ಅನಾಥ ಶವಗಳ ಸಂಸ್ಕಾರ ಮಾಡುತಿದ್ದ ತಂದೆ-ಮಗಳಿಗೆ ಶಿವಮೊಗ್ಗ ಪೊಲೀಸರಿಂದ ವಿಶೇಷ ಗೌರವ ಸನ್ಮಾನ
ಹಲವು ವರ್ಷಗಳಿಂದ ಅನಾಥ ಶವಗಳನ್ನು ಸಂಸ್ಕಾರ ಮಾಡುತ್ತಾ ಬಂದಿರುವ ತಂದೆ ಹಾಗೂ ಮಗಳ ನಿಸ್ವಾರ್ಥ ಸೇವೆಗೆ ಶಿವಮೊಗ್ಗ ಪೊಲೀಸರು ವಿಶೇಷ ರೀತಿಯಲ್ಲಿ ಗೌರವಿಸಿ ಸನ್ಮಾನಿಸಿದ್ದಾರೆ.
ಶಿವಮೊಗ್ಗ ಟೌನ್ ಗಾಡಿಕೊಪ್ಪದ ನಿವಾಸಿ ರವಿ ಎಸ್ ಮತ್ತು ಮಗಳು ಧನುಶ್ರೀ 2005ರಿಂದ ಜಿಲ್ಲೆಯಲ್ಲಿ ಅನಾಥ ಶವಗಳ ಬಗ್ಗೆ ಮಾಹಿತಿ ಸಿಕ್ಕಿದರೆ, ಅಥವಾ ಪೊಲೀಸ್ ಇಲಾಖೆ ಮಾಹಿತಿ ನೀಡಿದರೆ ಅಂತಹ ಶವಗಳನ್ನು ಸಾಗಿಸಿ ಸಂಸ್ಕಾರ ಮಾಡುತ್ತಿದ್ದಾರೆ.
ತಂದೆ-ಮಗಳ ನಿಸ್ವಾರ್ಥ ಸೇವೆ ಕಂಡು ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ರವಿ ಎಸ್ ಹಾಗೂ ಮಗಳು ಧನುಶ್ರೀ ಇಬ್ಬರನ್ನು ಗೌರವಿಸಿ ಸನ್ಮಾನಿಸಲಾಯಿತು.
ಶಿವಮೊಗ್ಗ ಜಿಲ್ಲಾ ಪೊಲಿಸ್ ಕಚೇರಿಯಲ್ಲಿ ರವಿ ಎಸ್ ಹಾಗೂ ಮಗಳು ಧನುಶ್ರೀಗೆ ಎಸ್ ಪಿ ಮಿಥುನ್ ಕುಮಾರ್ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈ ಎಸ್ ಪಿ ಬಾಬು ಆಂಜನಪ್ಪ, ಸುರೇಶ್ ಎಂ ಉಪಸ್ಥಿತರಿದ್ದರು.
ಚಾಲಕನ ನಿಯಂತ್ರಣ ತಪ್ಪಿ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್ - ತಪ್ಪಿದ ಭಾರಿ ಅನಾಹುತ Private bus…
ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆಗೆ ಚಾಲನೆ - ಮಳೆಯಲ್ಲೂ ಮುಂದುವರಿದ ಪಾದಯಾತ್ರೆ MLA Belur Gopalakrishna and RM Manjunath…
ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಕ್ಕೆ ಹೊಸನಗರ ತಾಲ್ಲೂಕು ವಕೀಲರ ಸಂಘದ ಸಂಪೂರ್ಣ ಬೆಂಬಲ Hosanagara Taluk Advocates Association extends…
ಅಕ್ರಮ ಬಂದೂಕಿನಿಂದ ಬೀದಿ ನಾಯಿಯ ಬರ್ಬರ ಹತ್ಯೆ - ಆರೋಪಿ ಅರೆಸ್ಟ್! Sagar police arrested a man accused…
ಉಚಿತ ಸೆಲ್‌ಫೋನ್ ರಿಪೇರಿ ತರಬೇತಿ: ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನ Free 31-day mobile phone repair training for…
ಹೊಸನಗರದಲ್ಲಿ ನಾಳೆ ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಬಹಿರಂಗ ಸಭೆ Farmers and agricultural workers will hold a…