ಮೊಬೈಲ್‌ಗೆ ಬಂತು ಎರಡು ಮೆಸೇಜ್… ಓಟಿಪಿ ಕೇಳಲೇ ಇಲ್ಲ, 5.70 ಲಕ್ಷ ಹೋಯ್ತು!”
ತಕ್ಷಣವೇ ಬ್ಯಾಂಕ್‌ಗೆ ಧಾವಿಸಿದ ಅವರು, ಬ್ಯಾಂಕ್ ಸಿಬ್ಬಂದಿಯಿಂದ ಹಣ ಕಟ್ ಆಗಿರುವುದನ್ನು ದೃಢೀಕರಣ ಪಡೆದರು. ಆದರೆ, ಈ ಎಲ್ಲ ಹಂತಗಳಲ್ಲಿ ಒಂದೂ ಸಲ OTP ಕೇಳಲಾಗಿರಲಿಲ್ಲ ಎಂಬುದು ಒಂದೆಡೆಯಾದರೆ OTP ಇಲ್ಲದೆಯೂ ಹಣ ವರ್ಗಾಯಿಸಬಹುದಾ ಎನ್ನುವುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ಶಿವಮೊಗ್ಗ: ಸೈಬರ್ ಕಳ್ಳರು ಈಗ ಹಳೆ ನಾಟಕವನ್ನೇ ಹೊಸ ರೀತಿಯಲ್ಲಿ ನಡೆಸುತ್ತಿದ್ದಾರೆ. ಭದ್ರಾವತಿಯ ಸಾದತ್ ಕಾಲೋನಿಯ ನಿವಾಸಿಯೊಬ್ಬರಿಗೆ ಕೇವಲ ಎರಡು ಮೆಸೇಜ್‌ಗಳ ಮೂಲಕವೇ 5.70 ಲಕ್ಷ ರೂಪಾಯಿ ಹಣವನ್ನು ಕಿತ್ತುಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದ್ದು, ಆತಂಕಕಾರಿ ವಿಚಾರವಾಗಿದೆ.
ಆ ವ್ಯಕ್ತಿಯ ಮೊಬೈಲ್‌ಗೆ HDFC ಬ್ಯಾಂಕ್‌ನ ಹೆಸರಿನಲ್ಲಿ ಎರಡು ಮೆಸೇಜ್‌ಗಳು ಬಂದವು. ಶಂಕೆಯಿಲ್ಲದೆ ಅವುಗಳನ್ನು ಓಪನ್ ಮಾಡಿದಾಗ, ಅವರ ಖಾತೆಯಿಂದ ಲಕ್ಷಾಂತರ ರೂಪಾಯಿ ನಗದು ಡೆಬಿಟ್ ಆಗಿರುವುದನ್ನು ನೋಡಿ ಅವರು ಶಾಕ್ ಆಗಿದ್ದಾರೆ.
ತಕ್ಷಣವೇ ಬ್ಯಾಂಕ್‌ಗೆ ಧಾವಿಸಿದ ಅವರು, ಬ್ಯಾಂಕ್ ಸಿಬ್ಬಂದಿಯಿಂದ ಹಣ ಕಟ್ ಆಗಿರುವುದನ್ನು ದೃಢೀಕರಣ ಪಡೆದರು. ಆದರೆ, ಈ ಎಲ್ಲ ಹಂತಗಳಲ್ಲಿ ಒಂದೂ ಸಲ OTP ಕೇಳಲಾಗಿರಲಿಲ್ಲ ಎಂಬುದು ಒಂದೆಡೆಯಾದರೆ OTP ಇಲ್ಲದೆಯೂ ಹಣ ವರ್ಗಾಯಿಸಬಹುದಾ ಎನ್ನುವುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ಹಣ ಹಂಚಿಕೆ ಅಥವಾ ಪೇಮೆಂಟ್ ಕುರಿತು ಯಾರೊಂದಿಗೆ ಕೂಡ ಚಟುವಟಿಕೆ ನಡೆದಿಲ್ಲ. ಯಾರೋ ಅವರ ಖಾತೆಯ ನಿಯಂತ್ರಣ ಪಡೆದು, OTP ಕಳುಹಿಸದೆ ಹಣವನ್ನು ಹಂತ ಹಂತವಾಗಿ ಬೇರೊಂದು ಖಾತೆಗೆ ವರ್ಗಾಯಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಈ ಸಂಬಂಧ ಶಿವಮೊಗ್ಗದ ಸಿಐಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.