ಕೆರೆ ಹಾವನ್ನು ಅಟ್ಟಾಡಿಸಿಕೊಂಡು ಬಂದು ಸೂಟ್ ಕೇಸ್ ನಲ್ಲಿ ಅವಿತು ಕುಳಿತ ಬೃಹತ್ ಕಾಳಿಂಗ ಸರ್ಪ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ 11 ಅಡಿ ಉದ್ದದ ಕಾಳಿಂಗ ಸರ್ಪವೊಂದು ಮನೆಯೊಂದರಲ್ಲಿಟ್ಟಿದ್ದ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ. ಮನೆಯ ಟ್ರಂಕ್‌ನಲ್ಲಿದ್ದ ಹಾವನ್ನು ಕಂಡು ಗಾಬರಿಯಾದ ಮನೆಯವರು ಆ ಬಳಿಕ ಉರಗ ಸಂರಕ್ಷಕರ ಮೂಲಕ ಸರ್ಪವನ್ನು ಸುರಕ್ಷಿತವಾಗಿ ಹಿಡಿಸಿದ್ದಾರೆ..
ತೀರ್ಥಹಳ್ಳಿಯ ಊಂಟೂರುಕಟ್ಟೆ ಸಮೀಪದ ಕಟ್ಟೆಕೊಪ್ಪದ ಬಳಿ ಇರುವ ಮುನಿಯಮ್ಮ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಇವರ ಮನೆಯಲ್ಲಿದ್ದ ಟ್ರಂಕ್‌ನಲ್ಲಿ ಕಳೆದ ಭಾನುವಾರ ರಾತ್ರಿ ಹಾವು ಸೇರಿರುವುದು ಗೊತ್ತಾಗಿದೆ. ಕೇರೆ ಹಾವೊಂದನ್ನ ಅಟ್ಟಿಸಿಕೊಂಡು ಬಂದ ಕಾಳಿಂಗ ಮನೆಯೊಳಗೆ ನುಗ್ಗಿದೆ. ಆ ಬಳಿಕ ಭಯಗೊಂಡು ಅಲ್ಲಿಯೇ ಇದ್ದ ಸೂಟ್‌ಕೇಸ್‌ನೊಳಗೆ ಸೇರಿಕೊಂಡಿತ್ತು. ಇದರಿಂದ ಮನೆಯವರು ಗಾಬರಿಯಾದರು.
ಬಳಿಕ ಮನೆಯವರು ಉರಗ ಸಂರಕ್ಷಕ ಚಂದ್ರು ಹಾಗೂ ನರೇಶ್ ಅವರನ್ನಿ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಅವರು 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಅದನ್ನು ಬಿಡುಗಡೆ ಮಾಡಿದ್ದಾರೆ.
ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…
ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…
ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…
ಪೊಲೀಸರ ದಿಢೀರ್ ದಾಳಿ – ಅಕ್ರಮ ಕಸಾಯಿ ಖಾನೆಯಿಂದ ಮಾಂಸ ವಶಕ್ಕೆ , ಪ್ರಕರಣ ದಾಖಲು Police conduct a…
ರಿಪ್ಪನ್‌ಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ನಿರೂಪ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಆಯ್ಕೆ Ripponpete Government…
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…