ರಿಪ್ಪನ್‌ಪೇಟೆ ವಿವಿಧೆಡೆ 79ನೇ ಸ್ವಾತಂತ್ಯ ಸಂಭ್ರಮ
ರಿಪ್ಪನ್ ಪೇಟೆ : ಪಟ್ಟಣದಲ್ಲಿ 79ನೇ ಸ್ವಾತಂತ್ಯ್ಯೋತ್ಸವ ಸಂಭ್ರಮ ಸಡಗರದೊಂದಿಗೆ ವಿವಿಧೆಡೆಯಲ್ಲಿ ಜರುಗಿತು.
ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ರಾಜುರೆಡ್ಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಜಪ್ಪ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ.ಆಂಜನೇಯ , ನಾಡ ಕಛೇರಿಯಲ್ಲಿ ಉಪತಹಶೀಲ್ದಾರ್ ಗೌತಮ್, ಬಿ.ಸಿ.ಎಂ ವಸತಿ ನಿಲಯದಲ್ಲಿ ಮೇಲ್ವಿಚಾರಕಿ ಸುಮಿತ್ರಬಾಯಿ, ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಸಂತೋಷ, ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್.ಸಿ,ಎಸ್.ಟಿ. ವಸತಿ ಶಾಲೆಯಲ್ಲಿ ಮೇಲ್ವಿಚಾರಕ ರಾಘವೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಪ್ರಾಚಾರ್ಯ ಪ್ರೋ.ವೀರೂಪಾಕ್ಷಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಕೃಷ್ಣಮೂರ್ತಿ, ಸರ್ಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಪ್ಪ ಡಿ, ಪಶು ಆಸ್ಪತ್ರೆಯಲ್ಲಿ ಹೊಸನಗರ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ಕೆ.ಎಂ.ನಾಗರಾಜ್, ಮೇರಿಮಾತಾ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿ ಪಾತಿಮಾ, ಗುಡ್ ಶಫಡ್ ಚರ್ಚ್‌ನಲ್ಲಿ ಜೆಸ್ಮಿನ್, ಶ್ರೀಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಮಳಕೊಪ್ಪ ಈಶ್ವರ ಮತ್ತು ಹೇಮರಾಜ್, ರೋಟರಿ ಕ್ಲಬ್ ಅಧ್ಯಕ್ಷ ಎಂ.ಕೃಷ್ಣರಾಜ್, ಜುಮ್ಮಾ ಮಸೀದಿಯಲ್ಲಿ ಅಧ್ಯಕ್ಷ ಹಸನಬ್ಬ , ಮೆಸ್ಕಾಂ ಕಛೇರಿಯಲ್ಲಿ ಅಭಿಯಂತರರಾದ ಅಶ್ವಲ್ , ಗೃಹರಕ್ಷಕ ಕಛೇರಿಯಲ್ಲಿ ಕಮಾಂಡೆಂಟ್ ಶಶಿಕುಮಾರ್ ಧ್ವಜಾರೋಹಣ ನೆರವೇರಿಸಿದರು.ನಂತರ ಶಾಲಾ ಮಕ್ಕಳ ಪಥಸಂಚಲನವು ಸುರಿವ ಮಳೆಯಲ್ಲಿಯೂ ಯಶಸ್ವಿಯಾಗಿ ಜರುಗಿತು.
ಶಾಂತಿ ಸೌಹಾರ್ಧತೆಯ ಜೀವನ ಅಗತ್ಯ – ಹೊಂಬುಜ ಶ್ರೀ
ದೇಶದಲ್ಲಿ ಶಾಂತಿ ಸೌಹಾರ್ದತೆ ಸಹಮತದ ಜೀವನ ವರ್ತಮಾನದ ಅಗತ್ಯವಾಗಿದ್ದು. ಧಾರ್ಮಿಕ ಕ್ಷೇತ್ರವನ್ನು ಬೆಂಬಿಡದೆ ಕಾಡುತ್ತಿರುವ ಮತೀಯ ಶಕ್ತಿಗಳಲ್ಲಿ ಸದ್ಬುದ್ದಿ ದೊರೆತು ಜಗತ್ತಿನಲ್ಲಿ ಶಾಂತಿ ಮೇಳೈಸುವಂತಾಗಲಿ ಎಂದು ಹೊಂಬುಜ ಜೈನಮಠದ ಪೀಠಾಧಿಕಾರಿ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರದ ಅವರಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಹುನ್ನಾರ ಅವ್ಯಾಹತವಾಗಿ ನಡೆಯುತ್ತಿದ್ದು ದೇಶದ ವಿಭಜನೆಯ ಹಾದಿಯತ್ತ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ದುಷ್ಟ ಶಕ್ತಿಗಳನ್ನು ಧಮನ ಮಾಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಟ್ಟಿ ನಿಲುವು ತಾಳಬೇಕು ಎಂದರು.
