ಸದಸ್ಯತ್ವ ಅಭಿಯಾನ – ಆಂದೋಲನದ ಅಭಿಯಾನವಾಗಬೇಕು – ಸಂಸದ ಬಿ ವೈ ರಾಘವೇಂದ್ರ
ಹೊಸನಗರ : ಬಿಜೆಪಿ ಹೊಸನಗರ ಮಂಡಲದ ನಗರ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ನಗರ ಮತ್ತು ನಿಟ್ಟುರೂ ಹಾಗೂ ಹೊಸನಗರ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಮಾರುತಿಪುರ ಮತ್ತು ಕಸಬಾ ಹಾಗೂ ಕೆರೆಹಳ್ಳಿ ಭಾಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಪ್ರವಾಸ ಕೈಗೊಂಡು “ಸದಸ್ಯತ್ವ ಅಭಿಯಾನ-2024” ರಲ್ಲಿ ಭಾಗಿಯಾದರು.
ನಂತರ ಮಾತನಾಡಿ ಭಾರತೀಯ ಜನತಾ ಪಕ್ಷ ಇಂದು ವಿಶ್ವದ ಅತಿ ದೊಡ್ಡ ಪಕ್ಷವಾಗಿ ವಿಶ್ವದಲ್ಲಿ ಗುರುತಿಸಿಕೊಂಡಿದೆ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಅಂತ್ಯೋದ್ಯಯ ಪರಿಕಲ್ಪನೆಯಡಿ ಐತಿಹಾಸಿಕ ಯೋಜನೆಗಳನ್ನು ಜಾರಿಗೆ ತಂದು ಶ್ರೀಸಾಮಾನ್ಯನ ಆರ್ಥಿಕ ಅಭಿವೃದ್ಧಿಗೆ ಕಟಿಬದ್ಧವಾಗಿದೆ.ಇತಿಹಾಸ ಪುಟಗಳಲ್ಲಿ ದಾಖಲಾಗುವಂತ ನಿರ್ಧಾರಗಳನ್ನು ತೆಗೆದುಕೊಂಡು ಮತದಾರರ ಬಾಂಧವರಲ್ಲಿ ಹೊಸ ಭರವಸೆ ಮೂಡಿಸಿದೆ. ಸ್ವತಂತ್ರ ಭಾರತ ನೋಡಿರದ ಅಭಿವೃದ್ಧಿ ಕಾರ್ಯಗಳು ದೇಶದಲ್ಲೇಡೆ ನಿರಂತರವಾಗಿ ಸಾಗಿದೆ ಎಂದರು.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಪ್ರಬುದ್ಧ ಆಡಳಿತದಿಂದ ಭಾರತ ವಿಶ್ವಗುರು ಆಗುವತ್ತ ದಾಪುಗಾಲು ಇಟ್ಟಿದೆ. ಭಾರತದೊಂದಿಗೆ ಸ್ನೇಹದ ಹಸ್ತ ಚಾಚಲು ವಿಶ್ವದ ಮುಂದುವರೆದ ರಾಷ್ಟ್ರಗಳು ಹಾತೊರೆಯುತ್ತಿದೆ.ಈ ರೀತಿಯ ಆತ್ಮವಿಶ್ವಾಸದ ದಿಟ್ಟ ಹೆಜ್ಜೆಯಿಂದ ದೇಶವಾಸಿಗಳು ಪಕ್ಷದ ಮೇಲೆ ಹೆಚ್ಚಿನ ವಿಶ್ವಾಸ ಮತ್ತು ನಂಬಿಕೆ ಇಟ್ಟು ಕೇಂದ್ರದಲ್ಲಿ ಸತತ ಮೂರು ಬಾರಿ ಹರಸಿ ಹಾರೈಸುತ್ತಿದ್ದಾರೆ. ಈ ವಿಶ್ವಾಸದ ಹೆಜ್ಜೆಯಲ್ಲಿ ನಾವೆಲ್ಲರೂ ಗಟ್ಟಿಯಾದ ಹೆಜ್ಜೆಯಿಟ್ಟು ಈ ವಿಶೇಷ ಅಭಿಯಾನವನ್ನು ಆಂದೋಲನವಾಗಿ ಪರಿವರ್ತಿಸೋಣ ಎಂದು ಕರೆಕೊಡಲಾಯಿತು.
ಈ ಸಂದರ್ಭದಲ್ಲಿ ಹೊಸನಗರ ಮಂಡಲ ಬಿಜೆಪಿ ಅಧ್ಯಕ್ಷ ಸುಬ್ರಹ್ಮಣ್ಯ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಪ್ರಮುಖರಾದ ದತ್ತಾತ್ರೇಯ , ಗಣಪತಿ , ಸುರೇಶ್ ಸ್ವಾಮಿರಾವ್ , ಯುವರಾಜ್, ರಾಜೇಶ್ , ಉಮೇಶ್ ಅವರು ಸೇರಿದಂತೆ ಇನ್ನು ಅನೇಕ ಮುಖಂಡರು ಉಪಸ್ಥಿತರಿದ್ದರು.
ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…
ಪೊಲೀಸರ ದಿಢೀರ್ ದಾಳಿ – ಅಕ್ರಮ ಕಸಾಯಿ ಖಾನೆಯಿಂದ ಮಾಂಸ ವಶಕ್ಕೆ , ಪ್ರಕರಣ ದಾಖಲು Police conduct a…
ರಿಪ್ಪನ್‌ಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ನಿರೂಪ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಆಯ್ಕೆ Ripponpete Government…
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…
ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…