POSTMANNEWS

ನೈಜ ಸುದ್ದಿ ನೇರ ಬಿತ್ತರ..

ಕಾಲೇಜಿನ‌ ಲ್ಯಾಬ್ ನಲ್ಲೇ ನೇಣು ಬಿಗಿದುಕೊಂಡು ಲ್ಯಾಬ್ ಬೋಧಕ ಸಾವು

ಕಾಲೇಜಿನ‌ ಲ್ಯಾಬ್ ನಲ್ಲೇ ನೇಣು ಬಿಗಿದುಕೊಂಡು ಲ್ಯಾಬ್ ಬೋಧಕ ಸಾವು

ಶಿವಮೊಗ್ಗ: ನಗರದ ಖಾಸಗಿ ಕಾಲೇಜಿನ ಸಿಬ್ಬಂದಿಯೊಬ್ಬರು ಕಾಲೇಜಿನ ಪ್ರಯೋಗ ಶಾಲೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಶಿವಮೊಗ್ಗದ ಸಾಗರ ರಸ್ತೆಯ ಲ್ಲಿರುವ ಈ  ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಧೃವಕುಮಾರ್ (೪೭) ಸೋಮವಾರ  ಮಧ್ಯಾಹ್ನ ಲ್ಯಾಬೊರೇಟರಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

ಇವರು ಲ್ಯಾಬ್ ಇನ್‌ಸ್ಟ್ರಕ್ಟರ್ ಆಗಿ ವರ್ಕ್ ಮಾಡುತ್ತಿದ್ದರು. ಮೂಲತಃ ಚನ್ನಗಿರಿ ತಾಲೂಕಿನ ಬೊಮ್ಮೇನಹಳ್ಳಿಯವರಾಗಿದ್ದ ಇವರು ಆಯನೂರಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಎರಡು ತಿಂಗಳ ಹಿಂದೆ ಧೃವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಬಚಾವಾಗಿದ್ದ ಇವರು  ಸೋಮವಾರ  ಕಾಲೇಜಿನ ಪ್ರಯೋಗಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮಧ್ಯಾಹ್ನ ಸಹಪಾಠಿಗಳೊಬ್ಬರು ಊಟಕ್ಕೆ ಕರೆಯಲು ತೆರಳಿದಾಗ ದೃವ ಕುಮಾರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸಾವಿನ ಕುರಿತು ಪೊಲೀಸರು ಪ್ರಕರಣ ದಾಖಲಿಸಿ, ಶವವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

About The Author

Leave a Reply

Your email address will not be published. Required fields are marked *

Exit mobile version