Headlines

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಭಾರೀ ಟ್ವಿಸ್ಟ್ : ಮಾಸ್ಕ್ ಮ್ಯಾನ್ ಅರೆಸ್ಟ್ – 10 ದಿನ SIT ಕಸ್ಟಡಿಗೆ ನೀಡಿದ ಕೋರ್ಟ್

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಭಾರೀ ಟ್ವಿಸ್ಟ್ : ಮಾಸ್ಕ್ ಮ್ಯಾನ್ ಅರೆಸ್ಟ್ – 10 ದಿನ SIT ಕಸ್ಟಡಿಗೆ ನೀಡಿದ ಕೋರ್ಟ್

ಮಾಸ್ಕ್ ಮ್ಯಾನ ಯಾರು ..!!? ಈತನ ಹಿನ್ನಲೆಯೇನು..!!??

ಧರ್ಮಸ್ಥಳ ಆಗಸ್ಟ್ 23: ಧರ್ಮಸ್ಥಳದಲ್ಲಿ ನೂರಾರು ಜನರನ್ನು ಹೂತು ಹಾಕಿರುವುದಾಗಿ ಹೇಳಿ ಭಾರೀ ಸಂಚಲನ ಸೃಷ್ಟಿಸಿದ್ದ ಅನಾಮಿಕ ವ್ಯಕ್ತಿಯನ್ನೇ, ವಿಶೇಷ ತನಿಖಾ ತಂಡ (ಎಸ್ಐಟಿ) ಬಂಧಿಸಿ ನ್ಯಾಯಲಯದ ಮುಂದೆ ಹಾಜರುಪಡಿಸಲಾಗಿತ್ತು , ಮಾಸ್ಕ್ ಮ್ಯಾನ್  ಚಿನ್ನಯ್ಯನನ್ನು 10 ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ ನೀಡಿ ಬೆಳ್ತಂಗಡಿ  ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಆದೇಶಿದೆ.

ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ನೇತೃತ್ವದ ಪೊಲೀಸ್ ತಂಡ ಆಗಸ್ಟ್ 22 ರಂದೇ ಅನಾಮಿಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿತ್ತು. ಆಗಸ್ಟ್ 23 ರ ಬೆಳಿಗ್ಗೆ ಆತನನ್ನು ಅಧಿಕೃತವಾಗಿ ಬಂಧಿಸಿ ನ್ಯಾಯಲಯದ ಮುಂದೆ ಹಾಜರುಪಡಿಸಿತ್ತು.

ಚಿನ್ನಯ್ಯ ಈ ಹಿಂದೆ ತಾನು ಧರ್ಮಸ್ಥಳದಲ್ಲಿ ಪೌರ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದು, ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿದ್ದ. ಈ ಕುರಿತಂತೆ ತಲೆ ಬುರುಡೆಯೊಂದನ್ನು ತಂದಿದ್ದ. ನ್ಯಾಯಾಲಯಕ್ಕೆ ಸ್ವಯಂಪ್ರೇರಿತ ದೂರು ಹೇಳಿಕೆ ದಾಖಲಿಸಿದ್ದನು , ಈತನ ಹೇಳಿಕೆಯು ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ನಡುವೆ ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ರಚನೆ ಮಾಡಿತ್ತು. ಅನಾಮಿಕ ಹೇಳಿದಂತೆ ಧರ್ಮಸ್ಥಳದ ವಿವಿಧೆಡೆ ಎಸ್ಐಟಿ ತಂಡ ಶೋಧ ಕಾರ್ಯಾಚರಣೆ ನಡೆಸಿತ್ತು.13 ಕಡೆ ಗುಂಡಿ ತೆಗೆದು ಪರಿಶೀಲಿಸಿತ್ತು. ಆದರೆ ಒಂದು ಪಾಯಿಂಟ್ ಹೊರುತುಪಡಿಸಿ, ಉಳಿದೆಡೆ ಅಸ್ಥಿಪಂಜರಗಳು ದೊರಕಿರಲಿಲ್ಲ. ಎಸ್ಐಟಿ ತನಿಖೆ ವೇಳೆ ಅನಾಮಿಕನ ಹೇಳಿಕೆಯ ಬಗ್ಗೆ ಅನುಮಾನ ವ್ಯಕ್ತವಾದ ಕಾರಣದ ಹಿನ್ನೆಲೆಯಲ್ಲಿ, ಈತನನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಿತ್ತು, ಎಸ್ ಐಟಿ ಮನವಿ ಮೇರೆಗೆ ಬೆಳ್ತಂಗಡಿ  ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ನ್ಯಾಯಾಧೀಶ ವಿಜಯೇಂದ್ರ ಅವರು ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು 10ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.

ಮಾಸ್ಕ್ ಮ್ಯಾನ್ ಯಾರು !!? ಈತನ ಹಿನ್ನಲೆಯೇನು..!!?

ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಆರೋಪವು ಈಗ ರಾಜಕೀಯ ಬಿರುಕು ಮೂಡಿಸಿದ್ದು, ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದೆ. ಈ ನಡುವೆ ಸಾಕ್ಷಿದಾರನಾಗಿ ಬೆಳೆದು ಬಂದಿದ್ದ “ಅನಾಮಿಕ ಮಾಸ್ಕ್ ಮ್ಯಾನ್” ನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿರುವುದು ದೊಡ್ಡ ಬೆಳವಣಿಗೆಯಾಗಿದೆ.

