ರಿಪ್ಪನ್ ಪೇಟೆಯಲ್ಲಿ ಹರತಾಳು ಹಾಲಪ್ಪರವರ ಹುಟ್ಟು ಹಬ್ಬದ ಸಂಭ್ರಮ

ರಿಪ್ಪನ್ ಪೇಟೆಯಲ್ಲಿ ಹರತಾಳು ಹಾಲಪ್ಪರವರ ಹುಟ್ಟು ಹಬ್ಬದ ಸಂಭ್ರಮ

ರಿಪ್ಪನ್ ಪೇಟೆ : ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಮಂತ್ರಿ ಹರತಾಳು ಹಾಲಪ್ಪರವರ 63ನೇ ಹುಟ್ಟು ಹಬ್ಬವನ್ನು  ಶುಕ್ರವಾರ ಪಟ್ಟಣದ ಬಿಜೆಪಿ ಕಾರ್ಯಕರ್ತರು ಹಾಗೂ ಹರತಾಳು ಹಾಲಪ್ಪರ ಅಭಿಮಾನಿಗಳು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಸರ್ವ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ  ಹರತಾಳು ಹಾಲಪ್ಪರ ಹುಟ್ಟು ಹಬ್ಬದ ಅಂಗವಾಗಿ  ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು, ಸಂಜೆ ಹಿಂದೂ ಮಹಾಸಭಾ ವೇದಿಕೆಯಲ್ಲಿ ನಡೆದ ಹುಟ್ಟು ಹಬ್ಬದ ಸಮಾರಂಭದಲ್ಲಿ  ಪೌರ ಕಾರ್ಮಿಕ ದಂಪತಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಮಂತ್ರಿ ಹರತಾಳು ಹಾಲಪ್ಪ ಮಾತನಾಡಿ ಹೊಸನಗರ ಸಾಗರ ಹಾಗೂ ಸೊರಬ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿ  ಮಂತ್ರಿಯಾಗಿ   ಮಾತನಾಡಿ  ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು  ನನ್ನ ಅಧಿಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು  ನನಗೆ ತೃಪ್ತಿ ಹಾಗೂ ನೆಮ್ಮದಿಯನ್ನು ಉಂಟು ಮಾಡಿದೆ, ಇನ್ನು ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಾಡುವ ಅಭಿಲಾಷೆ ನನ್ನಲ್ಲಿತ್ತು, ನಾಡು ಕಂಡ ಪ್ರಭುದ್ಧ ರಾಜಕಾರಣಿಗಳಾದ ಬಂಗಾರಪ್ಪ , ಯಡಿಯೂರಪ್ಪ ಕಾಗೋಡು ತಿಮ್ಮಪ್ಪ ರಂತಹ  ಅಭಿವೃದ್ಧಿಯ ಹರಿಕಾರರ ನಡುವೆ ಜಿಲ್ಲೆಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಮತದಾರರು ನನಗೆ ಬೆಂಬಲಿಸಿದ್ದರು. ನನಗೆ ಅಧಿಕಾರಿ ಇರಲಿ ಇಲ್ಲದಿರಲಿ  ನನ್ನ ಹೋರಾಟ ಜನಪರ ಹೋರಾಟವಾಗಿದ್ದು. ಜನತೆಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಸಿಗುವಂತಾಗಬೇಕು ಆಗ ಮಾತ್ರ  ರಾಜಕಾರಣಕ್ಕೆ ಹಾಗೂ ರಾಜಕಾರಣಿಗಳಿಗೆ ಜನಸಾಮಾನ್ಯರು ಗೌರವಿಸುತ್ತಾರೆ ಎಂದರು.

