ಬಗರ್ ಹುಕುಂ ಜಮೀನಿನ ಅರ್ಧ ಎಕರೆಯಲ್ಲಿ ಕಾಡನ್ನು ಬೆಳೆಸುವ ನಿಯಮ ಜಾರಿಯಾಗಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ | GKB

ಬಗರ್ ಹುಕುಂ ಜಮೀನಿನ ಅರ್ಧ ಎಕರೆಯಲ್ಲಿ ಕಾಡನ್ನು ಬೆಳೆಸುವ ನಿಯಮ ಜಾರಿಯಾಗಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ | GKB

ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವಂತ ರೈತರಿಗೆ ಸರ್ಕಾರದಿಂದ ಸಾಗುವಳಿ ಪತ್ರವನ್ನು ನೀಡೋ ಕೆಲಸ ಮಾಡುತ್ತಿದೆ. ಇದರ ಜೊತೆ ಜೊತೆಗೆ ಇದೇ ಭೂಮಿಯ ಅರ್ಧ ಎಕರೆಯಲ್ಲಿ ಕಾಡು ಬೆಳೆಸೋದಕ್ಕೆ ಮೀಸಲಿಡುವಂತ ನಿಯಮವನ್ನು ಜಾರಿಗೊಳಿಸಬೇಕು ಅಂತ ಶಾಸಕ ಬೇಳೂರು ಗೋಪಾಲಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.


ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಾಳೆಹಳ್ಳಿಯಲ್ಲಿ ಸಾಗರ ಅರಣ್ಯಾಧಿಕಾರಿಗಳ ಸಹಕಾರದಿಂದ ವನ ಮಹೋತ್ಸವದಲ್ಲಿ ಗಿಡ ನೆಟ್ಟ ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ನನಗೆ ಬಹಳ ಖುಷಿ ಆಯ್ತು ಇವತ್ತಿನ ಕಾರ್ಯಕ್ರಮ. ಮಲೆನಾಡು ಅಂದರೆ ನಮಗೆ ಜೀವ ರಕ್ಷಣೆ ಇರೋದೆ ಕಾಡಿನಲ್ಲಿ. ಕಳೆದ ವರ್ಷ ಮಳೆಯ ಅಭಾವ ಎಷ್ಟು ಆಗಿತ್ತು ಅಂತ ಗೊತ್ತಿದೆ ಎಂದರು.

ಕಾಡು ಸಂರಕ್ಷಣೆ ಮಾಡುವ ಕೆಲಸ ಮಾಡಬೇಕು. ನಾವು ಜಾಗೃತರಾಗಬೇಕು. ಆ ಕೆಲಸ ಮಾಡಲಿಲ್ಲ ಅಂದರೆ ತಾಪಮಾನದಲ್ಲಿ ವ್ಯತ್ಯಾಸ ಆಗಲಿದೆ ಎಂದರು.

ಒಂದು ಗಿಡ ಕಡಿದರೆ ಮತ್ತೊಂದು ಗಿಡ ನೆಡಬೇಕು. ಆ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ. ಅದಕ್ಕೆ ಕಾಡು ನಾಶವಾಗುತ್ತಿರುವುದೇ ಕಾರಣ ಎಂದು ಹೇಳಿದರು.


ಬಗರ್ ಹುಕುಂ ಯೋಜನೆಯಡಿ ನಾಲ್ಕು ಎಕರೆ ಭೂಮಿ ಮಂಜೂರು ಮಾಡಲಾಗುತ್ತದೆ. ನಾನು ಸರ್ಕಾರಕ್ಕೆ ಮನವರಿಕೆ ಮಾಡಿದ್ದೇನೆ ಹೀಗೆ ನೀಡುವ ಜಮೀನಿನಲ್ಲಿ ಅರ್ಧ ಎಕರೆ ಕಾಡು ಬೆಳೆಸುವಂತೆ ಆದೇಶ ಮಾಡಬೇಕು. ಹೀಗೆ ಮಾಡಿದಾಗ ಎಷ್ಟು ಕಾಡು ಬೆಳೆಯಲಿದೆ ಎಂದು ಅಭಿಪ್ರಾಯ ಪಟ್ಟರು.

ಮನೆಯ ಮುಂದೆ ಗಿಡ ನೆಡುವ ಕೆಲಸ ಆಗಬೇಕು. ಗ್ರಾಮಸ್ಥರು ಈ ಕೆಲಸ ಮಾಡಬೇಕು. ನಿಮ್ಮ ಮನೆ ಮುಂದೆ ಎರಡು ಎರಡು ಗಿಡ ನೆಡುವ ಕೆಲಸ ಮಾಡಿ ಅಂತ ಕರೆ ನೀಡಿದರು.

