January 11, 2026

ಹೋಟೆಲ್‌ ಗೆ ಗೂಗಲ್ ರಿವ್ಯೂ ಹೆಸರಲ್ಲಿ ಯುವಕನಿಗೆ 26 ಲಕ್ಷ ರೂ. ವಂಚನೆ

ಹೋಟೆಲ್‌ ಗೆ ಗೂಗಲ್ ರಿವ್ಯೂ ಹೆಸರಲ್ಲಿ ಯುವಕನಿಗೆ 26 ಲಕ್ಷ ರೂ. ವಂಚನೆ

ಗೂಗಲ್‌ನಲ್ಲಿ ಹೊಟೇಲ್‌ಗ‌ಳಿಗೆ ರಿವ್ಯೂ ಬರೆದರೆ ಹಣ ಸಂಪಾದಿಸಬಹುದೆಂದು ನಂಬಿಸಿ ಯುವಕನಿಗೆ 25.92 ಲಕ್ಷ ರೂ. ವಂಚಿಸಿರುವ ಬಗ್ಗೆ ಶಿವಮೊಗ್ಗದಲ್ಲಿ ದೂರು ದಾಖಲಾಗಿದೆ.

ಟೆಲಿಗ್ರಾಂ ಗ್ರೂಪೊಂದಕ್ಕೆ ಸೇರಿದ್ದ ಶಿವಮೊಗ್ಗದ ಯುವಕನಿಗೆ ಹೊಟೇಲ್‌ ರಿವಿವ್ಯೂ ಮಾಡಿದರೆ ಅಧಿಕ ಲಾಭಾಂಶ ಸಂಪಾದಿಸಬಹುದು ಎಂದು ನಂಬಿಸಲಾಗಿತ್ತು.

ರಿವ್ಯೂ ಬರೆಯಲು ಸೇರಿ ನಾನಾ ಕಾರಣಕ್ಕೆ ಯುವಕನಿಂದ ಹಣ ವರ್ಗಾಯಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಜೂ.11ರಿಂದ ಜು.8ರ ವರೆಗೆ ಯುವಕ ತನ್ನ ಖಾತೆಯಿಂದ ವಂಚಕರ ಖಾತೆಗೆ ಹಣ ವರ್ಗಾಯಿಸಿದ್ದಾನೆ. ಕೊನೆಗೆ ಲಾಭಾಂಶ ದೊರೆಯದೆ, ತಾನು ಕೊಟ್ಟ ಹಣ ಹಿಂತಿರುಗದ ಹಿನ್ನೆಲೆಯಲ್ಲಿ ವಂಚನೆಗೊಳಗಾಗಿರುವುದು ಅರಿವಾದ ಬಳಿಕ ಶಿವಮೊಗ್ಗದ ಸಿಇಎನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

About The Author

Exit mobile version