ನಿಕಟ ಪೂರ್ವ ಜಿಲ್ಲಾ ಬಿಜೆಪಿ ಅಧ್ಯಕ್ಷ  ಟಿ ಡಿ ಮೇಘ ರಾಜ್ ಮಾತನಾಡಿ  ಮಲೆನಾಡಿನ ಅಭಿವೃದ್ಧಿಯ ಹರಿಕಾರರೆಂದು ಜನಮಾನಸದಲ್ಲಿ  ನೆಲೆ ನಿಂತಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ  ಹರ ತಾಳು ಹಾಲಪ್ಪ ರವರು  ಸೊರಬ ಸಾಗರ ಹಾಗೂ ಹೊಸನಗರ ವಿಧಾನಸಭಾ ಕ್ಷೇತ್ರದಲ್ಲಿ  ತಮ್ಮ ಅಧಿಕಾರ ಅವಧಿಯಲ್ಲಿ  ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಾಡುವುದರ ಜೊತೆಗೆ ನೊಂದವರ ಪರವಾಗಿ ಯಾವಾಗಲೂ ಸಹಾಯ ಹಸ್ತವನ್ನು ಚಾಚುತ್ತಿದ್ದರು, ಇಂತಹ ವ್ಯಕ್ತಿಯೊಬ್ಬರು 2028ರ ವಿಧಾನಸಭಾ ಚುನಾವಣೆಯಲ್ಲಿ  ಮತ್ತೆ ಜಯಗಳಿಸಿ  ಈ ನಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾಗಿಯಾಗಲಿದ್ದಾರೆ, ಎಲ್ಲಾ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು  ಪಕ್ಷದ ಸಂಘಟನೆ ಹಾಗೂ ಈಗ ದಿಂದಲೇ ಶ್ರಮವಹಿಸ ಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ  ಎನ್ ಸತೀಶ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ  ಹೊಸನಗರ ತಾಲೂಕು ಬಿಜೆಪಿ ಅಧ್ಯಕ್ಷ ಸುಬ್ರಮಣ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ,ಬಿಜೆಪಿ ತಾಲೂಕು ಉಪಾಧ್ಯಕ್ಷ ಎಂ ಬಿ. ಮಂಜುನಾಥ್,ರಾಜ್ಯ ಜೆಡಿಎಸ್ ಕಾರ್ಯದರ್ಶಿ ಅರ್ ಎ ಚಾಬುಸಾಬ್,ಶಕ್ತಿ ಕೇಂದ್ರದ ಕಾರ್ಯದರ್ಶಿ  ಕೆರೆಹಳ್ಳಿ  ಸುಂದರೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆಲವಳ್ಳಿ ವೀರೇಶ್  ಮುಖಂಡರಾದ  ಸುರೇಶ ಸಿಂಗ್, ಜೆಡಿಎಸ್ ತಾಲೂಕ್ ಅಧ್ಯಕ್ಷ  ಎನ್. ವತೇಶ್, , ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ವರದರಾಜ್, ಬಿಜೆಪಿ ಮುಖಂಡರಾದ ಪಿ ರಮೇಶ್,ಮೆಣಸೆ ಆನಂದ, ಕೆರೆ ಹಳ್ಳಿ ಮುರುಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಎ. ಟಿ ನಾಗರತ್ನ . ರಾಜೇಶ್ ಕಿಳಂಬಿ, ಹೂವಪ್ಪ ಮತ್ತು ಪಿ.ಸುಧೀರ್ ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ನೀರಿನಲ್ಲಿ ಅಡಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನ ; ಸಿನಿಮೀಯ ರೀತಿಯಲ್ಲಿ ರೌಡಿಶೀಟರ್‌ನನ್ನು ಬಂಧಿಸಿದ ಪೊಲೀಸರು

ನೀರಿನಲ್ಲಿ ಅಡಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನ ; ಸಿನಿಮೀಯ ರೀತಿಯಲ್ಲಿ ರೌಡಿಶೀಟರ್‌ನನ್ನು ಬಂಧಿಸಿದ ಪೊಲೀಸರು Bhadravathi police dramatically…

9 hours ago

ಅಜಾಗರೂಕ ಚಾಲನೆಯಿಂದ ಕೆರೆಗೆ ನುಗ್ಗಿದ ಲಾರಿ! ತಪ್ಪಿದ ಭಾರಿ ದುರಂತ

ಅಜಾಗರೂಕ ಚಾಲನೆಯಿಂದ ಕೆರೆಗೆ ನುಗ್ಗಿದ ಲಾರಿ! ತಪ್ಪಿದ ಭಾರಿ ದುರಂತ A container lorry allegedly driven recklessly under…

9 hours ago

ರಿಪ್ಪನ್‌ಪೇಟೆ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಅನಾಹುತ; ಡಿಸ್ಕಸ್ ತಲೆಗೆ ಬಿದ್ದು ಶಿಕ್ಷಕ ಗಂಭೀರ ಗಾಯ

ರಿಪ್ಪನ್‌ಪೇಟೆ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಅನಾಹುತ; ಡಿಸ್ಕಸ್ ತಲೆಗೆ ಬಿದ್ದು ಶಿಕ್ಷಕ ಗಂಭೀರ ಗಾಯ A physical education teacher…

14 hours ago

ನೆಲ್ಲಿಬೀಡು ಟಿಪ್ಪರ್ – ಬೈಕ್ ಅಪಘಾತ: ಮಗಳ ಸಾವಿನ ಬಳಿಕ ಚಿಕಿತ್ಸೆ ಫಲಿಸದೆ ತಂದೆಯೂ ಮೃತ್ಯು

ನೆಲ್ಲಿಬೀಡು ಟಿಪ್ಪರ್ – ಬೈಕ್ ಅಪಘಾತ: ಮಗಳ ಸಾವಿನ ಬಳಿಕ ಚಿಕಿತ್ಸೆ ಫಲಿಸದೆ ತಂದೆಯೂ ಮೃತ್ಯು A tragic tipper-bike…

17 hours ago

ಬಾಲಕ ಓಡಿಸಿದ ಬೊಲೆರೊ, ದಂಡ ಕಟ್ಟಿದ ತಂದೆ! ₹26,500 ಫೈನ್

ಬಾಲಕ ಓಡಿಸಿದ ಬೊಲೆರೊ, ದಂಡ ಕಟ್ಟಿದ ತಂದೆ! ₹26,500 ಫೈನ್ A Shivamogga court fined a father ₹26,500…

17 hours ago

ಸಾಗರ ಗ್ರಾಮಾಂತರ ಠಾಣೆಯ ನೂತನ ಪಿಎಸ್‌ಐ ಆಗಿ ಶಂಕರ್ ಗೌಡ ಪಾಟೀಲ್ ನೇಮಕ

ಸಾಗರ ಗ್ರಾಮಾಂತರ ಠಾಣೆಯ ನೂತನ ಪಿಎಸ್‌ಐ ಆಗಿ ಶಂಕರ್ ಗೌಡ ಪಾಟೀಲ್ ನೇಮಕ PSI Shankar Gowda Patil has…

1 day ago