ಗುರು-ವಿರಕ್ತರ ಜೊತೆ ಭಕ್ತರ ಸಮಾಗಮ

ಗುರು-ವಿರಕ್ತರ ಜೊತೆ ಭಕ್ತರ ಸಮಾಗಮ

ರಿಪ್ಪನ್‌ಪೇಟೆ;-ವೀರಶೈವ ಲಿಂಗಾಯಿತ ಜನಾಂಗದಲ್ಲಿ ಸಾಕಷ್ಟು ಉಪ ಪಂಗಡಗಳಿದ್ದರೂ ಕೂಡಾ ಸಂಘಟಿತರಾಗಿ ಸಮಾಜವನ್ನು ಸರಿದಾರಿಗೆ ತಂದು ನಮ್ಮ ಗುರು ವಿರಕ್ತರಲ್ಲಿನ ಪರಂಪರೆ ಬೇರೆ ಬೇರೆಯಾಗಿದರೂ ಕೂಡಾ ಧರ್ಮ ಭೋಧನೆಯು ಸಮಾಜಕ್ಕೆ ಮಾರ್ಗದರ್ಶನ ಮಾಡುವ ಗುರಿ ಒಂದೇ ಆಗಿರುತ್ತದೆಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ರಿಪ್ಪನ್‌ಪೇಟೆ ಸಮೀಪದ ಕೋಣಂದೂರು ಶ್ರೀಶಿವಲಿಂಗೇಶ್ವರ ಬೃಹನ್ಮಠದಲ್ಲಿ ಶಿಲಾಮಂಟಪ ಉದ್ಘಾಟನೆ ಕರ್ತೃ ಗದ್ದುಗೆ ಲಿಂಗು ಪ್ರತಿಷ್ಠಾ¥ನೆ ಗುರುನಿವಾಸ ಲೋಕಾರ್ಪಣೆ ಚಂದ್ರಶಾಲೆ ಉದ್ಘಾಟನೆ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಗುರುವಿರಕ್ತರ ಸಮಾಗಮ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಗುರು ಜ್ಞಾನ ಸಂಕೇತ.ವಿರಕ್ತ ವೈರಾಗ್ಯಕ್ಕೆ ಹೆಚ್ಚು ಅಧ್ಯತೆ ನೀಡಿದರೆ ಭಕ್ತರು ಭಕ್ತಿಹೊಂದಿದವರು ಪೂಜೆ ಮಾಡುವುದು ಶ್ರೇಷ್ಟ ಪರಂಪರೆ ಭಕ್ತ ಪರಂಪರೆಯೇ ತ್ರಿವಳಿ ಸಂಗಮ ಎಂದರು.

ಮನೆ ಅಸ್ತಿ ಮಠ ಬಿಟ್ಟು ಗೆಡ್ಡೆ ಗೆಣಸು ತಿಂದು ಕಠಿಣವಾಗಿ ತಪಸ್ವಿಯಾಗಿ ದೊರೆಯದ ಸೇವೆ ನಿಷ್ಟೆಮಾಡಿದರೆ  ಪುಣ್ಯ ಪ್ರಾಪ್ತಿಯಾಗದು.ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಮಠದಲ್ಲಿನ ಕೊರತೆಯನ್ನು ನಿಭಾಯಿಸಿಕೊಂಡು ಭಕ್ತರ ಪ್ರೀತಿ ವಿಶ್ವಾಸಗಳಿಸಿದಾಗ ಮಾತ್ರ ಮಠದ ಕ್ರೀಯಾಶೀಲ ಪೀಠಾಧಿಕಾರಿಯಾಗಲು ಸಾದ್ಯಯೆಂಬುದಕ್ಕೆ ಕೋಣಂದೂರು ಬೃಹನ್ಮಠದ ಶ್ರೀಗಳೇ ಪ್ರತ್ಯೇಕ್ಷ ಸಾಕ್ಷಿಯಾಗಿದ್ದಾರೆ. ಮಡಿಲು ತುಂಬಿ ಸಮಾಜಕ್ಕೆ ನುಡಿ ತುಂಬುವ ಕೆಲಸ ಮಾಡಿದ್ದಾರೆ. ಗುರು ವಿರಕ್ತ ಎರಡು ಪರಂಪರೆ ಒಂದೆ ಆಗಿದೆ.ಕಣ್ಣು ಎರಡಾದರೂ ನೋಡುವ ದೃಷ್ಟಿ ಒಂದೇ ಸಮಾಜದ ಕಲ್ಯಾಣ ಧರ್ಮದ ಆಭಿವೃದ್ದಿ ಎರಡು ಪರಂಪರೆ ಒಂದೇ ದೃಷ್ಟಿ ಕೋನದ ಕಡೆ ಸಾಗುವುದರಿಂದ ವೀರಶೈವ ಲಿಂಗಾಯಿತ ಸಮಾಜ ಸಂಘಟಿತರಾಗವAತೆ ಶ್ರೀ ಕೋಣಂದೂರು ಬೃಹನ್ಮಠ  ಗುರು ವಿರಕ್ತ ಸಮಾಗಮದ ಮೂಲಕ ಜಗದ್ಗುರುಗಳನ್ನು ಒಂದಡೆ ಸೇರಿಸುವ ಮಹಾತ್ಕಾರ್ಯ ಮಾಡಿದ್ದಾರೆಂದು ಹೇಳಿದರು.

