RIPPONPETE | ಸಿಕ್ಕ ಚಿನ್ನದ ಸರವನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಶಿಕ್ಷಕಿ
ರಿಪ್ಪನ್ ಪೇಟೆ: ಕೋಡೂರು ಬಳಿಯ ಅಮ್ಮನಘಟ್ಟ ಬಸ್ ನಿಲ್ದಾಣದಲ್ಲಿ ಚಿನ್ನದ ಚೈನ್ ಸರವೊಂದು ಶಿಕ್ಷಕಿ ಪಾರ್ವತಿಬಾಯಿ ಅವರಿಗೆ ಸಿಕ್ಕಿದ್ದು, ಅವರು ಅದನ್ನು ತಕ್ಷಣವೇ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಪಿಎಸ್‌ಐ ರಾಜುರೆಡ್ಡಿ ಅವರ ಮೂಲಕ ಹಸ್ತಾಂತರಿಸುವ ಮೂಲಕ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಈ ಚಿನ್ನದ ಸರ ಮಲ್ಲಾಪುರದ ಶಿವಕುಮಾರ್ ಅವರಿಗೆ ಸೇರಿದೆ ಎಂದು ತಿಳಿದುಬಂದಿದ್ದು, ಇಂದು ಠಾಣೆಯಲ್ಲಿ ಸಂಬಂಧಿತ ವಾರಸುದಾರರಿಗೆ ಸರವನ್ನು ಹಿಂತಿರುಗಿಸಲಾಯಿತು.
ಈ ಸಂದರ್ಭದಲ್ಲಿ ಕೋಡೂರು ಗ್ರಾಮ ಪಂಚಾಯಿತ್ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ ಹಾಗೂ ಠಾಣೆಯ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.