Headlines

ಧರ್ಮಸ್ಥಳ ಅನನ್ಯ ಭಟ್ ಪ್ರಕರಣ – ರಿಪ್ಪನ್ ಪೇಟೆಗೆ ಎಸ್ಐಟಿ ತಂಡ ಭೇಟಿ..!!? ಸುಜಾತ ಭಟ್ ಜಾಡು ಪತ್ತೆಗೆ ಮುಂದಾಯ್ತಾ SIT!!???

ಧರ್ಮಸ್ಥಳ ಅನನ್ಯ ಪ್ರಕರಣ – ರಿಪ್ಪನ್ ಪೇಟೆಗೆ ಎಸ್ಐಟಿ ತಂಡ ಭೇಟಿ..!!? ಸುಜಾತ ಭಟ್ ಜಾಡು ಪತ್ತೆಗೆ ಮುಂದಾಯ್ತಾ SIT!!???

ರಿಪ್ಪನ್ ಪೇಟೆ : ಧರ್ಮಸ್ಥಳದ ಅನನ್ಯ ಭಟ್ ಪ್ರಕರಣ ರಾಜ್ಯದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೂ ರಿಪ್ಪನ್ ಪೇಟೆಗೂ ಲಿಂಕ್ ಇರುವ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ಹಲವು ಸಂಚಲನಕಾರಿ ಸಂಗತಿಗಳು ಬೆಳಕಿಗೆ ತಂದಿತ್ತು,ಹಾಗೇಯೆ ತನಿಖಾ ಪ್ರಕ್ರಿಯೆಯೂ ತೀವ್ರಗತಿಯಲ್ಲಿ ಸಾಗುತ್ತಿದೆ. ಇದೀಗ ಈ ಪ್ರಕರಣದ ತನಿಖೆಗೆ ನಿಯೋಜಿಸಲ್ಪಟ್ಟ ವಿಶೇಷ ತನಿಖಾ ತಂಡ (SIT) ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೂಲಗಳ ಪ್ರಕಾರ, 1999ರಿಂದ 2007ರವರೆಗೆ ರಿಪ್ಪನ್ ಪೇಟೆಯಲ್ಲಿ ಸುಜಾತಾ ಭಟ್ ವಾಸವಿದ್ದರು. ಧರ್ಮಸ್ಥಳ ಪ್ರಕರಣದಲ್ಲಿ ಆಕೆಯ ಪಾತ್ರವೇನು, ನಿಜವಾಗಿಯೂ ಆಕೆಯ ಮಗಳು ಅನನ್ಯ ಎಂಬವರು ಇದ್ದರಾ ಎಂಬ ಪ್ರಶ್ನೆಗಳ ಸುತ್ತಲೇ ವಿವಾದ ತಿರುಗುತ್ತಿದೆ. ಸ್ಥಳೀಯ ಮೂಲಗಳು ಸುಜಾತಾ ಭಟ್ ರಿಪ್ಪನ್ ಪೇಟೆಯಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದರ ಬಗ್ಗೆ ಹಲವು ರೀತಿಯ ಮಾಹಿತಿ ಹಂಚಿಕೊಂಡಿದ್ದು, SIT ಅದನ್ನು ಪರಿಶೀಲಿಸುವ ನಿಟ್ಟಿನಲ್ಲಿ ಪಟ್ಟಣಕ್ಕೆ ಭೇಟಿ ನೀಡಿದೆ ಎಂದು ತಿಳಿದುಬಂದಿದೆ.

ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಸಿಪಿಐ ಮಂಜುನಾಥ್ ಗೌಡ ನೇತ್ರತ್ವದ SIT ತಂಡ ಭೇಟಿ ನೀಡಿ ಸುಜಾತ ಭಟ್ ಕುಟುಂಬ ಹಿನ್ನೆಲೆಯ ಬಗ್ಗೆ ವಿವರ ಸಂಗ್ರಹಿಸುತ್ತಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಯಾರು ಈ ಸುಜಾತ ಭಟ್..!!???

