ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರವಾರು ಪಕ್ಷಗಳು ಪಡೆದ ಮತ ಎಷ್ಟು..!?? ಇಲ್ಲಿದೆ ಸಂಪೂರ್ಣ ಮಾಹಿತಿ | Election
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ. ರಾಘವೇಂದ್ರರವರಿಗೆ ಭರ್ಜರಿ ಗೆಲುವಾಗಿದೆ.ಬಂಗಾರಪ್ಪ ಪುತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸಹೋದರಿ, ನಟ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಸೋಲಾಗಿದೆ.ಯಡಿಯೂರಪ್ಪ ವಿರುದ್ದ ಸೆಡ್ಡು ಹೊಡೆದಿದ್ದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಠೇವಣಿ ಕಳೆದುಕೊಂಡಿದ್ದಾರೆ.
ಈ ಲೋಕಸಭಾ ಕ್ಷೇತ್ರವು ಶಿವಮೊಗ್ಗ ಜಿಲ್ಲೆಯ ಏಳು ಹಾಗೂ ಉಡುಪಿ ಜಿಲ್ಲೆಯ ಒಂದು ವಿಧಾನಸಭೆ ಕ್ಷೇತ್ರವನ್ನು ಒಳಗೊಂಡಿದೆ. ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ. ಶಿಕಾರಿಪುರ, ಸೊರಬ, ಸಾಗರ ಹಾಗೂ ಬೈಂದೂರು ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 17.29 ಲಕ್ಷ ಮತದಾರರು ಇದ್ದರು. ಇವರಲ್ಲಿ ಶೇ.78.33 ಮಂದಿ ಮತ ಚಲಾಯಿಸಿದ್ದಾರೆ.
ಸಾಗರ ಕ್ಷೇತ್ರ :
ಬಿ.ವೈ.ರಾಘವೇಂದ್ರ : 95209
ಗೀತಾ ಶಿವರಾಜ್‌ಕುಮಾರ್ : 68690
ಕೆ.ಎಸ್.ಈಶ್ವರಪ್ಪ : 778
ಭದ್ರಾವತಿ ಕ್ಷೇತ್ರ :
ಬಿ.ವೈ.ರಾಘವೇಂದ್ರ : 84208
ಗೀತಾ ಶಿವರಾಜ್‌ಕುಮಾರ್ : 65105
ಕೆ.ಎಸ್.ಈಶ್ವರಪ್ಪ : 3267
ಶಿವಮೊಗ್ಗ ಗ್ರಾಮಾಂತರ :
ಬಿ.ವೈ.ರಾಘವೇಂದ್ರ : 106243
ಗೀತಾ ಶಿವರಾಜ್‌ಕುಮಾರ್ : 66575
ಕೆ.ಎಸ್.ಈಶ್ವರಪ್ಪ : 5555
ಶಿವಮೊಗ್ಗ ಕ್ಷೇತ್ರ :
ಬಿ.ವೈ.ರಾಘವೇಂದ್ರ : 106269
ಗೀತಾ ಶಿವರಾಜ್‌ಕುಮಾರ್ : 71179
ಕೆ.ಎಸ್.ಈಶ್ವರಪ್ಪ : 12154
ತೀರ್ಥಹಳ್ಳಿ ಕ್ಷೇತ್ರ :
ಬಿ.ವೈ.ರಾಘವೇಂದ್ರ : 92993
ಗೀತಾ ಶಿವರಾಜ್‌ಕುಮಾರ್ : 57444
ಕೆ.ಎಸ್.ಈಶ್ವರಪ್ಪ : 2529
ಶಿಕಾರಿಪುರ ಕ್ಷೇತ್ರ :
ಬಿ.ವೈ.ರಾಘವೇಂದ್ರ : 87153
ಗೀತಾ ಶಿವರಾಜ್‌ಕುಮಾರ್ : 75672
ಕೆ.ಎಸ್.ಈಶ್ವರಪ್ಪ : 1969
ಸೊರಬ ಕ್ಷೇತ್ರ :
ಬಿ.ವೈ.ರಾಘವೇಂದ್ರ : 88170
ಗೀತಾ ಶಿವರಾಜ್‌ಕುಮಾರ್ : 70233
ಕೆ.ಎಸ್.ಈಶ್ವರಪ್ಪ : 415
ಬೈಂದೂರು ಕ್ಷೇತ್ರ :
ಬಿ.ವೈ.ರಾಘವೇಂದ್ರ : 115486
ಗೀತಾ ಶಿವರಾಜ್‌ಕುಮಾರ್ : 58724
ಕೆ.ಎಸ್.ಈಶ್ವರಪ್ಪ : 3292
ಅಂಚೆ ಮತಗಳು :
ಬಿ.ವೈ.ರಾಘವೇಂದ್ರ : 2990
ಗೀತಾ ಶಿವರಾಜ್‌ಕುಮಾರ್ : 1384
ಕೆ.ಎಸ್.ಈಶ್ವರಪ್ಪ : 91
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್