Headlines

ಪ್ರಾಚೀನ ನರಸಿಂಹ ದೇವರ ವಿಗ್ರಹ ಕಿಡಿಗೇಡಿಗಳಿಂದ ಭಗ್ನ – ಭಕ್ತರ ಆಕ್ರೋಶ

ಪ್ರಾಚೀನ ನರಸಿಂಹ ದೇವರ ವಿಗ್ರಹ ಕಿಡಿಗೇಡಿಗಳಿಂದ ಭಗ್ನ – ಭಕ್ತರ ಆಕ್ರೋಶ

ಸೊರಬ: ಅಪೂರ್ವ ಪ್ರಾಚೀನ ನರಸಿಂಹ ವಿಗ್ರಹವನ್ನು ಭಗ್ನಗೊಳಿಸಿದ ಘಟನೆ ತಾಲ್ಲೂಕಿನ ಕುಬಟೂರಿನಲ್ಲಿ ಸೋಮವಾರ ಸಂಜೆ ನಡೆದಿದೆ.

ನರಸಿಂಹ ಕ್ಷೇತ್ರವೆನ್ನಲಾದ ಸೊರಬ ತಾಲ್ಲೂಕಿನಲ್ಲಿ ಅನೇಕ ನರಸಿಂಹ ದೇಗುಲಗಳಿವೆ. ಸುಮಾರು ಎರಡನೇ ಶತಮಾನದಿಂದ ನಾಲ್ಕನೆ ಶತಮಾನದ ಅವಧಿಯ ವಿಗ್ರಹಗಳು ಗಮನಸೆಳೆದಿದ್ದು ಕುಬಟೂರು ವಿಗ್ರಹ ಜಿಲ್ಲೆಯ ಕೆಲವೇ ಕೆಲವು ಪ್ರಾಚೀನ ವಿಗ್ರಹಗಳಲ್ಲಿ ಒಂದು. ಇತಿಹಾಸ ಆರಂಭಿಕ ಹಂತದ ವಿಗ್ರಹಗಳಾಗಿರುವ ಇವು ಕುಳಿತು ಮಣಿಯನ್ನು ಹಿಡಿದಿರುವ ಭಂಗಿಯಲ್ಲಿದ್ದು ಅನೇಕರ ಆರಾಧ್ಯ ದೈವವಾಗಿದೆ.
ಯಾವುದೇ ಅನುದಾನ ಇತ್ಯಾದಿ ಬಯಸದೆ ಸ್ವತಃ ದೇಗುಲವನ್ನು ಜೀರ್ಣೋದ್ಧಾರಗೊಳಿಸಿಕೊಂಡ ಇಲ್ಲಿನ ಜನತೆ ವರ್ಷಕ್ಕೊಮ್ಮೆ ವಿಶೇಷ ಪೂಜೆ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಹೀಗಿದ್ದು ಅಪೂರ್ವ ವಿಗ್ರಹ ಹಾಳಾಗಿರುವುದಕ್ಕೆ ನೊಂದುಕೊಂಡಿದ್ದಾರೆ.

ಇಂತಹ ಕಿಡಿಗೇಡಿತನ ಎಸಗಿರುವ ತಪ್ಪಿತಸ್ಥರ ತನಿಖೆ ನಡೆಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.

ಭಗ್ನವಾಗಿರುವ ಪ್ರಾಚೀನ ವಿಗ್ರಹದ ರಕ್ಷಣೆಗೆ ಪ್ರಾಚ್ಯ ಇಲಾಖೆ ಮುಂದೆ ಬರಬೇಕು ಎಂದು ದೇಗುಲ ಸಮಿತಿಯವರು ವಿನಂತಿಸಿದ್ದಾರೆ

Exit mobile version