ಹಳ್ಳದಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ಲೈನ್ ದುರಸ್ತಿಪಡಿಸಿದ ಲೈನ್ ಮ್ಯಾನ್ – ವೀಡಿಯೋ ವೈರಲ್ | power man
 ಮಲೆನಾಡಿನಲ್ಲಿ ವರುಣನ ಆರ್ಭಟಕ್ಕೆ ಹಲವಾರು ಕಡೆ ಅನೇಕ ಅವಘಡಗಳು ಸಂಭವಿಸಿದೆ, ಇದೀಗ ವಿದ್ಯುತ್ ಲೈನ್ ಸರಿಪಡಿಸಲು ಹಳ್ಳದಲ್ಲಿ ಈಜಿಕೊಂಡು ಹೋಗಿರುವ ವೀಡಿಯೋ ವೈರಲ್ ಆಗಿದೆ.
 ವಿದ್ಯುತ್ ಸಂಪರ್ಕ ಕಲ್ಪಿಸಲು ಪವರ್ ಮ್ಯಾನ್ ವೊಬ್ಬ ರಭಸವಾಗಿ ಹರಿಯುತ್ತಿರವ ಹಳ್ಳದಲ್ಲಿ ಈಜಿ ವಿದ್ಯುತ್ ಲೈನ್ ಸರಿಪಡಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಅರೇಹಳ್ಳಿ ಗ್ರಾ. ಪಂ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 ನೀರಿನ ಮಧ್ಯೆ ಇದ್ದ ವಿದ್ಯುತ್ ತಂತಿ ತುಂಡಾದ ಹಿನ್ನೆಲೆಯಲ್ಲಿ ಕೆಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ವ್ಯತ್ಯಯಗೊಂಡಿದೆ.
 ಈ ಹಿನ್ನಲೆಯಲ್ಲಿ ಮೆಸ್ಕಾಂ ಸಿಬ್ಬಂದಿ ಸಂತೋಷ್ ಜಲಾವೃತ ಪ್ರದೇಶದಲ್ಲಿರುವ ವಿದ್ಯುತ್ ಕಂಬಕ್ಕೆ ತೆರಳಿ ಸಾಹಸ ಮೆರೆದಿದ್ದಾನೆ. ಆಗುಂಬೆ ಭಾಗಕ್ಕೆ ಕಮ್ಮರಡಿಯ ಸಬ್ ಡಿವಿಜನಿಂದ ಈ ವಿದ್ಯುತ್ ಸಂಪರ್ಕ ಕಲ್ಪಿಸ ಲಾಗಿದೆ. 
 ಕಲಬುರ್ಗಿ ಮೂಲದ ಸಂತೋಷ್ ಆಗುಂಬೆ ಭಾಗದಲ್ಲಿ ಮೆಸ್ಕಾಂ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತಿದ್ದಾನೆ.ಈತನ ಈ ಸಾಹಸದಿಂದ ಮೂರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ ಎನ್ನಲಾಗುತ್ತಿದೆ.
  


