RIPPONPETE | ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಬಕ್ರಿದ್ ಆಚರಣೆ
ರಿಪ್ಪನ್ ಪೇಟೆ : ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಅತ್ಯಂತ ಸಂಭ್ರಮದಿಂದ ಬಕ್ರಿದ್ ಹಬ್ಬವನ್ನು ಆಚರಿಸಿದರು.
ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮೆಕ್ಕಾ ಮಸೀದಿ, ಮದೀನಾ ಮಸೀದಿ ಗಳಲ್ಲಿ ಮುಸಲ್ಮಾನ ಭಾಂಧವರು ಬಕ್ರೀದ್ ಪ್ರಾರ್ಥನೆ ಸಲ್ಲಿಸಿದರು.
ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫೀ ಮಾತನಾಡಿ, ಪ್ರತಿಯೊಂದು ಧರ್ಮವನ್ನು ಗೌರವಿಸುವ ಮೂಲಕ ಸಹೋದರತ್ವದಿಂದ ಬಾಳ್ವೆ ನಡೆಸಬೇಕು .ಯಾವುದೇ ಧರ್ಮವನ್ನು ಅವಹೇಳನ ಮಾಡುವುದನ್ನು ಇಸ್ಲಾಂ ಖಂಡಿಸುತ್ತದೆ ಎಂದರು.
ರಿಪ್ಪನ್ ಪೇಟೆಯಲ್ಲಿ ಮಳೆ ಹಿನ್ನಲೆಯಲ್ಲಿ ಮೆರವಣಿಗೆಯನ್ನು ಸ್ಥಗಿತಗೊಳಿಸಿ ಗುಂಪು ಗುಂಪಾಗಿ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ,ಪರಸ್ಪರ ಶುಭಾಶಯಗಳು ಕೋರಿದರು.
ಈ ಸಂಧರ್ಭದಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಹಸನಬ್ಬ ಬ್ಯಾರಿ ,ಕಾರ್ಯದರ್ಶಿ ಶೇಖಬ್ಬ ಮುಖಂಡರಾದ ಅರ್ ಎ ಚಾಬುಸಾಬ್, ಅಮೀರ್ ಹಂಜಾ,ಆಸೀಫ಼್ ಭಾಷಾಸಾಬ್,ಪತ್ರಕರ್ತ ರಫ಼ಿ ರಿಪ್ಪನ್ ಪೇಟೆ , ಮುಸ್ತಾಫ,ಫ಼ಾಜಿಲ್ ,ರೆಹಮಾನ್, ನದೀಮ್ , ರಹೀಮ್ ಚಾಲಿ , ಫೈಜಲ್ ,ಸಲೀಂ , ಅಫ಼್ಜಲ್ ಬ್ಯಾರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಇದೇ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ 15 ಅಂಶ ಅನುಷ್ಠಾನ ಸಮಿತಿಗೆ ನೇಮಕಗೊಂಡ ಮುಖಂಡರಾದ ಅಮೀರ್ ಹಂಜಾ ರವರನ್ನು ಮೊಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಸದಸ್ಯರಾದ ಆಸೀಫ಼್ ಭಾಷಾ ಹಾಗೂ ನಿರೂಪ್ ಕುಮಾರ್ ರವರ 15 ನೇ ಹಣಕಾಸು ಯೋಜನೆ ಹಾಗೂ ವರ್ಗ 1 ರ ಅನುದಾನದಡಿಯಲ್ಲಿ ಸಾಗರ ರಸ್ತೆಯ ಮುಸ್ಲಿಂ ಸ್ಮಶಾನದಲ್ಲಿ ನಿರ್ಮಿಸಿರುವ ಸುಸಜ್ಜಿತ ಹೈಟೆಕ್ ಹೈಮಾಸ್ಕ್ ಲೈಟ್ ನ್ನು ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫಿ ಸ್ವಿಚ್ ಆನ್ ಮಾಡುವ ಮೂಲಕ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಅರ್ ಎ ಚಾಬುಸಾಬ್, ಅಮೀರ್ ಹಂಜಾ,ಆಸೀಫ಼್ ಭಾಷಾಸಾಬ್, ನಿರೂಪ್ ಕುಮಾರ್ , ಮುಸ್ತಾಫ ಹಾಗೂ ಇನ್ನಿತರರು ಇದ್ದರು.
ರಿಪ್ಪನ್‌ಪೇಟೆ ಸಮೀಪದ ಗಾಳಿಬೈಲು ಗ್ರಾಮದ ಈದ್ಗಾ ಮೈದಾನದಲ್ಲಿ ಬಕ್ರೀದ್ ಸಂಭ್ರಮದಿಂದ ಆಚರಿಸಿದರು.ಗಾಳಿಬೈಲ್ ಜುಮ್ಮಾ ಮಸೀದಿ ಧರ್ಮಗುರುಗಳ ನೇತೃತ್ವದಲ್ಲಿ ಗಾಳಿಬೈಲ್ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಷರೀಫ್ ಸಾಬ್, ಜಾವಿದ್ ಸಾಬ್ , ಘನಿಸಾಬ್,ವಜೀರ್ ಸಾಬ್,ಉಬೇದುಲ್ಲಾ ಷರೀಫ್, ಸೈಫ಼ುಲ್ಲಾ ,ಹಿದಾಯತ್,ಶಬ್ಬೀರ್ ಸಾಬ್ ,ಖಲೀಲ್ ಷರೀಫ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಬಕ್ರೀದ್ ಹಿನ್ನಲೆಯಲ್ಲಿ ಹೊಸನಗರ, ಬಟ್ಟೆಮಲ್ಲಪ್ಪ, ಕೆಂಚನಾಲ, ಗರ್ತಿಕೆರೆ, ಸುಣ್ಣದ ಬಸ್ತಿ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…
ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…
ಈಸ್ಟ್‌ವೆಸ್ಟ್ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ Talkeen Ahmed, owner of East West Bus institution and…
ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು Thieves broke into journalist Shi.…
ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…