Headlines

ಶಿರಾಳಕೊಪ್ಪದ ಹಕ್ಲಹಳ್ಳಿಯಲ್ಲಿ 48 ಗೋವುಗಳ ರಕ್ಷಣೆ

ಶಿರಾಳಕೊಪ್ಪದ ಹಕ್ಲಹಳ್ಳಿಯಲ್ಲಿ 48 ಗೋವುಗಳ ರಕ್ಷಣೆ

ಸೊರಬ ತಾಲೂಕಿನ ಹಕ್ಲಹಳ್ಳಿಯಲ್ಲಿ 48 ಗೋವುಗಳ ರಕ್ಷಣೆ ಮಾಡಿರುವ ಘಟನೆ ನಡೆದಿದೆ.  ಶಿರಾಳಕೊಪ್ಪದ ಪಿಎಸ್ಐ ಪ್ರಶಾಂತ್ ಅವರ ನೇತೃತ್ವದಲ್ಲಿ ಖಚಿತ ಮಾಹಿತಿ ಮತ್ತು ಖಡಕ್ ದಾಳಿ ಹಿನ್ನಲೆಯಲ್ಲಿ  48 ಗೋವುಗಳ ರಕ್ಷಣೆಯಾಗಿದೆ.

ಆದರೂ ಗೋವುಗಳ ವಧೆ ನಡೆದಿದ್ದು 250 ಕೆಜಿ  ಗೋಮಾಂಸ ಪತ್ತೆಯಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಗ್ರಾಮದ ಸರ್ವೆನಂಬರ್ 63 ರಲ್ಲಿ ಗೋವುಗಳನ್ನ ತಂದು ವದೆ ಮಾಡಲು ಕಟ್ಟಿಹಾಕಲಾಗಿದೆ ಎಂಬ ಖಚಿತ ಮಾಹಿತಿ ಮೇಲೆ ದಾಳಿ ನಡೆದಿದೆ.

ಶಿರಾಳಕೊಪ್ಪದಿಂದ 35 ಗೋವುಗಳನ್ನ ಶಿವಮೊಗ್ಗದ ಮಹಾವೀರ ಗೋಶಾಲೆಗೆ ಕರೆತರಲಾಗುತ್ತಿದೆ. ಉಳಿದ 13 ಗೋವಿಗಳನ್ನ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸಂಡೂರಿನ ಗೋಶಾಲೆಗೆ ಕರೆದೊಯ್ಯಲಾಗಿದೆ.

ಸೂಳೆಬೈಲಿನಲ್ಲಿ ಗೋವುಗಳ ರಕ್ಷಣೆ

ಶಿವಮೊಗ್ಗದ ಸೂಳೆಬೈಲಿನಲ್ಲಿ ಗೋವುಗಳನ್ನ ರಕ್ಷಿಸಲಾಗಿದೆ. ನಿನ್ನೆ ತುಂಗ ನಗರ ಪೊಲೀಸ್ ಠಾಣೆಯ ಪಿಎಸ್ಐ ರಘುವೀರ್ ಅವರ ನೇತೃತ್ವದಲ್ಲಿ ಮನೆಯ ಮೇಲೆ ದಾಳಿ ನಡೆದಿದ್ದು 6 ಗೋವುಗಳನ್ನ ರಕ್ಷಿಸಲಾಗಿದೆ. ಕಸಾಯಿ ಖಾನೆಯಲ್ಲಿದ್ದ 6 ಗೋವುಗಳ ರಕ್ಷಣೆಯಾಗಿದೆ.

About The Author

Leave a Reply

Your email address will not be published. Required fields are marked *

Exit mobile version