Headlines

ತೀರ್ಥಹಳ್ಳಿಯಲ್ಲಿ ಲಾರಿ ಮಾಲೀಕ ನೇಣು ಬಿಗಿದುಕೊಂಡು ಸಾವು!

ತೀರ್ಥಹಳ್ಳಿಯಲ್ಲಿ ಮತ್ತೊಬ್ಬ ಲಾರಿ ಮಾಲೀಕ ನೇ*ಣಿಗೆ ಶರಣು!

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿಯ ಲಾರಿ ಮಾಲೀಕರೊಬ್ಬರು ಮಂಗಳವಾರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಲಾರಿ ಮಾಲೀಕರದ ಮೇಗರವಳ್ಳಿಯ ಮಂಜುನಾಥ್ (42 ) ಸಾಲಬಾದೆಯಿಂದ ಮನನೊಂದು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಗೆ ಶರಣಾಗಿದ್ದಾರೆ.

ಇವರು ಅವಿವಾಹಿತರಾಗಿದ್ದು ಎನ್ನಲಾಗಿದ್ದು ಸಾವಿಗೆ ನಿಖರವಾದ ಮಾಹಿತಿ ಪೊಲೀಸ್ ಮಹಜರಿನ ನಂತರ ತಿಳಿದು ಬರ ಬೇಕಿದೆ.

ಇತ್ತೀಚಿಗೆ ಮೇಲಿನಕುರುವಳ್ಳಿಯಲ್ಲೂ ಇದೆ ರೀತಿ ಪ್ರಕರಣ ನಡೆದಿತ್ತು. ಒಂದೇ ತಿಂಗಳಲ್ಲಿ ಇದು ಎರಡನೇ ಪ್ರಕರಣ ಆಗಿದೆ.

Exit mobile version