January 11, 2026

ಸಮಾಜದಲ್ಲಿ ನೊಂದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು :‌ ಬೇಳೂರು ಗೋಪಾಲಕೃಷ್ಣ

ಸಮಾಜದಲ್ಲಿ ನೊಂದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು :‌ ಬೇಳೂರು ಗೋಪಾಲಕೃಷ್ಣ

ರಿಪ್ಪನ್‌ಪೇಟೆ: ಸಮಾಜದಲ್ಲಿ ನೊಂದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಹಾಗೂ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಒದಗಿಸಿ ಸುಸಂಸ್ಕೃತ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು.

{“remix_data”:[],”remix_entry_point”:”challenges”,”source_tags”:[“local”],”origin”:”unknown”,”total_draw_time”:0,”total_draw_actions”:0,”layers_used”:0,”brushes_used”:0,”photos_added”:0,”total_editor_actions”:{},”tools_used”:{“border”:1},”is_sticker”:false,”edited_since_last_sticker_save”:true,”containsFTESticker”:false}

ಅವರು ಭಾನುವಾರ ಪಟ್ಟಣದ ವಿಶ್ವಮಾನವ ಸಭಾಂಗಣದಲ್ಲಿ ಹೊಸನಗರ ತಾಲ್ಲೂಕ್ ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ದಿ ಸಂಘ ಮತ್ತು ತಾಲ್ಲೂಕ್ ಗಂಗಾಮತಸ್ಥರ ಸಮಾಜ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಾವು ಸಮಾಜದಲ್ಲಿನ ತಮ್ಮ ಮಕ್ಕಳಿಗಾಗಿ ವಸತಿ ನಿಲಯಗಳನ್ನು ಆರಂಭಿಸಿ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತುನೀಡಿ ವಿದ್ಯೆಯೊಂದಿಗೆ ಸದೃಢ ಸಮಾಜ ನಿರ್ಮಾಣ ಮಾಡುವ ಮೂಲಕ ಸಂಘಟನೆಗೆ ಬಲತುಂಬಬೇಕಾಗಿದೆ ಎಂದರು.

ಯಾವುದೇ ಸಮಾಜ ಹಿಂದುಳಿದರೆ ಅದನ್ನು ಮುಂಚೂಣಿಗೆ ತರುವ ಕಾರ್ಯವನ್ನು ಮಾಡುವುದು ಸಮುದಾಯದವರ ಕಾರ್ಯ ಕೀಳರಿಮೆ ಬಿಟ್ಟು ಸಮಾಜದ ಶ್ರೆಯೋಭಿವೃದ್ದಿಗೆ ಶ್ರಮಿಸುವಂತಾಗಿ ತಮ್ಮ ಸಮಾಜಕ್ಕೆ ಸಭಾಭವನಕ್ಕೆ ಜಾಗ ಕೇಳಿದ್ದೀರಿ ಎಲ್ಲಿ ಎಂಬುದನ್ನು ಗಟ್ಟಿ ಮಾಡಿಕೊಂಡು ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಸರ್ಕಾರದ ಮಟ್ಟದಲ್ಲಿ ಮಂಜೂರು ಮಾಡಿಸುವ ಮೂಲಕ ಸಭಾಭವನ ನಿರ್ಮಾಣಕ್ಕೆ ಆರ್ಥಿಕ ನೆರವು ಕೊಡಿಸುವ ಭರವಸೆ ನೀಡಿ, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದೇ ಕಷ್ಟದಲ್ಲಿ ಶಾಲೆಗೆ ಹೋಗದೆ ಇರುವ ಮಗು ನನ್ನ ಬಳಿ ಬಂದರೆ ಆವರ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಹೇಳಿದರು.

ಗಂಗಾಮತಸ್ಥ ಜನಾಂಗ ಎಸ್ ಟಿ ಗೆ ಸೇರಿಸುವ ಬಹಳ ಕಾಲದ ಬೇಡಿಕೆಯನ್ನು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು,ಮುಖ್ಯಮಂತ್ರಿ ಗಳಿಗೂ ಮನವರಿಕೆ ಮಾಡಿಕೊಡುವ ಮೂಲಕ ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದರು.