ಆನಂದಪುರ ಮುರುಘಾರಾಜೇಂದ್ರ ಮಹಾಸಂಸ್ಥಾನ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ ಅಶೀರ್ವಚನ ನೀಡಿ ಒಂದು ಹೂವು ಸೂರ್ಯನ ಕಡೆ ತಿರುಗುತ್ತಿರುತ್ತದೆ.ಹಾಗೆ ನಮ್ಮ ದಾರಿ ಧರ್ಮದೆಡೆಗೆ.ಬೃಹನ್ಮಠ ಎಂಬ ಹೆಸರಿನಲ್ಲಿ ಬೃಹತ್ ಮಠ.ಆಸ್ತಿ ಆಂತಸ್ತು ಇಲ್ಲದೆ ಆಪಾರ ಭಕ್ತ ಸಮೂಹ ಪಡೆದಿರುವುದು ಈ ಮಠಕ್ಕೆ ಆಸ್ತಿ.ಫಲವತ್ತಾದ ಭೂಮಿಯಲ್ಲಿ ಬೀಜವನ್ನು ಉತ್ತಿದರೆ ಮಾತ್ರ ಉತ್ತಮ ಬೆಳೆ ಬೆಳೆಯಲು ಸಾಧ್ಯವೆಂಬುದಕ್ಕೆ ಇಲ್ಲಿನ ಶ್ರೀಗಳು ಭಕ್ತರ ಮನೆಮನದಲ್ಲಿ ಅಚ್ಚಳಿಯುವಂತೆ  ಭಕ್ತರಲ್ಲಿ  ಆಧ್ಯಾತ್ಮದ  ಶಕ್ತಿ ತುಂಬಿ ಸಮಾಜಕ್ಕೆ ಕೊಟ್ಟರೆ ಸಮಾಜ ಸಂಪನ್ಮೂಲವನ್ನು ಕೊಟ್ಟಾಗ ಮಾತ್ರ ಮಠಗಳು ಸಮಾಜಮುಖಿ ಕೆಲಸ ಮಾಡುತ್ತವೆ ಎಂದುಕ್ಕೆ ಶ್ರೀಮಠವೇ ಸಾಕ್ಷಿಯಾಗಿದೆ.

ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮದ ಉದ್ಘಾಟನೆ ನರೆವೇರಿಸಿ ಮಾತನಾಡಿ ಗುರು-ವಿರಕ್ತರ ಗುರಿ ಒಂದೇ ಆಗಿದ್ದು ಸಮಾಜದ ಸಂಘಟನೆಯೊಂದಿಗೆ ರೇಣುಕರ ಮತ್ತು ಬಸವಾದಿ ಪ್ರಮಥರ ಸಂದೇಶವನ್ನು ನಮ್ಮ ಬದುಕಿನಲ್ಲಿ ಆಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸಲು ಇಂತಹ ಸಮಾಗಮದ ಮೂಲಕ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಕಾರ್ಯವನ್ನು ಇನ್ನೂ ಹೆಚ್ಚುಹೆಚ್ಚು ಮಾಡಿ ಸಮಾಜದಲ್ಲಿ ಜಾಗೃತಿಗೊಳಿಸುವ ಕೆಲಸ ಅಗತ್ಯವಿದೆ ಎಂದರು.

ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್,ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಅಲುವಳ್ಳಿ,ಆಖಿಲಭಾರತ ವೀರಶೈವ ಲಿಂಗಾಯಿತ ರಾಷ್ಟಿಯ ಮಹಿಳಾ ಘಟಕದ ಉಪಾಧ್ಯಕ್ಷೆ ವಿನುತಾರವಿ, ಉದ್ಯಮಿ ಕೆ.ಆರ್.ಪ್ರಕಾಶ್,ಕೋಣಂದೂರು  ಗ್ರಾಮ ಪಂಚಾಯಿತ್ ಆಧ್ಯಕ್ಷ ಸತೀಶ ಮತ್ತು  ಜಿಲ್ಲಾ ಮoಧೀಶರ ಪರಿಷತ್‌ನ ಮಠಾಧೀಶರುಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವೀರಶೈವ ಜ್ಞಾನಕಿರಣ’’ಗ್ರಂಥವನ್ನು ಬಿಡುಗಡೆ ಮಾಡಲಾಯಿತು.ಮತ್ತು ಶ್ರೀಶೈಲ ಮಠದಿಂದ ಬೆಳಕೊಡು ಹಾಲಸ್ವಾಮಿಗೌಡರಿಗೆ “ಸೇವಾಭಾಸ್ಕರ’’ ಪ್ರಶಸ್ತಿ ಪ್ರಧಾನ ಮಾಡಿ ಉಭಯ ಜಗದ್ಗುರುಗಳು ಆಶೀರ್ವದಿಸಿದರು.

ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ ಸ್ವಾಗತಿಸಿದರು.ಶಾಂತಾ ಅನಂದ ನಿರೂಪಿಸಿದರು.ಜೆ.ಜಿ.ಸದಾನಂದ ವಂದಿಸಿದರು. 

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…

1 hour ago

ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…

18 hours ago

ಪೊಲೀಸರ ದಿಢೀರ್ ದಾಳಿ –  ಅಕ್ರಮ ಕಸಾಯಿ ಖಾನೆಯಿಂದ ಮಾಂಸ ವಶಕ್ಕೆ , ಪ್ರಕರಣ ದಾಖಲು

ಪೊಲೀಸರ ದಿಢೀರ್ ದಾಳಿ –  ಅಕ್ರಮ ಕಸಾಯಿ ಖಾನೆಯಿಂದ ಮಾಂಸ ವಶಕ್ಕೆ , ಪ್ರಕರಣ ದಾಖಲು Police conduct a…

19 hours ago

ರಿಪ್ಪನ್‌ಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ನಿರೂಪ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಆಯ್ಕೆ

ರಿಪ್ಪನ್‌ಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ನಿರೂಪ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಆಯ್ಕೆ Ripponpete Government…

20 hours ago

ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ

ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…

2 days ago

ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ

ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…

2 days ago