Headlines

ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲೊಬ್ಬ ರೌಡಿ ಡಾಕ್ಟರ್

ಶಿವಮೊಗ್ಗ ಜಿಲ್ಲೆಯ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಡಾ ಪ್ರತಿಮಾ ರಂತಹ ವೈದ್ಯರು ಬಡವರಿಗೆ ಅತ್ಯುತ್ತಮ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದ್ದು ಜಿಲ್ಲೆಯಲ್ಲಿಯೇ ಹೆಸರು ಮಾಡಿದೆ ಎಂದರೆ ತಪ್ಪಾಗಲಾರದು ಆದರೆ ಇಲ್ಲಿರುವ ನಾಗೇಂದ್ರಪ್ಪ ಎಂಬ ರೌಡಿ , ಹಣಬಾಕ ವೈದ್ಯನಿಂದ ಈ ಆಸ್ಪತ್ರೆಯು ಕಳಂಕದತ್ತ ಹೊರಟಿರುವುದು ವಿಪರ್ಯಾಸ..!!

ಈ ನಾಗೇಂದ್ರಪ್ಪನ ಆಟ ಎಷ್ಟಿದೆಯೆಂದರೆ ಇಲ್ಲಿ ನಾನಾಡಿದ್ದೇ ಆಟ, ನಾನೇ ಡಾಕ್ಟರ್ ನಾ ಹೇಗಿರಬೇಕು ಹಾಗೆ ಇರ್ತೀನಿ ಅದನ್ನು ಹೇಳಕ್ಕೆ ನೀನ್ಯಾರು? ಎಫ್ರಾನ್, ಸ್ಕೆತಸ್ಕೋಪ್ ಹಾಕಿಕೊಂಡ್ರೆ ವೈದ್ಯ, ಕೈಯಲ್ಲಿ ಲಾಂಗ್, ಮಚ್ಚು ಹಿಡಿದ್ರೆ ರೌಡಿ. ಇಲ್ಲಿ ಡಿಸಿ, ಎಸ್‌ಪಿ, ಮೀಡಿಯಾ ಯಾರೇ ಬಂದ್ರೂ ಏನೂ ಮಾಡಿಕೊಳ್ಳೋಕೆ ಆಗಲ್ಲ ಎಂದು ಸಿನಿಮಾ ಡೈಲಾಗ್ ಹೊಡೆಯುತ್ತಾ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನನ್ನ ಕ್ಲಾಸ್ ಮೇಟ್ ಎಂದು ದರ್ಪದಿಂದ ವರ್ತಿಸುವ ಈ ವೈದ್ಯನ ಎಡವಟ್ಟು ಒಂದಾ ಎರಡಾ? ಸರಿಯಾಗಿ ಹೆರಿಗೆ ಮಾಡದೇ ಇರೋದು, ಹೆರಿಗೆ ಮಾಡಿದ ಮೇಲೆ ಹೊಲಿಗೆ ಸರಿಯಾಗಿ ಹಾಕದೇ ನಿರ್ಲಕ್ಷ್ಯ ತೋರಿಸೋದು ಸೇರಿದಂತೆ ಹಲವಾರು.ಈ ರೌಡಿ ಡಾಕ್ಟರ್ ಮಾಡೋ ಎಡವಟ್ಟಿನಿಂದಾಗಿ ಶಿಕ್ಷೆ ಅನುಭವಿಸಿದವರು ನೂರಾರು ಬಡ ಗರ್ಭಿಣಿಯರು, ಬಾಣಂತಿಯರು, ಮಹಿಳೆಯರು. ಈತನ ನವರಂಗಿ ಆಟಗಳಿಗೆ ಆಸ್ಪತ್ರೆಯಲ್ಲಿರುವ ಕೆಲವು ರೋಹಿಣಿ ನಕ್ಷತ್ರಗಳು ಸಾಥ್.