ಬಂಧಿತನನ್ನು ಸಿಎನ್. ಚಿನ್ನಯ್ಯ ಅಲಿಯಾಸ್ ಚೆನ್ನ ಎಂದು ಗುರುತಿಸಲಾಗಿದ್ದು, ಆತ ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದವನು ಎಂದು ದಾಖಲೆ ಸಮೇತ ಎಸ್‌ಐಟಿ ದೃಢಪಡಿಸಿದೆ. ಧರ್ಮಸ್ಥಳದ ಸುತ್ತಲಿನ ವಿವಾದದ ಕೇಂದ್ರಬಿಂದುವಾಗಿದ್ದ ಈ ಮಾಸ್ಕ್ ಮ್ಯಾನ್, ಅಕ್ರಮವಾಗಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ನೀಡಿದ ಹೇಳಿಕೆ ದೇಶದಾದ್ಯಂತ ಸಂಚಲನ ಮೂಡಿಸಿತ್ತು.

ಸರ್ಕಾರ ತನಿಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ, ಚಿನ್ನಯ್ಯ ತೋರಿಸಿದ 17 ಪಾಯಿಂಟ್‌ಗಳಲ್ಲಿ ಶೋಧ ನಡೆಸಿದ್ದರೂ, ಅವನು ಹೇಳಿದಂತೆ ಅಸ್ಥಿಪಂಜರಗಳು ಪತ್ತೆಯಾಗಲಿಲ್ಲ. ಹೀಗಾಗಿ, “ಈತ ಯಾರು? ಈತನ ಹಿನ್ನೆಲೆ ಏನು? ಉದ್ದೇಶವೇನು?” ಎಂಬ ಪ್ರಶ್ನೆಗಳು ಸುತ್ತಿಕೊಂಡಿದ್ದವು.

ಗ್ರಾಮಸ್ಥರಾದ ನಿಂಗರಾಜು ಮತ್ತು ಶಂಕರೇಗೌಡ ಹೇಳುವಂತೆ, ಚಿನ್ನಯ್ಯ ತಮ್ಮ ಗ್ರಾಮದಲ್ಲೇ ಹುಟ್ಟಿ ಬೆಳೆದವನಾಗಿದ್ದು, ಆತ ಧರ್ಮಾಧಿಕಾರಿಗಳ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ, ಮಾಸ್ಕ್ ಮ್ಯಾನ್‌ನ ಮೊದಲ ಪತ್ನಿ ಮಾಧ್ಯಮದ ಮುಂದೆ ಬಂದು, “ನಾನು ಧರ್ಮಸ್ಥಳದಲ್ಲಿ ಏಳು ವರ್ಷ ಅವನ ಜೊತೆ ವಾಸಿಸಿದ್ದೆ, ಆದರೆ ಅವನು ಹೇಳಿದಂತಹ ಘಟನೆಗಳು ನಡೆದಿಲ್ಲ” ಎಂದು ಸ್ಫೋಟಕ ಹೇಳಿಕೆ ನೀಡಿದ್ದರು. ಪತ್ನಿಯ ಪ್ರಕಾರ, ಧರ್ಮಸ್ಥಳದಲ್ಲಿಯೇ ಅವನು ತಮಿಳುನಾಡು ಮೂಲದ ಮಹಿಳೆಯೊಂದರ ಜೊತೆ ಸಂಬಂಧ ಬೆಳೆಸಿ, ಆಕೆಯನ್ನು ಎರಡನೇ ಮದುವೆಗೆ ಒಯ್ಯಲು ತನ್ನ ಮೊದಲ ಪತ್ನಿಗೆ ಹಿಂಸೆ ನೀಡಿದ್ದಾನೆ.

ಎಸ್‌ಐಟಿ ವಿಚಾರಣೆಯಲ್ಲಿ ಚಿನ್ನಯ್ಯ, ತಾನು ಎರಡು ವರ್ಷ ತಮಿಳುನಾಡಿನ ಈರೋಡ್ ಜಿಲ್ಲೆಯ ಚಿಕ್ಕರಸಿನಪಾಳ್ಯದಲ್ಲಿ ವಾಸಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಉಜಿರೆಗೆ ಮರಳಿ, ಸ್ಥಳೀಯ ಪಂಚಾಯತ್‌ನ ಸಫಾಯಿ ಕರ್ಮಚಾರಿ ಕೆಲಸ ಸೇರಿ, ಅಲ್ಲಿ ಜಯಂತ್ ಟಿ ಎಂಬವನ ಪರಿಚಯ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಹೊರಬಂದಿದೆ.

ಪ್ರಕರಣದಲ್ಲಿ ಚಿನ್ನಯ್ಯನನ್ನು ಮೂಲತಃ ಅನಾಮಿಕ ಸಾಕ್ಷಿದಾರನಾಗಿ ಪರಿಗಣಿಸಿ, ಸಾಕ್ಷ್ಯ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆ ನೀಡಲಾಗುತ್ತಿತ್ತು. ಆದರೆ ಸತತ ವಿಚಾರಣೆಯ ಬಳಿಕ ಅವನ ನಿಜಸ್ವರೂಪ ಬಯಲಾಗಿದ್ದು, ಇದೀಗ ಅಧಿಕೃತವಾಗಿ ಬಂಧಿಸಲಾಗಿದೆ.

Exit mobile version