Headlines

ಹೊಸನಗರ ತಾಲೂಕಿನಾದ್ಯಂತ ಮಸೀದಿಗಳಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಹೊಸನಗರ ತಾಲೂಕಿನಾದ್ಯಂತ ಮಸೀದಿಗಳಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಹೊಸನಗರ:- 79ನೇ ಸ್ವಾತಂತ್ರ್ಯೋತ್ಸವವನ್ನು ತಾಲೂಕಿನ ಹಲವು ಮಸೀದಿಗಳಲ್ಲಿ ಸಂಭ್ರಮ ಹಾಗೂ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು.

ರಿಪ್ಪನ್ ಪೇಟೆ

ರಿಪ್ಪನ್ ಪೇಟೆ ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಅಧ್ಯಕ್ಷರಾದ ಹಸನಬ್ಬ ಬಾವ ಬ್ಯಾರಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.

ಈ ಸಂಧರ್ಭದಲ್ಲಿ ಧರ್ಮಗುರುಗಳಾದ ಮುನೀರ್ ಸಖಾಫಿ ಗ್ರಾಪಂ ಸದಸ್ಯ ಆಸೀಫ್ ಹಾಗೂ ಇನ್ನಿತರರು ಇದ್ದರು

ನಿಟ್ಟೂರು

ನಿಟ್ಟೂರು ಜುಮ್ಮಾ ಮಸೀದಿಯ ಧರ್ಮಗುರುಗಳಾದ ಉಬೇದುಲ್ಲಾ ಸಖಾಫಿ ಮಸೀದಿಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ   ” ಈ ದೇಶದ  ಅನೇಕ ಮಹಾನ್ ನಾಯಕರುಗಳ ತ್ಯಾಗ ,ಬಲಿದಾನ, ಹೋರಾಟ ಮಾಡುವುದರ ಮೂಲಕ ಸ್ವಾತಂತ್ರ್ಯ ಲಭಿಸಿದೆ, ಮಹಾತ್ಮ ಗಾಂಧೀಜಿ, ನೆಹರು, ಮುಂತಾದ ನಾಯಕರುಗಳ ಕನಸಿನಂತೆ ಸಹೋದರತೆ ಭ್ರಾತೃತ್ವ ,ದೇಶದ ಐಕ್ಯತೆಗಾಗಿ ನಾವೆಲ್ಲರೂ ಜಾತಿ ಧರ್ಮಗಳೊಂದಿಗೆ, ಸೌಹಾರ್ದತೆಯನ್ನು ಬದುಕಬೇಕೆಂದು” ಸಮಾಜದ ಸದಸ್ಯರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಎಚ್ ಅಬ್ದುಲ್ಲಾ ಹಾಗೂ ಅಬ್ದುಲ್ ರೆಹಮಾನ್ ಹಾಗೂ ಮೊಹಮ್ಮದ್ ಅಸ್ಲಾಂ ಜಯರಾಮ್ ಶೆಟ್ಟಿ ಮಂಜುನಾಥ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

ಹೊಸನಗರ

ಹೊಸನಗರ ಪಟ್ಟಣದ ಬದ್ರಿಯಾ ಹಾಗೂ ಜಾಮೀಯ ಜುಮ್ಮಾ ಮಸೀದಿಯಲ್ಲಿ ಸಡಗರ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಹೊಸನಗರ ಬದ್ರಿಯಾ ಜುಮ್ಮ ಮಸೀದಿ ಅಧ್ಯಕ್ಷರಾದ ಇಸಾಕ್  ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಮೌಳಿ, ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಎಂವಿ ಜಯರಾಮ್ , ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಎಂ ಎನ್ ಸುಧಾಕರ್, ಪಟ್ಟಣ ಪಂಚಾಯತ್ ಸದಸ್ಯರಾದ ಅಶ್ವಿನಿ ಕುಮಾರ್ ಹಾಗೂ ಮಸೀದಿಯ ಧರ್ಮ ಗುರುಗಳು ಉಪಸ್ಥಿತರಿದ್ದರು

ಜಯನಗರ

ಹೊಸನಗರ ತಾಲೂಕಿನ ಜಯನಗರದ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಆವರಣದಲ್ಲಿ ಮಸೀದಿಯ ಧರ್ಮಗುರುಗಳು ಧ್ವಜಾರೋಹಣ ನೆರವೇರಿಸಿದರು.

ಬಟ್ಟೆಮಲ್ಲಪ್ಪ

ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಜುಮ್ಮಾ ಮಸೀದಿಯಲ್ಲಿ ಸಡಗರ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಮಸೀದಿ ಸಮಿತಿ ಅಧ್ಯಕ್ಷರಾದ ಸಾಧಿಕ್ ಕಚ್ಚಿಗೆಬೈಲ್ ಧ್ವಜಾರೋಹಣ ನೆರವೇರಿಸಿದರು.

ನಗರ

ಹೊಸನಗರ ತಾಲೂಕಿನ ನಗರದ ಸುಲ್ತಾನ್ ಜುಮ್ಮಾ ಮಸೀದಿಯ ಆವರಣದಲ್ಲಿ ಮಸೀದಿಯ ಧರ್ಮಗುರುಗಳಾದ ಅಶ್ರಫ್ ಇಮಾಮಿ ಧ್ವಜಾರೋಹಣ ನೆರವೇರಿಸಿದರು.

Exit mobile version