ANANDAPURA | ಸಾಲಬಾಧೆಗೆ ಬೇಸತ್ತು ಗ್ರಾಪಂ ಮಾಜಿ ಸದಸ್ಯ ಆತ್ಮಹತ್ಯೆ

0

ಸಾಲಬಾಧೆಗೆ ಬೇಸತ್ತು ಗ್ರಾಪಂ ಮಾಜಿ ಸದಸ್ಯ ಆತ್ಮಹತ್ಯೆ

ಸಾಗರ : ಸಾಲ ಬಾಧೆ ತಾಳಲಾರದೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೇಘರಾಜ್ ಬಿ ಎಚ್ (43) ಗೌತಮಪುರ  ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರೈತರಾಗಿರುವ ಮೇಘರಾಜ್  5 ಲಕ್ಷಕ್ಕೂ ಅಧಿಕ ಸಾಲವನ್ನು  ಬೆಳೆಗಾಗಿ ಮಾಡಿರುವ ಮಾಹಿತಿ ತಿಳಿದು ಬಂದಿದೆ.

ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗೋಲ್ಡ್ ಲೋನ್ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಮೂರು ವರ್ಷದಿಂದ ಕೈಗೆ ಬೆಳೆ ಸರಿಯಾಗಿ ಸಿಗದ ಹಿನ್ನೆಲೆ ಹಾಗೂ ಬೆಳೆ ಹಾನಿ ಆದ ಹಿನ್ನೆಲೆ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.

About The Author

Leave a Reply

Your email address will not be published. Required fields are marked *

Exit mobile version