January 11, 2026

ರಿಪ್ಪನ್‌ಪೇಟೆಯ ಹಿರಿಯ ವೈದ್ಯ ಹಮೀದ್ ಡಾಕ್ಟರ್ ಇನ್ನಿಲ್ಲ | hameed doctor passed away

ರಿಪ್ಪನ್‌ಪೇಟೆಯ ಹಿರಿಯ ವೈದ್ಯ ಹಮೀದ್ ಡಾಕ್ಟರ್ ಇನ್ನಿಲ್ಲ |

ರಿಪ್ಪನ್‌ಪೇಟೆ : ಪಟ್ಟಣದ ಹೆಸರಾಂತ ಮದನಿ ಕ್ಲಿನಿಕ್ ನ ಹಿರಿಯ ವೈದ್ಯ ಹಮೀದ್ ಡಾಕ್ಟರ್(90) ಇಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ವಯೋಸಹಜ ನಿಧನ ಹೊಂದಿದರು…ಅವರಿಗೆ 90 ವರ್ಷ ವಯಸ್ಸಾಗಿತ್ತು…!!

ರಿಪ್ಪನ್‌ಪೇಟೆ ಹಾಗೂ ಸುತ್ತಮುತ್ತಲಿನ ಜನರಿಗೆ ಬಹು ಪರಿಚಿತರಾದ ಹಾಗೂ ಅನೇಕ ರೋಗಿಗಳ ಪಾಲಿನ ಆಪದ್ಬಾಂಧವರಾಗಿದ್ದ ಹಮೀದ್ ಡಾಕ್ಟರ್ ಇಂದು ಬೆಳಿಗ್ಗೆ ಪಟ್ಟಣದ ವಿನಾಯಕ ವೃತ್ತದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.


ಸದಾ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಹಾಗೂ ತಮ್ಮ ಜೀವಮಾನವಿಡೀ ಸ್ವಾವಲಂಬಿಯಾಗಿ ಬದುಕಿ ಸಾಧಿಸಿ ತೋರಿಸಿದ ಮಕ್ಕಳ ತಜ್ಞ ಹಮೀದ್ ಡಾಕ್ಟರ್ ಇನ್ನು ನೆನಪು ಮಾತ್ರ….

ಸುಮಾರು 6 ದಶಕಗಳ ಕಾಲ ಮದನಿ ಕ್ಲಿನಿಕ್ ಮುಖಾಂತರ  ಜನಾನುರಾಗಿಯಾಗಿ ನಿಸ್ವಾರ್ಥದಿಂದ ಬಡ ರೋಗಿಗಳಿಗೆ ಸೇವೆ ಸಲ್ಲಿಸಿದ್ದ ಡಾಕ್ಟರ್ ಹಮೀದ್ ರವರು ಕಾಮಾಲೆ , ದಮ್ಮು ಖಾಯಿಲೆಗಳಿಗೆ ಉತ್ತಮ ಚಿಕಿತ್ಸೆ ನೀಡುತಿದ್ದ ಹಿನ್ನಲೆಯಲ್ಲಿ ರಾಜ್ಯದ ಮೂಲೆಮೂಲೆಗಳಿಂದ ರೋಗಿಗಳು ಪಟ್ಟಣದ ಮದನಿ ಕ್ಲಿನಿಕ್ ನತ್ತ ಬರುತಿದ್ದರು.

ಮೃತರು ಇಬ್ಬರು ಪುತ್ರರು , ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇಂದು ಸಂಜೆ ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿರುವ ಖಬರ್ ಸ್ಥಾನ್ ನಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ….

About The Author

Leave a Reply

Your email address will not be published. Required fields are marked *

Exit mobile version