Headlines

ರಿಪ್ಪನ್ ಪೇಟೆ – ರೋಟರಿ ಕ್ಲಬ್‌ನಲ್ಲಿ ಪದವಿ ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

ರಿಪ್ಪನ್ ಪೇಟೆ – ರೋಟರಿ ಕ್ಲಬ್‌ನಲ್ಲಿ ಪದವಿ ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

ರಿಪ್ಪನ್ ಪೇಟೆ: ರಿಪ್ಪನ್ ಪೇಟೆ ರೋಟರಿ ಕ್ಲಬ್ ವತಿಯಿಂದ 2025–26ನೇ ಸಾಲಿನ ಪದವಿ ಸ್ವೀಕಾರ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮವನ್ನು ಭವ್ಯವಾಗಿ ನಡೆಸಲಾಯಿತು.

ಈ ಸಮಾರಂಭದಲ್ಲಿ ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3182ರ ಗವರ್ನರ್ ರೋಟೇರಿಯನ್ ಬಿ.ಎಮ್. ಭಟ್ ಅವರು ಪದವಿ ಪ್ರಧಾನ ಅಧಿಕಾರಿಯಾಗಿ ಭಾಗವಹಿಸಿದರು. ಅವರು ಮಾತನಾಡಿ, “ರೋಟರಿ ಒಂದು ಸೇವಾ ಪರಂಪರೆ ಹೊಂದಿರುವ ಜಾಗತಿಕ ವೇದಿಕೆ. ಯುವ ಸದಸ್ಯರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿ, ಜನರ ಜೀವನ ಮಟ್ಟವನ್ನು ಉನ್ನತಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು,” ಎಂದು ತಿಳಿಸಿದರು.

ಅಧ್ಯಕ್ಷರಾಗಿ ಕೃಷ್ಣರಾಜ ಎ.ಎಂ ಹಾಗೂ ಕಾರ್ಯದರ್ಶಿಯಾಗಿ ರವೀಂದ್ರ ಬಳ್ಳಾಳ್ ಕೆ. ಪದವಿಯನ್ನು ಸ್ವೀಕರಿಸಿದರು. ನೂತನ ಅಧ್ಯಕ್ಷ ಕೃಷ್ಣರಾಜ ಮಾತನಾಡಿ, “ರೋಟರಿ ಸಂಸ್ಥೆಯ ಮುಖಾಂತರ ಗ್ರಾಮೀಣ ಸಮುದಾಯಗಳಿಗೆ ಸೇವೆ ಸಲ್ಲಿಸಲು ನಾವು ಬದ್ಧರಾಗಿದ್ದೇವೆ. ಯುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಉತ್ತೇಜಿಸುವುದು ನಮ್ಮ ಮುಖ್ಯ ಗುರಿಯಾಗಿದೆ,” ಎಂದು ಹೇಳಿದರು.

ಅಸಿಸ್ಟೆಂಟ್ ಗವರ್ನರ್ ರೋ. ಪಿ.ಎಚ್.ಎಫ್ ಎಮ್. ಬಿ. ಲಕ್ಷ್ಮಣಗೌಡ (ವಲಯ 11, 2025–26) ಹಾಗೂ ರೋ. ಪಿ.ಎಚ್.ಎಫ್ ಭರತ್ ಕುಮಾರ್ ಕೋಡ್ಲು (ಜೋನ್ ಲ್ ಲೆಫ್ಟಿ ನೆಂಟ್, 2025–26) ಗೌರವ ಉಪಸ್ಥಿತಿ ನೀಡಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ರಾಮಚಂದ್ರ ಎಂ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಸಬಾಸ್ಟಿನ್ ಉಪಸ್ಥಿತರಿದ್ದರು.

ಶಿವಮೊಗ್ಗ ಜಿಲ್ಲೆ ಸೇರಿದಂತೆ ಹಲವಾರು ರೋಟರಿ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳು ಹಾಗೂ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

Exit mobile version