2003ರಲ್ಲಿ ಧರ್ಮಸ್ಥಳಕ್ಕೆ ಸ್ನೇಹಿತೆಯರೊಂದಿಗೆ ಬಂದಿದ್ದ ತನ್ನ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಾಳೆ ಹಾಗೂ ಆಕೆಯ ಮೇಲೆ ಅತ್ಯಾಚಾರವಾಗಿರಬಹುದು  ಎಂದು ಸುಜಾತ ಭಟ್ ದೂರು ಸಲ್ಲಿಸಿದ್ದಾರೆ ಆ ಸಂಧರ್ಭದಲ್ಲಿ ತಾನು ಕೋಲ್ಕತ್ತಾದಲ್ಲಿ ಸಿಬಿಐ ಸ್ಟೇನೋಗ್ರಾಫರ್ ಆಗಿ ಕೆಲಸಮಾಡಿ, ವಿಆರ್‌ಎಸ್ ತೆಗೆದುಕೊಂಡ ನಂತರ 2004ರಲ್ಲಿ ಬೆಂಗಳೂರಿಗೆ ಬಂದು ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿ ಜೀವನ ನಡೆಸಿದ್ದೇನೆ ಎಂಬ ಮಾಹಿತಿಯನ್ನು ನೀಡಿದ್ದಾರೆ.ಆದರೆ ನಿಖರವಾಗಿ ಆ ಅವಧಿಯಲ್ಲಿ ಅವರು ಬೆಂಗಳೂರಿನಲ್ಲಿ ಇದ್ದರಾ, ಕೋಲ್ಕತ್ತಾದಲ್ಲಿದ್ದರಾ ಅಥವಾ ಶಿವಮೊಗ್ಗದಲ್ಲಿದ್ದರಾ ಎಂಬುದನ್ನು ಬೆನ್ನತ್ತಿ ಹೊರಟ ಪೋಸ್ಟ್ ಮ್ಯಾನ್ ನ್ಯೂಸ್ ಗೆ ಶಾಕಿಂಗ್ ವಿಚಾರಗಳು ಕಾದಿದ್ದವು..

ಮೂಲಗಳ ಪ್ರಕಾರ ಸುಜಾತ ಭಟ್ 1999ರಿಂದ 2007 ರವರೆಗೆ ರಿಪ್ಪನ್ ಪೇಟೆಯ ಹೊಸನಗರ ರಸ್ತೆಯ ಜಿಎಸ್ ಬಿ ಕಲ್ಯಾಣ ಮಂಟಪದ ಮುಂಭಾಗದ ಮನೆಯ ನಿವಾಸಿ ಪ್ರಭಾಕರ್ ಬಾಳಿಗ @ ನಾಯಿ ಪ್ರಭಾಕರ್ ಜೊತೆ ವಾಸವಾಗಿದ್ದರು. ಹೌದು  ಉಡುಪಿಯಲ್ಲಿ ಬಸ್ ಏಜೆಂಟ್ ಆಗಿದ್ದ ಪ್ರಭಾಕರ್ ಬಾಳಿಗ ಅವರಿಗೆ ಪರಿಚಯವಾದ ಸುಜಾತಾ ಭಟ್, ಪ್ರಭಾಕರ್ ಅವರ ತಾಯಿಯನ್ನು ನೋಡಿಕೊಳ್ಳಲು ರಿಪ್ಪನ್‌ಪೇಟೆಗೆ ಬಂದರು. ಈ ಸಮಯದಲ್ಲಿ ಪ್ರಭಾಕರ್ ಅವರ ಮೊದಲ ಪತ್ನಿ ಮತ್ತು ಮಗಳು ಅವರನ್ನು ಬಿಟ್ಟುಹೋಗಿದರು. ವಿಚ್ಛೇದನ ಪಡೆಯದೇ, 1999ರಿಂದ 2007ರವರೆಗೆ ಸುಜಾತಾ ಭಟ್ ಮತ್ತು ಪ್ರಭಾಕರ್ ಬಾಳಿಗ ಒಟ್ಟಿಗೆ ವಾಸಿಸಿದ್ದರು. ಮದುವೆಯಾಗದೇ ಲಿವ್-ಇನ್‌ನಲ್ಲಿ ಇದ್ದ ಇವರ ಸಂಬಂಧಕ್ಕೆ ಇಡೀ ರಿಪ್ಪನ್‌ಪೇಟೆಯೇ ಸಾಕ್ಷಿ.