ಈ ಆಸ್ಪತ್ರೆಯಲ್ಲಿ ವಿಷನಾಗ ಡ್ಯೂಟಿಯಲ್ಲಿದ್ದಾಗ ಹೆರಿಗೆಗೂ ಮುಂಚೆ 5 ರಿಂದ 10 ಸಾವಿರ ಹಣ ಲಂಚ ಕೊಟ್ಟರೆ ನಿಮಗೆ ರಾಯಲ್ ಟ್ರೀಟ್ ಮೇಂಟ್ ಸ್ಪೆಷಲ್ ವಾರ್ಡ್ , ಅತ್ಯುತ್ತಮ ನರ್ಸ್ ಸೇವೆ ಎಲ್ಲಾ ಅವನ ಕಡೆಯಿಂದ ಲಭ್ಯ , ಒಂದು ವೇಳೆ ನೀವು ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಗೆ ಹಣ ಯಾಕೆ ನೀಡಬೇಕು ಅಂತ ಸುಮ್ಮನಿದ್ದರೆ ಆ ಬಾಣಂತಿಗೆ ಬೆಡ್ ಕೂಡಾ ಸಿಗಲು ಬಿಡುವುದಿಲ್ಲ ಈ ಪಾಪಿ ಡಾಕ್ಟರ್ ನಾಗೇಂದ್ರಪ್ಪ…

ಈ ಹಿಂದೆ ಡಾ.ನಾಗೇಂದ್ರಪ್ಪನ ಎಡವಟ್ಟಿನ ಕಾರಣ ಬಾಣಂತಿಯೊಬ್ಬರು ಹೆರಿಗೆಯ ನಂತ್ರ ಹೊಟ್ಟೆ ಊತ ಬಂದು, ಹೊಟ್ಟೆಯೊಳಗಡೆ ರಕ್ತ್ರಸ್ತ್ರಾವ ಉಂಟಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಾವು ಬದುಕಿನ ನಡುವೆ ಚಿಕಿತ್ಸೆಯ ನಂತ್ರ ಗುಣಮುಖರಾಗಿದ್ದರು.ಈ ಬಗ್ಗೆ ಕೆಲವೊಂದು ಮಾದ್ಯಮಗಳು ವರದಿ‌ ಮಾಡಿದ್ದವು.. ಹೀಗೆ ರೋಗಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುವಂತ ಡಾ.ನಾಗೇಂದ್ರಪ್ಪ ಸಾಗರದಲ್ಲಿ ಬೇಡವೇ ಬೇಡವೆಂದು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಇಲ್ಲಿಂದ ಎತ್ತಂಗಡಿ ಮಾಡಿದ್ದರು.ಆದರೇ ಮತ್ತೆ ರಾಜಕೀಯ ಒತ್ತಡದ ಮೂಲಕ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮರಳಿ ವಕ್ಕರಿಸಿರುವ ನಾಗೇಂದ್ರಪ್ಪ ತನ್ನ ಹಳೇ ಛಾಳಿ ಬಿಟ್ಟು ಎಚ್ಚೆತ್ತುಕೊಂಡು ವೈದ್ಯೋ ನಾರಾಯಣೋ ಹರಿಯ ರೀತಿಯಲ್ಲಿ ಕೆಲಸ ಮಾಡಬೇಕಿದ್ದಂತ ಡಾ.ನಾಗೇಂದ್ರಪ್ಪ ಮಾತ್ರ, ಈಗ ಮತ್ತೆ ಗೂಂಡಾ ವರ್ತನೆ ತೋರಿದ್ದಾರೆ.

ಈ ನಾಗೇಂದ್ರಪ್ಪ ಈಗ ಸರ್ಕಾರಿ ವೈದ್ಯ ಬಾಣಂತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ಕೆಲವು ಸಂಘಟನೆಗಳು ಆರೋಪಿಸುತ್ತಿವೆ.

