Ripponpete | ಶಿಕ್ಷಕರುಗಳನ್ನು ಸಮಾಜ ಗೌರವಿಸುತ್ತದೆ: ಎಸ್ ಎಲ್ ಭೋಜೇಗೌಡ
ಹೊಸನಗರ ತಾಲೂಕು ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರುಗಳ ಕಾರ್ಯಗಾರ ಶಿಕ್ಷಕರುಗಳನ್ನು ಸಮಾಜ ಗೌರವಿಸುತ್ತದೆ: ಎಸ್ ಎಲ್ ಭೋಜೇಗೌಡ ರಿಪ್ಪನ್ ಪೇಟೆ : ಸಮಾಜದ ಸೇವೆಯಲ್ಲಿ ಅತ್ಯುನ್ನುತವಾದ ಸೇವೆಯನ್ನು ನೀಡುತ್ತಿರುವವರು ಶಿಕ್ಷಕರುಗಳು. ಶಿಕ್ಷಕರುಗಳನ್ನು ಸಮಾಜ ಗೌರವಿಸುತ್ತದೆ ಎಂದು ನೈರುತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್ ಎಲ್. ಭೋಜೇಗೌಡ ಹೇಳಿದರು. ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಹೊಸನಗರ ತಾಲೂಕು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರುಗಳು ಸಮಾಜದ ಮುಖ್ಯ…