ಆದರೆ, ಈ ಕಥೆಯಲ್ಲಿ ಒಂದು ದೊಡ್ಡ ಗೂಢಚರಿತ್ರೆ—ಸುಜಾತಾ ಭಟ್ ಅವರ ಮಗಳ ಇರುವಿಕೆಯ ಬಗ್ಗೆ , ಸುಜಾತ ಭಟ್ ಮಾತಿನ ಪ್ರಕಾರ ಮಗಳು ಅನನ್ಯಾ ಭಟ್ ಇದ್ದಾಳೆ, ಆದರೆ ಸ್ಥಳೀಯರು ಅವರಿಗೆ ಮಕ್ಕಳಿರಲಿಲ್ಲವೆಂದು ದೃಢಪಡಿಸುತ್ತಿದ್ದಾರೆ. “ನಾವು ಸುಜಾತಾ ಭಟ್ ಅವರನ್ನು ನೋಡಿದ್ದೇವೆ, ಅವರಿಗೆ ಮಕ್ಕಳಿರಲಿಲ್ಲ,” ಎಂದು ಪ್ರಭಾಕರ್ ಬಾಳಿಗ ಸ್ನೇಹಿತ ಸಹಪಾಠಿ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಹೇಳುತ್ತಾರೆ.

ಪ್ರಭಾಕರ್-ಸುಜಾತಾ ಜೋಡಿ ಬೀದಿ ನಾಯಿಗಳನ್ನು ಸಾಕಿ, ಅವುಗಳನ್ನೇ ತಮ್ಮ ಮಕ್ಕಳೆಂದು ಕರೆಯುತ್ತಿದ್ದರು ಈ ಬಗ್ಗೆ ಆ ಸಂಧರ್ಭದಲ್ಲಿ ಹೊಸನಗರ ತಾಲೂಕಿನಲ್ಲಿ ಪ್ರಖ್ಯಾತಿಯಾಗಿದ್ದ ಕಮಲವಾಣಿ ಪತ್ರಿಕೆಯಲ್ಲಿ 2003 ರ ವಿಶೇಷ ಸಂಚಿಕೆಯಲ್ಲಿ ಈ ಬಗ್ಗೆ ಲೇಖನ ಸಹ ಪ್ರಕಟಿಸಲಾಗಿತ್ತು ಹಾಗೇಯೇ ಸುಧಾ ವಾರ ಪತ್ರಿಕೆಯಲ್ಲಿ 2002 ರ ಸೆಪ್ಟೆಂಬರ್ ನಲ್ಲಿ ಹವ್ಯಾಸಿ ಬರಹಗಾರ ಅರುಣ್ ಕಾಳಮುಖಿ ಈ ದಂಪತಿಗಳ ಬಗ್ಗೆ ಲೇಖನ ಬರೆದಿದ್ದರು ಇಲ್ಲಿಯೂ ಇವರಿಗೆ ಮಕ್ಕಳಿಲ್ಲದ ಕಾರಣ ಬೀದಿನಾಯಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿದ್ದರು.

2009ರಲ್ಲಿ ಪ್ರಭಾಕರ್ ಬಾಳಿಗ ನಿಧನರಾದರು, ಆದರೆ ಅವರು ಸಾಯುವ ಎರಡು ವರ್ಷ ಮೊದಲೇ ಸುಜಾತಾ ಅವರನ್ನು ಬಿಟ್ಟುಹೋದರು. ಮಧ್ಯದಲ್ಲಿ, ಸುಜಾತಾ ಭಟ್ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಒತ್ತಾಯ ಬಂದರೂ, ಅವರು ನಿರಾಕರಿಸಿದ್ದರು ಎಂದು ನೆರೆ ಮನೆಯವರು ಹಾಗೂ ಜಿಎಸ್ ಬಿ ಸಮಾಜದ ಮುಖಂಡ ಹರೀಶ್ ಪ್ರಭು ಮಾಹಿತಿ ನೀಡುತ್ತಾರೆ.

Exit mobile version