POSTMANNEWS

ನೈಜ ಸುದ್ದಿ ನೇರ ಬಿತ್ತರ..

ಮದೀನಾ ಕಾಲೋನಿಯಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಹಸು – ಮೂಕಪ್ರಾಣಿಯ ನೆರವಿಗೆ ಧಾವಿಸಿದ ಸ್ಥಳೀಯರು

ಮದೀನಾ ಕಾಲೋನಿಯಲ್ಲಿ ಬಾವಿಗೆ ಬಿದ್ದ ಹಸು – ಸ್ಥಳೀಯ ಯುವಕರು , ಅಗ್ನಿಶಾಮಕ ದಳದಿಂದ ರಕ್ಷಣೆ

ರಿಪ್ಪನ್ ಪೇಟೆ: ಪಟ್ಟಣದ ಮದೀನಾ ಕಾಲೋನಿಯಲ್ಲಿ ಮಂಗಳವಾರ ಬೆಳಗಿನ ಜಾವ ಅಕಸ್ಮಾತ್ ಸಂಭವಿಸಿದ ಘಟನೆಯಲ್ಲಿ ಹಸುವೊಂದು ಬಾವಿಗೆ ಬಿದ್ದು ಆಕಸ್ಮಿಕವಾಗಿ ಪ್ರಾಣಾಪಾಯಕ್ಕೆ ಸಿಲುಕಿತು. ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ತುರ್ತು ಕ್ರಮ ಕೈಗೊಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ, ಸ್ವತಃ ಸಹಕಾರ ನೀಡಿದ ಕಾರಣದಿಂದ ಹಸು ಸುರಕ್ಷಿತವಾಗಿ ಪಾರಾಯಿತು.

ಜುಮ್ಮಾ ಮಸೀದಿ ಹಿಂಭಾಗದ ಪ್ರದೇಶದಲ್ಲಿ ಮೇಯುತ್ತಿದ್ದ ಹಸು, ಅಜಾಗರೂಕತೆಯಿಂದ ಬಾವಿಯೊಳಗೆ ಜಾರಿಬಿದ್ದು ಬಲಹೀನ ಸ್ಥಿತಿಗೆ ತಲುಪಿತು. ಬಾವಿ ಆಳವಾಗಿದ್ದರಿಂದ ಹಸುವನ್ನು ಮೇಲಕ್ಕೆತ್ತುವುದು ಕಷ್ಟಕರವಾಗಿತ್ತು. ಮೊದಲು ಸ್ಥಳೀಯ ಯುವಕರು ಬಾವಿಗೆ ಹಗ್ಗ ಬಿಟ್ಟು ಎಳೆಯಲು ಪ್ರಯತ್ನಿಸಿದರೂ, ಸಮರ್ಪಕ ಸಾಧನಗಳ ಕೊರತೆಯಿಂದ ಸಾಧ್ಯವಾಗಲಿಲ್ಲ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದ್ದು, ಸಿಬ್ಬಂದಿ ವೇಗವಾಗಿ ಸ್ಥಳಕ್ಕಾಗಮಿಸಿದರು.

ಅಗ್ನಿಶಾಮಕ ದಳದ ಸಿಬ್ಬಂದಿ ಪರಿಣತಿಯನ್ನು ಪ್ರದರ್ಶಿಸಿ, ಹಸುವಿನ ದೇಹಕ್ಕೆ ಹಗ್ಗಗಳನ್ನು ಬಿಗಿದುಕೊಂಡು, ಕ್ರಮೇಣ ಬಾವಿಯಿಂದ ಮೇಲಕ್ಕೆತ್ತುವ ಕಾರ್ಯಾಚರಣೆಗೆ ಕೈಹಾಕಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯದ ಪರಿಶ್ರಮದ ನಂತರ ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು. ಪ್ರಾಣಾಪಾಯದಿಂದ ಪಾರಾದ ಹಸುವನ್ನು ಕಂಡು ಅಲ್ಲಿ ನೆರೆದಿದ್ದ ಜನರು ಹರ್ಷ ವ್ಯಕ್ತಪಡಿಸಿದರು.

ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿಗೆ ಸ್ಥಳೀಯ ಯುವಕರಾದ ರಫ಼್ಹೀಕ್ ಖಾಸಿಂಸಾಬ್, ರಾಕೇಶ್, ಹಬೀಬ್, ಮೈದೀನ್ ಸೇರಿದಂತೆ ಹಲವರು ಕೈಜೋಡಿಸಿದ್ದರು. ಅವರ ಧೈರ್ಯ ಹಾಗೂ ಸಹಕಾರವನ್ನು ಸ್ಥಳೀಯರು ಪ್ರಶಂಸಿಸಿದರು.

About The Author

Exit mobile version