ರಿಪ್ಪನ್‌ಪೇಟೆ : ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಟಾಪಿಸಲಾದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸೇವಾ ಸಮಿತಿಯ 58 ನೇ ವರ್ಷದ ಗಣಪತಿ ವಿಸರ್ಜನಾ ಪೂರ್ವ ವೈಭವದ ರಾಜಬೀದಿ ಉತ್ಸವಕ್ಕೆ ಇಂದು ಸಂಜೆ 5.30 ಗಂಟೆಗೆ ಅರಂಭಗೊಂಡಿತು.
ಯುವಕರ ಮಹಿಳೆಯರು ಪುಟಾಣಿ ಮಕ್ಕಳು ವಾದ್ಯಕ್ಕೆ ತಕ್ಕ ಕುಣಿತದೊಂದಿಗೆ ಚಾಲನೆ ರಾಜಬೀದಿ ಉತ್ಸವದಲ್ಲಿ ವಿವಿಧ ಹೆಸರಾಂತ ಜಾನಪದ ಕಲಾತಂಡಗಳಾದ ಡೊಳ್ಳೂ ಕುಣಿತ ತಮಟೆ ಬಡಿತ.ಕೀಲುಕುದುರೆ ಗೊಂಬೆಕುಣಿತ,ನಗಾರಿ ತಟ್ಟಿರಾಯ ತಂಡದವರಿಂದ ವಿವಿಧ ಭಂಗಿಯ ಪ್ರದರ್ಶನದೊಂದಿಗೆ ಘೋಷಣೆಗಳು ಮುಗಿಲು ಮುಟ್ಟಿವೆ. ಅಯೋಧ್ಯೆ ರಾಮಮಂದಿರದ ಟ್ಯಾಬ್ಲೊ ಈ ಬಾರಿಯ ಮೆರವಣಿಗೆಯಲ್ಲಿ ಮನಸೆಳೆಯಿತು.
ಗಣಪತಿಯ ರಾಜಬೀದಿ ಉತ್ಸವ ತಿಲಕ್ ಮಂಟಪದಿಂದ ಹೊರಟ ಶಿವಮೊಗ್ಗ ರಸ್ತೆ ಮಾರ್ಗ ಸಾಗುವ ರಸ್ತೆಯಲ್ಲಿ ತಳಿರು ತೋರಣ ರಂಗೋಲಿಯೊಂದಿಗೆ ಗಣೇಶ ಉತ್ಸವಕ್ಕೆ ಸ್ವಾಗತಿಸುತ್ತಿರುವುದು ಮತ್ತು ಕಲಾತಂಡಗಳ ವೃತ್ಯವನ್ನು ಅಪಾರ ಸಂಖ್ಯೆಯ ಭಕ್ತ ಸಮೂಹ ವೀಕ್ಷಿಸಲು ಕಾತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತು.
ಮೆರವಣಿಗೆ ಮುನ್ನ ಬೃಹತ್ ಬೈಕ್ ರ‍್ಯಾಲಿ :
ಕರ್ನಾಟಕ ಪ್ರಾಂತೀಯ ಹಿಂದು ರಾಷ್ಟಸೇನಾ ಸಮಿತಿಯವರಿಂದ ಬೃಹತ್ ಬೈಕ್ ರ‍್ಯಾಲಿಯೊಂದಿಗೆ ಯುವಕರು ಕೇಸರಿ ದ್ವಜ ಮತ್ತು ಶಾಲು ಹಾಕಿ ಹಿಂದೂ ಭಗವದ್ವಜದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಣಪತಿಯ ಜಯಘೋಷಣೆ ಕೂಗುತ್ತಾ ರ‍್ಯಾಲಿಯೊಂದಿಗೆ ಜನಜಾಗೃತಿ ನಡೆಸಿದರು.
ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟಸೇನಾ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧೀರ್ ಪಿ, ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಅರ್.ಈ.ಈಶ್ವರಶೆಟ್ಟಿ,ಪ್ರಧಾನಕಾರ್ಯದರ್ಶಿ ಮುರುಳಿ ಕೆರೆಹಳ್ಳಿ,ಎಂ.ಬಿ.ಮಂಜುನಾಥ, ಸುರೇಶ್‌ಸಿಂಗ್, ಸುದೀಂದ್ರಪೂಜಾರಿ, ತೀರ್ಥೇಶ್ ಅಡಿಕಟ್ಟು, ರವೀಂದ್ರಕೆರೆಹಳ್ಳಿ, ಆರ್.ರಾಘವೆಂದ್ರ,ಶ್ರೀನಿವಾಸ್ ಅಚಾರ್,ನಿರೂಪ್ ಕುಮಾರ್, ರಾಮಚಂದ್ರ ಬಳೆಗಾರ್ , ಎನ್.ಸತೀಶ್, ಗಣೇಶ್ ಎನ್.ಕಾಮತ್, ಆರ್.ಹೆಚ್.ಶ್ರೀನಿವಾಸ ಅಚಾರ್,ಅಟೋ ಲಕ್ಷಣ,ಎಂ.ಡಿ.ಇಂದ್ರಮ್ಮ,ಜಯಲಕ್ಷಿö್ಮಮೋಹನ್, ಅರ್.ಡಿ.ಶೀಲ, ಅರ್.ಶೈಲಪ್ರಭು, ಹೆಚ್.ಎನ್.ಚೋಳರಾಜ್, ಡಿ.ಈ.ರವಿಭೂಷಣ, ಎಸ್.ದಾನಪ್ಪ,ನಾಗರಾಜ್ ಪವಾರ್, ತುಳೋಜಿರಾವ್, ಕೆ.ವಿ.ಲಿಂಗಪ್ಪ, ಭೀಮರಾಜ್, ವಾಸುಶೆಟ್ಟಿ, ಕೆ.ಎ.ನಾರಾಯಣ, ಶಾಂತಕುಮಾರ, ಯೋಗೇಶ್,ಪುಟ್ಟರಾಜ್, ಸ್ವಾಮಿದೊಡ್ಡಿನಕೊಪ್ಪ, ಹೆಚ್.ಎನ್.ಉಮೇಶ್, ದೇವರಾಜ್ ಪವಾರ್,ಇನ್ನಿತರ ಹಲವರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ,ವೃತ್ತನಿರೀಕ್ಷಕ ಗುರಣ್ಣ ಹೆಬ್ಬಾಳ್,ಪಿಎಸ್‌ಐ ರಾಜುರೆಡ್ಡಿ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿವರ್ಗ ಗ್ರಾಮ ಪಂಚಾಯ್ತಿ ಪಿಡಿಓ ಸಿಬ್ಬಂದಿವರ್ಗ ಇನ್ನಿತರ ಇಲಾಖೆಯ ಅಧಿಕಾರಿಗಳು ಗಣಪತಿ ಮೆರವಣಿಗೆ ಹಿನ್ನಲೇಯಲ್ಲಿ ಪೊಲೀಸ್ ಇಲಾಖೆ ಗೃಹ ರಕ್ಷಕ ದಳ ಪಟ್ಟಣದ ಎಲ್ಲೇಡೆ ಬಿಗಿ ಬಂದೋಬಸ್ತುನೊಂದಿಗೆ ಸಿಸಿಟಿವಿ ಡ್ರೋಣ್ ಕ್ಯಾಮರಗಳಲ್ಲಿ ಹಾಗೂ ಮೆರವಣಿಗೆ ಪ್ರತಿ ಹಂತದಲ್ಲಿ ಸೂಕ್ತ ಪರಿಶೀಲನೆ ನಡೆಸುತ್ತಿರುವುದು ಕಂಡುಬಂತು.
