Headlines

ಆಗುಂಬೆ ಘಾಟ್‌ ನಲ್ಲಿ ಧರೆ ಕುಸಿದು ನೆಲಕ್ಕುರುಳಿದ ಮರ – ಸಂಚಾರ ವ್ಯತ್ಯಯ

ಆಗುಂಬೆ ಘಾಟ್‌ ರಸ್ತೆ ಮತ್ತೆ ಸ್ಥಗಿತ – ಧರೆ ಕುಸಿದು ಮರ ಬಿದ್ದು ಸಂಚಾರ ತಡೆ ತೀರ್ಥಹಳ್ಳಿ : ಮಲೆನಾಡಿನ ಜೀವನಾಡಿಯಾದ ಆಗುಂಬೆ ಘಾಟ್‌ ರಸ್ತೆ ಮತ್ತೆ ಪ್ರಕೃತಿಯ ಕೋಪಕ್ಕೆ ತುತ್ತಾಗಿದೆ. ಐದನೇ ತಿರುವಿನ ಬಳಿ ಧರೆ ಕುಸಿದು, ದೊಡ್ಡ ಮರ ರಸ್ತೆ ಮಧ್ಯೆ ಬಿದ್ದ ಪರಿಣಾಮ ಸಂಜೆ ವೇಳೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಭಾರೀ ತೊಂದರೆಗೆ ಒಳಗಾಗಿದ್ದಾರೆ. ಮರ ಬಿದ್ದುದರಿಂದ ರಸ್ತೆ ಸಂಪೂರ್ಣ ಮುಚ್ಚಿಕೊಂಡಿದ್ದು, ತೆರವು ಕಾರ್ಯ ಕೂಡಾ ಗೊಂದಲಮಯವಾಗಿದೆ. ಸ್ಥಳೀಯರ ಪ್ರಕಾರ…

Read More

ಕೆಎಸ್ಆರ್’ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ – ಪ್ರಕರಣ ದಾಖಲು

ಕೆಎಸ್ಆರ್’ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ – ಪ್ರಕರಣ ದಾಖಲು ಶಿಕಾರಿಪುರ ತಾಲೂಕಿನ ಕೋಟಿಪುರ ಗ್ರಾಮದಲ್ಲಿ ಕೆಎಸ್ಆರ್’ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂವರು ಗ್ರಾಮಸ್ಥರ ವಿರುದ್ದ ಪ್ರಕರಣ ದಾಖಲಾದ ಘಟನೆ ನಡೆದಿದೆ. ತನ್ವೀರ್ ಹೊರಕೆರೆ (38) ಹಲ್ಲೆಗೊಳಗಾದ ಬಸ್ ಕಂಡಕ್ಟರ್ ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಶಿಕಾರಿಪುರ – ಮುಡುಬಾಸಿದ್ದಾಪುರ ಮಾರ್ಗದಲ್ಲಿ ಸಂಚರಿಸುವ ಬಸ್ ನಲ್ಲಿ ಕಂಡಕ್ಟರ್ ಆಗಿದ್ದಾರೆ. ಇಬ್ಬರು…

Read More

ರಿಪ್ಪನ್ ಪೇಟೆ ಬಾಲಕರ ವಸತಿ ನಿಲಯಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ , ಪರಿಶೀಲನೆ

ರಿಪ್ಪನ್ ಪೇಟೆ ಬಾಲಕರ ವಸತಿ ನಿಲಯಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ , ಪರಿಶೀಲನೆ ರಿಪ್ಪನ್ ಪೇಟೆ : ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ರಿಪ್ಪನ್‌ಪೇಟೆಯ ಹಳೆಯ ಸಂತೇಮಾರ್ಕೆಟ್ ರಸ್ತೆಯಲ್ಲಿರುವ ಬಾಲಕರ ವಸತಿ ನಿಲಯಕ್ಕೆ ದಿಡೀರ್ ಭೇಟಿ ನೀಡಿದರು. ಯಾವುದೇ ಪೂರ್ವ ಸೂಚನೆ ಇಲ್ಲದೆ ದಿಡೀರ್ ಆಗಮಿಸಿ ಮಕ್ಕಳೊಂದಿಗೆ ಕಾಲ ಕಳೆದರು. ಸಾಮಾನ್ಯವಾಗಿ ಸಭಾಂಗಣಗಳಲ್ಲಿ, ವೇದಿಕೆಗಳ ಮೇಲೆ ಮಾತ್ರ ಕಾಣುವ ನಾಯಕರು ಈ ಬಾರಿ ಮಕ್ಕಳ ನಡುವೆ ನಿಂತು ಅವರ…

Read More

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆಯಲ್ಲಿ ಈದ್ ಮಿಲಾದ್ ಅಂಗವಾಗಿ ಸೌಹಾರ್ಧ ಸಂಗಮ ರಿಪ್ಪನ್‌ಪೇಟೆ : ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುವ ಮೂಲಕ ಸುಸಂಸ್ಕೃತ ಸಮಾಜ ಮತ್ತು ಸದೃಢ ದೇಶ ನಿರ್ಮಾಣ ಮಾಡಬೇಕು ಹಾಗೆಯೇ ಉದ್ಯೋಗ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಸಲಹೆ ನೀಡಿದರು. ಪಟ್ಟಣದಲ್ಲಿ ಈದ್…

