ಗ್ಯಾಸ್ ಸಿಲಿಂಡರ್ ಸ್ಪೋಟ – ಮೂವರಿಗೆ ಗಂಭೀರ ಗಾಯ, ಮನೆಗೆ ಭಾರೀ ಹಾನಿ
ಶಿವಮೊಗ್ಗ, ಜುಲೈ 23 – ಇಂದು ಸಂಜೆ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಪೋಟದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶರಾವತಿ ನಗರದಲ್ಲೊ ನಡೆದಿದೆ. ಶಬ್ದದ ತೀವ್ರತೆಗೆ ನೆರೆಮನೆಯವರು ಭಯದಿಂದ ಓಡಿ ಬಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು
ಶರಾವತಿ ನಗರದ 1ನೇ ಅಡ್ಡರಸ್ತೆಯ ಸುನ್ನಿ ಮಸ್ಜಿದ್ ಏ ಶೆಹ್‌ಜಾದಿ ಅಸ್ಗರ್ ಮಸೀದಿ ಪಕ್ಕದ ಓಣಿಯಲ್ಲಿ ವಾಸಿಸುತ್ತಿರುವ ಎಂ.ಬಿ. ಪೀರಾನ್ ಸಾಬ್ (48) ಅವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಪೀರಾನ್ ಸಾಬ್ ಅವರ ಪತ್ನಿ ಸಾಹೇರಾ (40) ಮತ್ತು ಸೊಸೆ ಜಯೇಬಾ (22) ಸಹ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೀರಾನ್ ಸಾಬ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸಾಗಿಸುವ ಸಾಧ್ಯತೆ ಇದೆ.
ಸ್ಫೋಟದಿಂದಾಗಿ ಮನೆಗೆ ಭಾರೀ ಹಾನಿಯಾಗಿದ್ದು, ಛಾವಣಿ ಸಂಪೂರ್ಣ ಹಾರಿ ಹೋಗಿದೆ ಹಾಗೂ ಒಳಗಿನ ವಸ್ತುಗಳು ನಾಶವಾಗಿವೆ.ಗಾಯಾಳುಗಳು ಮಾಧ್ಯಮದೊಂದಿಗೆ ಮಾತನಾಡುತ್ತಾ, “ಮನೆಯ ಮುಂದೆ ಕುಳಿತಿದ್ದಾಗ ಸಡನ್ ಆಗಿ ಬೆಂಕಿ ಹೊರಹೊಮ್ಮಿತು,” ಎಂದು ಹೇಳಿದಾರೆ. ಪೀರಾನ್ ಸಾಬ್ ಅವರ ದೇಹದಲ್ಲಿ ಗಂಭೀರವಾಗಿ ಸುಡುವ ಗಾಯಗಳಾಗಿವೆ.
ಸಾಧಿತವಾದ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.