January 11, 2026

ಭಾರಿ ಮಳೆ | ಹೊಸನಗರ ತಾಲೂಕಿನಾದ್ಯಂತ ಶಾಲೆಗಳಿಗೆ ‘ರಜೆ’ ನೀಡುವ ನಿರ್ಧಾರ ಶಾಲಾಭಿವೃದ್ದಿ ಸಮಿತಿಗೆ

ಭಾರಿ ಮಳೆ | ಹೊಸನಗರ ತಾಲೂಕಿನಾದ್ಯಂತ ಶಾಲೆಗಳಿಗೆ ‘ರಜೆ’ ನೀಡುವ ನಿರ್ಧಾರ ಶಾಲಾಭಿವೃದ್ದಿ ಸಮಿತಿಗೆ

ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ನಿಟ್ಟೂರು ಭಾಗದಲ್ಲಿ ಮುಂಗಾರು ಮಳೆ ರಭಸವಾಗಿ  ಸುರಿಯುತ್ತಿರುವುದು ಮುಂದುವರೆದಿರುವುದು ವರದಿಯಾಗಿದ್ದು ಈ ಬಗ್ಗೆ ತಹಶೀಲ್ದಾರ್ ರಶ್ಮಿ ಹಾಲೇಶ್ ರವರೊಂದಿಗೆ ಚರ್ಚಿಸಿದ್ದು, ಅವರ ಸೂಚನೆಯಂತೆ, ಇದೇ ರೀತಿ ಪರಿಸ್ಥಿತಿ ತಾಲ್ಲೂಕಿನ  ಕೆಲವು ಭಾಗದಲ್ಲಿಯೂ ಇರುವ ಕಾರಣ ಮಕ್ಕಳಿಗೆ ಶಾಲೆಗೆ ಬರಲು ತೊಂದರೆಯಾಗುವ  ಪರಿಸ್ಥಿತಿಯಿದ್ದಲ್ಲಿ ಎಸ್ ಡಿಎಂಸಿ ಯವರೊಂದಿಗೆ ಚರ್ಚಿಸಿ ರಜೆ ನೀಡಲು ಕ್ರಮವಹಿಸಲು ತಾಲೂಕಿನ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ಬಿ ಇಒ ಕೃಷ್ಣಮೂರ್ತಿ ಸೂಚನೆ ನೀಡಿದ್ದಾರೆ.

ಮಳೆಯ ಹಿನ್ನೆಲೆಯಲ್ಲಿ ರಜೆ ನೀಡಿರುವ ಬಗ್ಗೆ ಎಲ್ಲಾ ಪೋಷಕರು ಮತ್ತು ಮಕ್ಕಳಿಗೆ ಮೊದಲೇ ಮಾಹಿತಿ ನೀಡುವುದು.ಈ ಸೂಚನೆಯನ್ನು ಮುಂದಿನ ಮಳೆಗಾಲ ಮುಗಿಯುವವರೆಗೂ ಕಡ್ಡಾಯವಾಗಿ ಪಾಲಿಸುವುದು  ಮತ್ತು ಈ ಬಗ್ಗೆ ಕಛೇರಿಗೆ ವರದಿಮಾಡುವುದು ಮುಂದೆ ಈ ಕೊರತೆಯನ್ನು ಮಂದಿನ ಶನಿವಾರ ಪೂರ್ಣ ದಿನ  ಶಾಲೆ ನಡೆಸುವುದರ ಮೂಲಕ ಸರಿದೂಗಿಸಲು ಶಾಲಾ ಮುಖ್ಯೋಪಾಧ್ಯಾಯರುಗಳಿಗೆ  ಬಿಇಒ ಕೃಷ್ಣಮೂರ್ತಿ ಸೂಚನೆ ನೀಡಿದ್ದಾರೆ.

About The Author

Exit mobile version