Headlines

ಟ್ರಾನ್ಸ್‌ಫಾರ್ಮರ್ ಮೇಲೆಯೇ ಉರುಳಿಬಿದ್ದ ಬೃಹದಾಕಾರದ ಮರ

ಟ್ರಾನ್ಸ್‌ಫಾರ್ಮರ್ ಮೇಲೆಯೇ ಉರುಳಿಬಿದ್ದ ಬೃಹದಾಕಾರದ ಮರ

ಶಿವಮೊಗ್ಗ , ಜು. 27: ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ ಬೃಹದಾಕಾರದ ಮರವೊಂದು, ವಿದ್ಯುತ್ ಟ್ರಾನ್ಸ್’ಫಾರ್ಮರ್ ಮೇಲೆಯೇ ಉರುಳಿಬಿದ್ದ ಘಟನೆ ಜುಲೈ 27 ರ ಮಧ್ಯಾಹ್ನ ನಡೆದಿದೆ.

ಆದಾಯ ತೆರಿಗೆ ಇಲಾಖೆ ಕಚೇರಿ ಪಕ್ಕದ ರಸ್ತೆಯಲ್ಲಿ ಘಟನೆ ನಡೆದಿದೆ. ಗಾಳಿ – ಮಳೆಯಿಂದ ಮರ ಉರುಳಿ ಬಿದ್ದಿದೆ. ಟ್ರಾನ್ಸ್‌ಫಾರ್ಮರ್ ಸೇರಿದಂತೆ ಕೆಲ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಅದೃಷ್ಟಾವಶಾತ್ ಮರ ಬಿದ್ದ ವೇಳೆ ರಸ್ತೆಯಲ್ಲಿ ಜನ – ವಾಹನ ಸಂಚಾರದ ಪ್ರಮಾಣ ಕಡಿಮೆಯಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವುದರಿಂದ ಗೋಪಾಲಗೌಡ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ನಾಗರೀಕರು ತೊಂದರೆಗೊಳಗಾಗುವಂತಾಗಿದೆ.

ಕಾಲಮಿತಿಯೊಳಗೆ ಮರ ತೆರವು ಮಾಡಿ,  ಟ್ರಾನ್ಸ್‌ಫಾರ್ಮರ್ ಹಾಗೂ ಕಂಬಗಳನ್ನು ದುರಸ್ತಿಗೊಳಿಸಿ ಬಡಾವಣೆಗಳಿಗೆ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳುವಂತೆ ಮೆಸ್ಕಾಂಗೆ ಸ್ಥಳೀಯ ನಾಗರೀಕರು ಮನವಿ ಮಾಡಿದ್ದಾರೆ.

Exit mobile version