ನಂತರ ಮಾತನಾಡಿದ ತಾಲೂಕ್ ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರಂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮಾಜ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಪದವಿ ಪರೀಕ್ಷೆಯಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕಗಳಿಸಿ ತೇರ್ಗಡೆಯಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದ್ದು ಮುಂದಿನ ವರ್ಷದಿಂದ ಶೇ. 75 ಕ್ಕಿಂತ ಹೆಂಚು ಅಂಕ ಪಡೆದವರಿಗೂ ಈ ಸೌಲಭ್ಯವನ್ನು ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಹೇಳಿದರು.

ಈ ಬಾರಿ ನಮ್ಮ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಶಾಸನ ಸಭೆಯಲ್ಲಿ ಧ್ವನಿ ಎತ್ತಿ ನಮ್ಮ ಸಮಾಜವನ್ನು ಎಸ್ ಟಿ ಗೆ ಸೇರಿಸಲು ವಿಶೇಷ ಕಾಳಜಿ ವಹಿಸಬೇಕು  ಎಂದು ಸಮಾಜದ ಪರವಾಗಿ ಒತ್ತಾಯಿಸಿದರು.

ಇದೇಸಂದರ್ಭದಲ್ಲಿ 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿ ಪರೀಕ್ಷೆ ಯಲ್ಲಿ ಅತಿಹೆಚ್ಚು ಅಂಕಗಳಿಸಿ ಉತ್ತೀರ್ಣಾರಾದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ’’ನೀಡಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಹೊಸನಗರ ತಾಲ್ಲೂಕ್ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಉಮೇಶ್ ಕೆ.ವೈ.ಕಾಳೇಶ್ವರ ಅಧ್ಯಕ್ಷತೆ ವಹಿಸಿದ್ದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಶಿವಮೊಗ್ಗ ಜಿಲ್ಲಾ ಗಂಗಾಮತಸ್ಥರ ಸಮಾಜದ ಜಿಲ್ಲಾಧ್ಯಕ್ಷ ಡಿ.ಬಿ.ಕೆಂಚಪ್ಪ, ಜಿಲ್ಲಾ ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಚಂದ್ರಶೇಖರ್, ಗಂಗಾಮತಸ್ಥರ ಸಮಾಜದ ಗೌರವಾಧ್ಯಕ್ಷ ರುಕ್ತೇಶ್‌ ಚಂದಳ್ಳಿ, ಗಂಗಾಮತಸ್ಥರ ತಾಲ್ಲೂಕು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಗಂಗಾಧರ,ಕೆ, ಗಂಗಾಮತಸ್ಥರ ತಾಲ್ಲೂಕು ನೌಕರರ ಕ್ಷೇಮಭಿವೃದ್ದಿ ಸಂಘದ ಗೌರವಾಧ್ಯಕ್ಷ ಅಧ್ಯಕ್ಷ ಎಂ.ಹೆಚ್.ಪಾಂಡುರಂಗ, ಸಮಾಜದ ಮುಖಂಡರಾದ ಬಾಲಚಂದ್ರ, ನಾಗೇಂದ್ರ ಹುಳಿಗದ್ದೆ, ಹಾಲೇಶಪ್ಪ, ಓಂಕೇಶ ಕೆಂಚನಾಲ, ರಮೇಶ್ ಅರಳಿಕೊಪ್ಪ, ಹೂವಪ್ಪ, ಮಂಜುನಾಥ್ ಬ್ಯಾಣದ, ಪಾಂಡುರಂಗ ಮಾದಾಪುರ, ಇಂದ್ರೇಶ್, ವಾದಾವತಿ, ಎಂ.ಹೆಚ್.ಸತ್ಯನಾರಾಯಣ, ಆನಂದ, ನಾಗೇಶ ಚಂದಳ್ಳಿ, ವಿನೋಧ ಹಿರಿಯಣ್ಣ, ಶಶಿಕಲಾ ಭೀಮರಾಜ್, ಗುರುಮೂರ್ತಿ, ರಮ್ಯ ಶಶಿಕುಮಾರ್ ಇನ್ನಿತರ ಸಮಾಜ ಬಾಂಧವರು ಹಾಜರಿದ್ದರು.
ಪ್ರಾಸ್ತಾವಿಕವಾಗಿ ಕೆ.ವೈ.ಉಮೇಶ್ ಮಾತನಾಡಿದರು.

About The Author

Exit mobile version