January 11, 2026

RIPPONPETE • ಸುಟ್ಟುಹೋದ ವಿದ್ಯುತ್ ಟಿಸಿ – ಐದು ದಿನಗಳಿಂದ ಕುಡಿಯುವ ನೀರಿಲ್ಲದೆ ಗವಟೂರು ಗ್ರಾಮಸ್ಥರ ಪರದಾಟ

RIPPONPETE • ಸುಟ್ಟುಹೋದ ವಿದ್ಯುತ್ ಟಿಸಿ – ಐದು ದಿನಗಳಿಂದ ಕುಡಿಯುವ ನೀರಿಲ್ಲದೆ ಗವಟೂರು ಗ್ರಾಮಸ್ಥರ ಪರದಾಟ

ರಿಪ್ಪನ್‌ಪೇಟೆ;-ಇಲ್ಲಿನ ಗವಟೂರು ಗ್ರಾಮದಲ್ಲಿ ಕಳೆದ ಐದಾರು ದಿನಗಳ ಹಿಂದೆ ಟಿಸಿ ಸುಟ್ಟುಹೋಗಿದ್ದು ಸಾರ್ವಜನಿಕರು ಕುಡಿಯುವ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯ ಗ್ರಾಮ ಪಂಚಾಯಿತ್‌ನಿಂದ ಪೈಪ್ ಲೈನ್ ಮೂಲಕ ಸರಬರಾಜು ಮಾಡಲಾಗುವ ಕುಡಿಯುವ ನೀರಿನ ನಲ್ಲಿಯಲ್ಲಿ ನೀರು ಬರದೇ ಇದ್ದು ಈ ಕುರಿತು ಗ್ರಾಮಾಡಳಿತದ ಗಮನಕ್ಕೆ ತರಲಾದರೂ ಕೂಡಾ ಪ್ರಯೋಜನವಾಗಿಲ್ಲ ಮತ್ತು ಮೆಸ್ಕಾಂ ಇಲಾಖೆಯವರಿಗೆ ಸಾರ್ವಜನಿಕರು ಗವಟೂರು ಬಳಿಯಲ್ಲಿ 63 ಕೆ.ವಿ.ಲೈನ್ ಟಿಸಿ  ಸುಟ್ಟುಹೋಗಿದೆ ಎಂದು ದೂರು ಸಲ್ಲಿಸಲಾದರೂ ಕೂಡಾ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ವಹಿಸಿದ್ದಾರೆಂದು ಸಾರ್ವಜನಿಕರು ಆರೋಪಿಸಿದರು.

ಬೇಸಿಗೆ ಕಾಲವಾಗಿರುವ ಕಾರಣ ಇಲ್ಲಿನ ತೆರೆದ ಬಾವಿಗಳಲ್ಲಿ ನೀರು ತಳಮಟ್ಟಕ್ಕೆ ಹೋಗಿವೆ ಇನ್ನೂ ಬೋರ್‌ವೆಲ್ ನೀರು ತರೋಣವೆಂದರೆ ಟಿಸಿ ಸುಟ್ಟುಹೋಗಿದ್ದು  ಮೋಟರ್ ಅನ್ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ.

ಈ ಕೂಡಲೇ ಸಂಬಂಧಿಸಿದ ಮೆಸ್ಕಾಂ ಮತ್ತು ಸ್ಥಳೀಯ ಗ್ರಾಮಾಡಳಿತ ಮನಹರಿಸಿ 63 ಕೆ.ವಿ. ಟಿಸಿ ಅಳವಡಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವಂತೆ ಗವಟೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

About The Author

Leave a Reply

Your email address will not be published. Required fields are marked *

Exit mobile version