Headlines

ತುಂಡಾಗಿದ್ದ ಕೈಯನ್ನು ಜೋಡಿಸಿದ ಶಿವಮೊಗ್ಗದ ವೈದ್ಯರು

ತುಂಡಾಗಿದ್ದ ಕೈಯನ್ನು ಜೋಡಿಸಿದ ಶಿವಮೊಗ್ಗದ ವೈದ್ಯರು

ಶಿವಮೊಗ್ಗ ಆಸ್ಪತ್ರೆಯ ವೈದ್ಯರು ತುಂಡಾಗಿದ್ದ ಕೈಯನ್ನು ಜೋಡಿಸುವ ಆಪರೇಷನ್‌ ನಡೆಸಿ ಎರಡು ತುಂಡಾಗಿದ್ದ ಕೈಯನ್ನ ಜೋಡಿಸಿದ್ದಾರೆ. ಎರಡು ತುಂಡಾಗಿದ್ದ ಕೈಗೆ ಶಸ್ತ್ರ ಚಿಕಿತ್ಸೆ ನಡೆಸಿ, ಮರು ಜೋಡಿಸುವಲ್ಲಿ ಸರ್ಜಿ ಸೂಪರ್ ಸ್ಪೆಷಾಲಿಟಿ ತಜ್ಞ ವೈದ್ಯರ ತಂಡ ಯಶಸ್ವಿಯಾಗಿದೆ. 

ಸತತ ಏಳು ಗಂಟೆಗಳ ಕಾಲ ನಡೆದ ಆಪರೇಷನ್ ಸಕ್ಸಸ್ ಆಗಿದೆ.

ಏನಿದು ಘಟನೆ :

ಶಿಕಾರಿಪುರ ತಾಲೂಕಿನ ಸಾಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಮುಂಗೈ ಕತ್ತರಿಸಿಕಿಂಡು ಬಿಟ್ಟಿದ್ದ. ಸಂಪೂರ್ಣವಾಗಿಯೇ ಮುಂಗೈ ಕಟ್ ಆಗಿತ್ತು. ಆ ಮುಂಗೈನ್ನು ಕಾರ್ಮಿಕ ಐಸ್ ಬಾಕ್ಸ್ ನಲ್ಲಿಟ್ಟುಕಿಂಡು ಆಸ್ಪತ್ರೆಗೆ ಬಂದಿದ್ದ. ಶಿವಮೊಗ್ಗದ ಸರ್ಜಿ ಸೂಪರ್ ಸ್ಪೆಷಾಲಿಟಿಗೆ ಓಡಿ ಬಂದಿದ್ದ. ಅಲ್ಲಿನ ವೈದ್ಯರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ತುಂಡಾಗಿದ್ದ ಕೈಯನ್ನು ಜೋಡಿಸುವ ಕೆಲಸ ಮಾಡಿದ್ದಾರೆ. ಮುಂಗೈ‌ ಮಾಂಸ ಖಂಡ, ಮೂಳೆ ಹಾಗೂ ನರಗಳನ್ನು ಯಶಸ್ವಿಯಾಗಿ ಜೋಡಿಸಿದ್ದಾರೆ.

ವ್ಯಾಸ್ಕ್ಯುಲರ್ ಸರ್ಜನ್ ಡಾ.ಚೇತನ್ ಹಾಗೂ ಮೂಳೆ ರೋಗ ತಜ್ಞ ಡಾ.ಮಂಜುನಾಥ್ ನೇತೃತ್ವದ ತಜ್ಞರ ತಂಡ ಈ ಆಪರೇಷನ್ ಮಾಡುವಲ್ಲಿ ಯಶಸ್ವಿಯಾಗಿದೆ‌. ಇನ್ನು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಸತತ ಏಳು ಗಂಟೆಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಈ ಮೂಲಕ ಸಂಪೂರ್ಣವಾಗಿ ಕತ್ತರಿಸಿಕೊಂಡು ಹೋಗಿದ್ದ ಕೈಯನ್ನು ಈಗ ಜೋಡಿಸಿದ್ದಾರೆ. ಸದ್ಯ ಇನ್ನು ಆ ವ್ಯಜ್ತಿ ಆಸ್‌ಒತ್ರೆಯಲ್ಲಿಯೇ ಇದ್ದಾನೆ.‌ ಆದರೆ ಆತನಿಗೆ ವೈದ್ಯರು ಹೊಸ ಬದುಕನ್ನು ಕೊಟ್ಟಿದ್ದಾರೆ. ಮುಂಗೈ ಕತ್ತರಿಸಿಕೊಂಡ ಬಳಿಕ ಕಾರ್ಮಿಕ ಕೂಡ ಆತಂಕಗೊಳ್ಳದೆ ಐಸ್ ಬಾಕ್ಸ್ ಒಳಗೆ ಉಟ್ಟುಕೊಂಡು, ಆಸ್ಪತ್ರೆಗೆ ಬಂದಿದ್ದು, ಆತನ ಕೈ ಮರಳಿ ಪಡೆಯಲು ಅನುಕೂಲವಾಗಿದೆ.

About The Author

Leave a Reply

Your email address will not be published. Required fields are marked *

Exit mobile version