RIPPONPETE | ಚರ್ಚ್ ಮುಂಭಾಗದಲ್ಲಿ ಕರು ಅಡ್ಡ ಬಂದು ಮಾರುತಿ ಒಮಿನಿ ಕಾರು ಪಲ್ಟಿ
ರಿಪ್ಪನ್‌ಪೇಟೆ ; ಕರುವೊಂದು ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಓಮಿನಿ ಕಾರು ಪಲ್ಟಿಯಾಗಿ ಬಿದ್ದಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಪಟ್ಟಣದ ತೀರ್ಥಹಳ್ಳಿ ರಸ್ತೆಯ ಗುಡ್ ಶೆಫರ್ಡ್ ಚರ್ಚ್ ಮುಂಭಾಗದಲ್ಲಿ ಇಂದು ಮುಂಜಾನೆ 5.40 ರ ಸಮಯದಲ್ಲಿ ಜಾನುವಾರು ಅಡ್ಡ ಬಂದ ಹಿನ್ನಲೆಯಲ್ಲಿ ದಿನಪತ್ರಿಕೆಯನ್ನು ಸಾಗಿಸುತಿದ್ದ ಮಾರುತಿ ಓಮಿನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಉರುಳಿಬಿದ್ದಿದೆ.
ಕಾರಿನಲ್ಲಿ ಚಾಲಕ ಸೇರಿದಂತೆ ಇಬ್ಬರು ಪ್ರಯಾಣಿಸುತಿದ್ದರು ಎಂದು ಹೇಳಲಾಗುತಿದ್ದು , ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
