ಸಾಗರ ತಾಲ್ಲೂಕಿಗೆ ಶಿಕ್ಷಣ ಕ್ಷೇತ್ರದಲ್ಲಿ ಗುಡ್ ನ್ಯೂಸ್: 16 ಸರ್ಕಾರಿ ಶಾಲೆಗಳಿಗೆ ಇಂಗ್ಲಿಷ್ ಮೀಡಿಯಂ ತರಗತಿಗೆ ಅನುಮತಿ!
ಶಿವಮೊಗ್ಗ ಜಿಲ್ಲೆ, ಸಾಗರ: ಸಾಗರ ತಾಲ್ಲೂಕಿನ ಶಿಕ್ಷಣ ಪ್ರೇಮಿಗಳಿಗೆ ಸಂತಸದ ಸುದ್ದಿಯಾಗಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನಿರಂತರ ಪ್ರಯತ್ನ ಫಲ ನೀಡಿದ್ದು, ತಾಲ್ಲೂಕಿನ 16 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿದೆ.
2025-26ನೇ ಶೈಕ್ಷಣಿಕ ವರ್ಷದಿಂದ ಈ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆಗೆ ದ್ವಿಭಾಷಾ ಮಾಧ್ಯಮದಡಿ ಇಂಗ್ಲಿಷ್ ತರಗತಿಗಳನ್ನೂ ಆರಂಭಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಇದರಿಂದ ಸರ್ಕಾರೀ ಶಾಲೆಗಳಲ್ಲೂ ಇಂಗ್ಲಿಷ್ ಶಿಕ್ಷಣ ಸಿಗುವ ಸುಲಭ ಅವಕಾಶ ಮಕ್ಕಳಿಗೆ ಲಭಿಸುತ್ತಿದೆ.
ಈ ಯೋಜನೆಯಡಿ ಶಾಲೆಗಳು ಸ್ಥಳೀಯವಾಗಿ ಲಭ್ಯವಿರುವ ಶಿಕ್ಷಕರ ಸಂಪನ್ಮೂಲಗಳನ್ನೇ ಬಳಸಿಕೊಳ್ಳಬೇಕು ಎಂಬುದಾಗಿ ಸೂಚಿಸಲಾಗಿದೆ. ಇದು ಗ್ರಾಮೀಣ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟುವಲ್ಲಿ ಮಹತ್ವದ ಹೆಜ್ಜೆಯಾಗಿ ಕಾಣುತ್ತದೆ.
ಸಾಗರ ತಾಲ್ಲೂಕಿನಲ್ಲಿ ಇಂಗ್ಲೀಷ್ ಮೀಡಿಯಂ ಆರಂಭಗೊಳ್ಳುವ ಶಾಲೆಗಳ ಪಟ್ಟಿ:
1. ನಾಗವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
2. ಬರದವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
3. ಮಾಸೂರು ಸರ್ಕಾರಿ ಪ್ರೌಢಶಾಲೆ (GHS)
4. ಮಾಲ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (GHPS)
5. ಬಿಳಿಸಿರಿ GHPS ಶಾಲೆ
6. ಹೆಬ್ಬರಿ GHPS ಶಾಲೆ
7. ನರಸೀಪುರ GLPS ಶಾಲೆ
8. ಆನಂದಪುರಂ GLPS ಶಾಲೆ
9. ಯಡೆಹಳ್ಳಿ GHPS ಶಾಲೆ
10. ಗೆಣಸಿನಕುಣಿ GHPS ಶಾಲೆ
11. ರಾಮನಗರ-ಯಳಗಳಲೆ GHPS ಶಾಲೆ
12. ಟ್ಯಾಂಕ್ ಸಾಗರ್ GHPS ಶಾಲೆ
13. ಸಣ್ಣಮನೆ ಎಕ್ಸ್‌ಟೆನ್ಷನ್ ಸಾಗರ್ GHPS ಶಾಲೆ
14. GGHPS ಉರ್ದು ಗಾಂಧಿನಗರ ಶಾಲೆ
15. GGHPS ಉರ್ದು ಅರಳಿಕಟ್ಟೆ ಸಾಗರ್
16. ಶ್ರೀ ಸಿದ್ದೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಾಗರ್
ಈ ಉಪಕ್ರಮದಿಂದ ಸರ್ಕಾರಿ ಶಾಲೆಗಳ ಮೇಲೆ ಜನರ ನಂಬಿಕೆ ಹೆಚ್ಚಾಗುವುದು ಮಾತ್ರವಲ್ಲದೆ, ಗ್ರಾಮೀಣ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ತಮ್ಮದೇ ಶಾಲೆಯಲ್ಲಿಯೇ ಅನುಭವಿಸುವ ಅವಕಾಶ ಒದಗಲಿದೆ.