ಬಲೂನ್ ಗಂಟಲಲ್ಲಿ ಸಿಲುಕಿ ಬಾಲಕ ಸಾವು
ಶಿರಸಿ : ಬಲೂನ್ ಊದುತ್ತಿದ್ದ ವೇಳೇ ಆಕಸ್ಮಿಕವಾಗಿ ಅದು ಗಂಟಲಲ್ಲಿ ಸಿಲುಕಿ ಉಸಿರುಟ್ಟಿ ಬಾಲಕನೊಬ್ಬ ಸಾವನ್ನಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ನವೀನ್ ನಾರಾಯಣ್ (13) ಮೃತ ದುರ್ದೈವಿ.
ಬಲೂನ್ ಗೆ ಗಾಳಿ ತುಂಬಿ ಆಟವಾಡುತ್ತಿದ್ದ. ಬಲೂನ್ ಗೆ ಗಾಳಿ ತುಂಬುವಾಗ ಉಸಿರು ಎಳೆದುಕೊಳ್ಳುವ ಸಂದರ್ಭದಲ್ಲಿ ಬಲೂನ್ ಬಾಯಿಯ ಒಳಗೆ ಹೋಗಿ, ಗಂಟಲಿಗೆ ಸಿಕ್ಕಿಕೊಂಡಿದೆ. ಇದರಿಂದಾಗಿ ಆತನಿಗೆ ಉಸಿರಾಡಲು ಕಷ್ಟವಾಗಿ, ಅಲ್ಲಿಯೆ ಕುಸಿದು ಒದ್ದಾಡಲು ಆರಂಭಿಸಿದ್ದಾನೆ. ಆತನ್ನ ಆಸ್ಪತ್ರೆಗೆ ಕರೆದೊಯ್ಯಲಾಯ್ತಾದರೂ, ಅಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ.
ಹಳಿಯಾಳ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.



