹ ಮ್ಯಾಥ್ಯೂ ಸೆರೆಹಿಡಿದುಕೊಂಡಿದ್ದು, ಒಟ್ಟು 2500 ವಿಡಿಯೋಗಳು ಆತನ ಬಳಿಯಿವೆ ಎಂದು ಆರೋಪಿಸಿದ್ದಾರೆ.
ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ A man identified…
ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು SSLC student Krishna drowned while swimming in Tunga Channel…
ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ Shivamogga witnessed a grand and peaceful Eid Milad procession…
ಹುಂಚ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ Postman News report brings action on…
ಸಿದ್ದರಮಟ್ಟಿ ಬಳಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ₹31,350 ಮೌಲ್ಯದ ಗಾಂಜಾ ಜಪ್ತಿ Two accused persons were…
ಬೀದಿ ನಾಯಿಗಳ ದಾಳಿ: ಆರು ಕುರಿಗಳು ಸಾವು Six sheep belonging to a resident of Sagar were…