ಮಕ್ಕಳ ಶಸ್ತ್ರ ಚಿಕಿತ್ಸೆಗಾಗಿ ಆಗಮಿಸಿದ್ದಂತ ಸಾಗರ ತಾಲ್ಲೂಕಿನ ಚಿಪ್ಪಳಿಯ ಚೈತ್ರ ಎಂಬುವರಿಗೆ ಆಪರೇಷನ್ ನಂತರ ಡಾ.ನಾಗೇಂದ್ರಪ್ಪ ಅವರು ಕಪಾಳ ಮೋಕ್ಷ ಮಾಡಿರುವುದಾಗಿ ಆರೋಪಿಸಿದ್ದಾರೆ. ಡಾ.ನಾಗೇಂದ್ರಪ್ಪ ಆಪರೇಷನ್ ಮಾಡಿದ ನಂತರ ಹೊಲಿಗೆ ಹಾಕುವ ಸಂದರ್ಭದಲ್ಲಿ ನನಗೆ ಕಪಾಳಕ್ಕೆ ಭಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನೂ ಚೈತ್ರಾ ರವರ ಪತಿ ಮಾತನಾಡಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಂತ ಚೈತ್ರ ಅವರನ್ನು ಮಕ್ಕಳ ಆಪರೇಶನ್ ಗೆ ಕರೆತರಲಾಗಿತ್ತು. ಪ್ರಜ್ಞೆ ತಪ್ಪಿದ್ದಾರೆ ಅಂತ ಡಾ.ನಾಗೇಂದ್ರಪ್ಪ ಹೀಗಾ ಕಪಾಳಕ್ಕೆ ಹೊಡೆಯೋದು.? ಇವರದ್ದು ಇದೇನು ಮೊದಲೇನಲ್ಲ. ಈ ಮೊದಲು ಅನೇಕ ಎಡವಟ್ಟುಗಳನ್ನು ಮಾಡಿದ್ದಾರೆ. ಡಾ.ನಾಗೇಂದ್ರಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸೇವೆಯಿಂದ ಅಮಾನತುಗೊಳಿಸಬೇಕು ಎಂಬುದಾಗಿ ಆಗ್ರಹಿಸಿದರು.

ಡಾ.ನಾಗೇಂದ್ರಪ್ಪ ಅವರು ಬಾಣಂತಿ ಮಹಿಳೆಗೆ ಕಪಾಳಮೋಕ್ಷ ಮಾಡಿದಂತಹ ವಿಷಯ ತಿಳಿದಂತ ಮೊಗವೀರ ಸಮುದಾಯ ಹಾಗೂ ಭಜರಂಗ ದಳದ ಮುಖಂಡರು ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಡಾ.ನಾಗೇಂದ್ರಪ್ಪ ಅವರ ಎಡವಟ್ಟು, ಗುಂಡಾಗಿರಿ ಹೆಚ್ಚಾಗಿದೆ. ಅವರನ್ನು ಕೂಡಲೇ ಅಮಾತನಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಒಟ್ಟಾರೆಯಾಗಿ ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿ ಉತ್ತಮ ನಡೆಯನ್ನು ತೋರಬೇಕಿದ್ದಂತ ಡಾ.ನಾಗೇಂದ್ರಪ್ಪ ಅವರೇ ಏನಿದು ನಿಮ್ಮ ಗೂಂಡಾಗಿರಿ.? ಜಿಲ್ಲಾ ಉಸ್ತುವಾರಿ ಸಚಿವರು ನಿಮ್ಮ ಕ್ಲಾಸ್ ಮೇಟ್ ಎನ್ನುವ ಅಹಂಕಾರವೇ..!!? ಸಾಗರದಂತಹ ಉತ್ತಮ ಆಸ್ಪತ್ರೆಯಲ್ಲಿ ನಿಮ್ಮಂತಹ ಹಣಬಾಕ , ಗೂಂಡಾ ವರ್ತನೆಯ ವೈದ್ಯರ ಅವಶ್ಯಕತೆಯಿಲ್ಲ ದಯವಿಟ್ಟು ಆಸ್ಪತ್ರೆ ಬಿಟ್ಟು ತೊಲಗಿ….

ಈ ವೈದ್ಯನ ಯಡವಟ್ಟಿನ ಬಗ್ಗೆ ಆರೋಗ್ಯ ಇಲಾಖೆ , ಜಿಲ್ಲಾ ಉಸ್ತುವಾರಿ ಸಚಿವರು ಇನ್ನದರೂ ಸೂಕ್ತ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

-ರಫ಼ಿ ರಿಪ್ಪನ್‌ಪೇಟೆ

Leave a Reply

Your email address will not be published. Required fields are marked *

Exit mobile version