Headlines

RIPPONPETE | ಸಾವಿರಾರು ರೂ ಮೌಲ್ಯದ ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಡ ಮಹಿಳೆ

RIPPONPETE | ಸಾವಿರಾರು ರೂ ಮೌಲ್ಯದ ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಡ ಮಹಿಳೆ

ರಿಪ್ಪನ್‌ಪೇಟೆ : ಪಟ್ಟಣಕ್ಕೆ ತರಕಾರಿ ತರಲು ಬಂದ ಬಡ ಕಾರ್ಮಿಕ ಮಹಿಳೆಯೊಬ್ಬಳು ರಸ್ತೆಯಲ್ಲಿ ತನಗೆ ಸಿಕ್ಕ ₹ 20 ಸಾವಿರ ಮೌಲ್ಯದ ಮೊಬೈಲ್‌ ಅನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ರಿಪ್ಪನ್‌ಪೇಟೆ ಪಟ್ಟಣದಲ್ಲಿ ದಿನಗೂಲಿ ನೌಕರಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೋಹಿಣಿ‌ ಮರಿಯಾ ಎಂಬುವವರಿಗೆ ಶಿವಮೊಗ್ಗ ರಸ್ತೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಸಾವಿರಾರು ರೂ ಮೌಲ್ಯದ ಮೊಬೈಲ್ ಸಿಕ್ಕಿದೆ ಕೂಡಲೇ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಎಸ್ ಪಿ ರವರಿಗೆ ಮೊಬೈಲ್ ತಲುಪಿಸಿ ಇದರ ವಾರಸುದಾರರಿಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ.ಅದರಂತೆ ಮೊಬೈಲ್ ಮಾಲೀಕರಾದ ಚಿಕ್ಕಜೇನಿ ಗ್ರಾಮದ ಮಂಜುನಾಥ್ ರವರಿಗೆ ಮೊಬೈಲ್ ಹಸ್ತಾಂತರಿಸಲಾಯಿತು.

ಬೈಕ್‌ನಲ್ಲಿ ಹೋಗುವಾಗ ದೇವಸ್ಥಾನದ ಮುಂಭಾಗದಲ್ಲಿ ಅನಿರೀಕ್ಷಿತವಾಗಿ ಜಾರಿಬಿದ್ದು ಮೊಬೈಲ್‌ ಕಳೆದುಕೊಂಡಿದ್ದ ಜೇನಿ ಗ್ರಾಮದ ಮಂಜುನಾಥ್ ಬಡ ಮಹಿಳೆಯ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version