Read More

ಪ್ರಧಾನಿ ನರೇಂದ್ರ ಮೋದಿ 75ನೇ ಜನ್ಮದಿನ : ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

ಪ್ರಧಾನಿ ನರೇಂದ್ರ ಮೋದಿ 75ನೇ ಜನ್ಮದಿನ : ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮ ದಿನಾಚರಣೆಯ ಅಂಗವಾಗಿ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ನೆರೆವೇರಿಸಲಾಯಿತು. ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್ ಸತೀಶ್ ಮಾತನಾಡಿ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಅಭಿಮಾನಪೂರ್ವಕ ಶುಭಕಾಮನೆಗಳು. ಆರೋಗ್ಯಪೂರ್ಣವಾಗಿ ಇನ್ನೂ ಬಹಳ ವರ್ಷಗಳ ಕಾಲ ಮೋದಿಯವರ ರಾಷ್ಟ್ರಸೇವೆ ಹೀಗೆಯೇ ಮುಂದುವರಿಯುವಂತೆ ದೇವರು ಆಶೀರ್ವದಿಸಲಿ ಎಂದು…

Read More

ರಿಪ್ಪನ್‌ಪೇಟೆಯಲ್ಲಿ ವಿಜೃಂಭಣೆಯ ವಿಶ್ವಕರ್ಮ ಜಯಂತಿ ಆಚರಣೆ

ರಿಪ್ಪನ್‌ಪೇಟೆಯಲ್ಲಿ ವಿಜೃಂಭಣೆಯ ವಿಶ್ವಕರ್ಮ ಜಯಂತಿ ಆಚರಣೆ ರಿಪ್ಪನ್‌ಪೇಟೆಯಲ್ಲಿ ವಿಶ್ವಕರ್ಮ ಜಯಂತಿಯನ್ನು ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಸಮಾರಂಭಕ್ಕೆ ಹಲವು ಗಣ್ಯರು ಹಾಜರಿದ್ದರೂ, ಪ್ರಮುಖವಾಗಿ ಇಬ್ಬರು ಅತಿಥಿಗಳು ಮಾತ್ರ ಮಾತನಾಡಿ ತಮ್ಮ ಚಿಂತನೆಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಉಪನ್ಯಾಸಕರಾದ ಡಾ ಗಣೇಶ್ ಆಚಾರ್ ವಿಶ್ವಕರ್ಮ ಜಯಂತಿ ಶ್ರಮಜೀವಿಗಳ ಹಬ್ಬವಾಗಿದ್ದು, ಸಮಾಜದ ನೈತಿಕ ಶಕ್ತಿ ಹಾಗೂ ಅಭಿವೃದ್ಧಿಯ ಪ್ರತೀಕವಾಗಿದೆ ಎಂದು ಹೇಳಿದರು. “ಬಡಗಿ, ಕಮ್ಮಾರರು, ಕಾರ್ಮಿಕರು ತಮ್ಮ ಪರಿಶ್ರಮದಿಂದಲೇ ಸಮಾಜಕ್ಕೆ ಆಧಾರವಾಗಿದ್ದಾರೆ. ಅವರ ಶ್ರಮವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ”…

Read More

ಅಡಕೆ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಸಾವು

ಅಡಕೆ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಸಾವು ಶಿವಮೊಗ್ಗ : , ಸೆಪ್ಟೆಂಬರ್ 17: ವಿದ್ಯುತ್ ಸ್ಪರ್ಶದಿಂದ ಕಾರ್ಮಿಕನೋರ್ವ ಮೃತಪಟ್ಟ ಘಟನೆ, ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ಅಡಕೆ ತೋಟವೊಂದರಲ್ಲಿ ನಡೆದಿದೆ. ಹರಮಘಟ್ಟ ಗ್ರಾಮದ ನಿವಾಸಿ ವೆಂಕಟೇಶ್ (45) ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ವಿದ್ಯುತ್ ಸ್ಪರ್ಶದಿಂದ ಗಂಭೀರ ಸ್ಥಿತಿಯಲ್ಲಿದ್ದ ವೆಂಕಟೇಶ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಕಾರ್ಮಿಕ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಮೃತ ಕಾರ್ಮಿಕನು…

Read More

ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾಗಿದ್ದ ತಾಯಿಯನ್ನು ನೋಡಲು ಬಂದ ಯುವಕ ಆಸ್ಪತ್ರೆಯಲ್ಲಿಯೇ ನೇಣಿಗೆ ಶರಣು

ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾಗಿದ್ದ ತಾಯಿಯನ್ನು ನೋಡಲು ಬಂದ ಯುವಕ ಆಸ್ಪತ್ರೆಯಲ್ಲಿಯೇ ನೇಣಿಗೆ ಶರಣು ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ನಾಮಫಲಕಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣಿಗೆ ಶರಣಾದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುರಹೊನ್ನೆಯ ನಿವಾಸಿ ಆಕಾಶ್ (28) ನೇಣಿಗೆ ಶರಣಾಗಿದ್ದಾನೆ. ಆಕಾಶ್ ತಾಯಿಗೆ ಹುಷಾರಿಲ್ಲದ್ದರಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಾಯಿಯ ಅರೈಕೆಗಾಗಿ ಆಸ್ಪತ್ರೆಗೆ ಬಂದಿದ್ದ ಆಕಾಶ್ ಒಪಿಡಿಗೆ ಅಡ್ಮಿಷನ್ ಪತ್ರ ಪಡೆಯುವ ಪಕ್ಕದಲ್ಲಿ ಸೂಪರ್ ಸ್ಪೆಷಾಲಿಟಿಗೆ ದಾರಿ ಎಂಬ ನಾಮಫಲಕಕ್ಕೆ ನೇಣು ಬಿಗಿದುಕೊಂಡಿದ್ದಾನೆ….

Read More

ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರಾ ಮಹೋತ್ಸವ – ಶಾಸಕ ಬೇಳೂರು ಗೋಪಾಲಕೃಷ್ಣ ಭಾಗಿ

ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರಾ ಮಹೋತ್ಸವ – ಶಾಸಕ ಬೇಳೂರು ಗೋಪಾಲಕೃಷ್ಣ ಭಾಗಿ ರಿಪ್ಪನ್ ಪೇಟೆ : ಮಲೆನಾಡಿನ ಆರಾಧ್ಯದೈವ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ ಮೂರನೇ ಜಾತ್ರಾ ಮಹೋತ್ಸವದಲ್ಲಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಮಂಗಳವಾರ ನೂರಾರು ಭಕ್ತರೊಂದಿಗೆ ಪಾಲ್ಗೊಂಡು ದೇವಿಯ ದರ್ಶನ ಪಡೆದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮ್ಮನಘಟ್ಟ ಕ್ಷೇತ್ರವು ಮುಂದಿನ ದಿನಗಳಲ್ಲಿ ಸಿಗಂದೂರು ಶ್ರೀ ಕ್ಷೇತ್ರದಂತೆಯೇ ಪ್ರಸಿದ್ಧ ಪ್ರವಾಸಿ ತಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳ ಕೊರತೆ ನಿವಾರಣೆಯಾಗುವುದರೊಂದಿಗೆ ಕ್ಷೇತ್ರವು ರಾಜ್ಯ…

Read More

ಶಿವಮೊಗ್ಗದ ಈದ್ ಮೆರವಣಿಗೆಯಲ್ಲಿ ಡಿ.ಜೆ ಅಬ್ಬರ – ಮೆರವಣಿಗೆಯಲ್ಲಿದ್ದ ಕೆಲವು ಮುಸ್ಲಿಂ ಯುವಕರಿಂದ ಡಿಜೆ ಡ್ಯಾನ್ಸ್ ಗೆ ವಿರೋಧ

ಶಿವಮೊಗ್ಗದ ಈದ್ ಮೆರವಣಿಗೆಯಲ್ಲಿ ಡಿ.ಜೆ ಅಬ್ಬರ – ಮೆರವಣಿಗೆಯಲ್ಲಿದ್ದ ಕೆಲವು ಮುಸ್ಲಿಂ ಯುವಕರಿಂದ ಡಿಜೆ ಡ್ಯಾನ್ಸ್ ಗೆ ವಿರೋಧ ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆಯಲ್ಲಿ ಇವತ್ತು ನೂರಕ್ಕು ಹೆಚ್ಚು ಡಿಜೆ ಸಿಸ್ಟಮ್‌ಗಳು ಅಳವಡಿಸಲಾಗಿತ್ತು , ಇನ್ನೊಂದೆಡೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವರೆ ಡಿಜೆಗೆ ವಿರೋಧ ವ್ಯಕ್ತಪಡಿಸಿ ಭಿತ್ತಿ ಪತ್ರ ಪ್ರದರ್ಶಿಸಿದರು. ಇನ್ನೊಂದೆಡೆ ಭಾರಿ ಶಬ್ದ ಮಾಡುತ್ತಿದ್ದ ಡಿಜೆ ವಾಹನವನ್ನು ಪೊಲೀಸರು ತಡೆದು ಸೌಂಡ್ ಆಫ್ ಮಾಡಿಸಿದ ಘಟನೆ ನಡೆಯಿತು. ಶಿವಮೊಗ್ಗ ನಗರದಲ್ಲಿ ಇವತ್ತು ಅದ್ಧೂರಿಯ ಈದ್ ಮಿಲಾದ್ ಮೆರವಣಿಗೆ ನಡೆಯಿತು….

Read More
Exit mobile version