ಇದೇ ವೇಳೆ ಮಾತನಾಡಿದಂತ ಸಾಗರ ಉಪ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ಅವರು, ಅರಣ್ಯ ಭೂಮಿಗಿಂತ ಹೆಚ್ಚು ಪ್ರಶಸ್ತವಾಗಿದ್ದದ್ದು ಕಾನು ಸೊಪ್ಪಿನ ಬೆಟ್ಟ. ಸಮಾಜ ಮತ್ತು ಅರಣ್ಯ ಇಲಾಖೆ ಜೊತೆಗೂಡಿ ಕಾನುಸೊಪ್ಪಿನ ಬೆಟ್ಟವನ್ನು ಕಾಪಾಡುವ ಕೆಲಸ ಮಾಡಬೇಕು. ಈ ಬೆಟ್ಟಗಳಿಂದ ಹೊಲಕ್ಕೆ ಫಲವತ್ತತೆ ತರುವ ಕೆಲಸ ಮಾಡಬೇಕು. ಈ ಕಾರ್ಯ ಮುಂದುವರೆಯಲಿ. ನನ್ನ ಕಾನು, ನನ್ನ ಸೊಪ್ಪಿನ ಬೆಟ್ಟ ಅನ್ನುವ ಮನೋಭಾವ ಬರಲಿ ಅಂತ ಹೇಳಿದರು.

ಈ ಸಂದರ್ಭದಲ್ಲಿ ಆರ್ ಎಫ್ ಓ ಅರವಿಂದ್.ವಿ, ನಾಗವೇಣಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ವಾಸಿಂ ರಾಮಚಂದ್ರ ಭಟ್ ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗಿದ್ದರು.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

‘ಎಲ್ಲದಕ್ಕೂ ಒಂದು ಲೆಕ್ಕ ಇರಲಿ’ — ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ಸರ್ಕಾರದ ಹೊಸ ನಿಯಮ! ಏನಿದು ಹೊಸ ಬಿಲ್? ಇಲ್ಲಿದೆ ಡಿಟೇಲ್ಸ್

‘ಎಲ್ಲದಕ್ಕೂ ಒಂದು ಲೆಕ್ಕ ಇರಲಿ’ — ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ಸರ್ಕಾರದ ಹೊಸ ನಿಯಮ! ಏನಿದು ಹೊಸ ಬಿಲ್? ಇಲ್ಲಿದೆ…

2 hours ago

RIPPONPETE | ಬೀದಿ ಬದಿಯ ಸರ್ಕಸ್‌ನಲ್ಲಿ ಅಪ್ರಾಪ್ತ ಬಾಲಕಿ ಬಳಕೆ ಆರೋಪ: ಪೊಲೀಸರಿಂದ ರಕ್ಷಣೆ

RIPPONPETE | ಬೀದಿ ಬದಿಯ ಸರ್ಕಸ್‌ನಲ್ಲಿ ಅಪ್ರಾಪ್ತ ಬಾಲಕಿ ಬಳಕೆ ಆರೋಪ: ಪೊಲೀಸರಿಂದ ರಕ್ಷಣೆ Police rescue a minor…

9 hours ago

ಅರಸಾಳು ಕೆರೆ ಬಳಿ 20 ಅಡಿ ಆಳದ ಕಂದಕಕ್ಕೆ ಉರುಳಿದ ಲಾರಿ; ತಪ್ಪಿದ ಭಾರಿ ಅನಾಹುತ

ಅರಸಾಳು ಕೆರೆ ಬಳಿ 20 ಅಡಿ ಆಳದ ಕಂದಕಕ್ಕೆ ಉರುಳಿದ ಲಾರಿ; ತಪ್ಪಿದ ಭಾರಿ ಅನಾಹುತ A truck carrying…

16 hours ago

ತಂದೆ–ಮಗನ ಜಗಳ ಕೊಲೆಯಲ್ಲಿ ಅಂತ್ಯ; ಮೃತದೇಹ ಬಾವಿಗೆ ಎಸೆದ ಆರೋಪ

ಸಾಗರ: ಜೈಲಿನಿಂದ ಬಿಡುಗಡೆಯಾದ ತಂದೆಯನ್ನೇ ಮಗ ಕೊಲೆ ಮಾಡಿದ ಆರೋಪ; ಮೃತದೇಹ ಬಾವಿಗೆ ಎಸೆದು ಮುಚ್ಚಿಟ್ಟ ಶಂಕೆ A man…

18 hours ago

ಸಚಿವ ಸಂಪುಟದ ಖಾತೆ ಹಂಚಿಕೆ ಫೈನಲ್: ಹಿರಿಯ ಸಚಿವರ ಖಾತೆಗಳಲ್ಲೂ ಭಾರೀ ಬದಲಾವಣೆ!10 ದಿನಗಳ ಕುತೂಹಲಕ್ಕೆ ತೆರೆ – ಇಲ್ಲಿದೆ ಸಂಪೂರ್ಣ ವಿವರ!

ಸಚಿವ ಸಂಪುಟದ ಖಾತೆ ಹಂಚಿಕೆ ಫೈನಲ್: ಹಿರಿಯ ಸಚಿವರ ಖಾತೆಗಳಲ್ಲೂ ಭಾರೀ ಬದಲಾವಣೆ!10 ದಿನಗಳ ಕುತೂಹಲಕ್ಕೆ ತೆರೆ - ಇಲ್ಲಿದೆ…

1 day ago

ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಗ್ರಾಮಸ್ಥರ ಪ್ರತಿಭಟನೆ; ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ

ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಗ್ರಾಮಸ್ಥರ ಪ್ರತಿಭಟನೆ; ಹೆದ್ದಾರಿಪುರ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ Villagers protest by planting…

1 day ago