ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿಯನ್ನು ಜೇನುತುಪ್ಪ ಹಾಕಿಕೊಂಡು ನೆಕ್ಕುತ್ತಿದ್ದಾರಾ :ಗೋಪಾಲ ಕೃಷ್ಣ ಬೇಳೂರು
ರಿಪ್ಪನ್‌ಪೇಟೆ : ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ಮನೆಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ ಕಾರ್ಡ್ ಉಪ್ಪುಕಾರ ಹಾಕೊಂಡು ನೆಕ್ಕಿ ಎಂದಿದ್ದವರು ಈಗ ಅದೇ ಬಿಜೆಪಿಯವರೇ ಜೇನುತುಪ್ಪಾ ಹಾಕಿಕೊಂಡು ನೆಕ್ಕುತ್ತಿದ್ದಾರೆಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ 5 ಗ್ಯಾರಂಟಿ ಗಳನ್ನು ಅನುಷ್ಠಾನಗೊಳಿಸಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗ್ಯಾರಂಟಿ ಕಾರ್ಡುಗಳನ್ನು ಮನೆಮನೆ ಗೆ ನೀಡುವ ಸಂದರ್ಭದಲ್ಲಿ ಬಿಜೆಪಿಯ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ಅಪಹಸ್ಯ ಮಾಡಿದ್ದರು. ರಿಪ್ಪನ್ ಪೇಟೆ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಬಜರಂಗದಳದ ಹಿಂದೂ ಕಾರ್ಯಕರ್ತರು ಜೈ ಶ್ರೀರಾಮ ಘೋಷಣೆ ಕೂಗಿದ್ದರ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಠಾಣೆಗೆ ದೂರು ನೀಡಲು ಮುಂದಾಗಿದ್ದು ಆಗ ಬಿಜೆಪಿಯವರೇ ನಮಗೂ ಸಂಘಟನೆಯವರಿಗೂ ಸಂಬಂಧವಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡ ಮೇರೆಗೆ ನಮ್ಮ ಕಾರ್ಯಕರ್ತರು ಬಿಜೆಪಿ ಬಹಿರಂಗ ಸಭೆಯಲ್ಲಿ ಖಾಲಿಚೊಂಬು ಪ್ರದರ್ಶಿಸುವುದನ್ನು ಕೈಬಿಟ್ಟಿದ್ದರು.
ಆದರೆ ಸಂಸದ ಮತ್ತು ಆಭ್ಯರ್ಥಿ ಬಿ.ವೈ.ರಾಘವೇಂದ್ರರವರು ಸಭೆಯಲ್ಲಿ ನಮ್ಮ ಕಾರ್ಯಕರ್ತರೇನು ಬಳೆತೊಟ್ಟಿಲ್ಲ ಎಂದು ಪರೋಕ್ಷವಾಗಿ ಹೇಳಿಕೆ ನೀಡಿರುವದನ್ನು ತೀವ್ರವಾಗಿ ಖಂಡಿಸಿ ಇನ್ನೂ ಮುಂದೆ ರಾಘವೇಂದ್ರರವರು ಈ ರೀತಿಯಲ್ಲಿ ಮಾತನಾಡಿದರೆ ಸರಿಯಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಹರತಾಳು ಹಾಲಪ್ಪ ಬಿಜೆಪಿ ಚುನಾವಣೆಯ ಪ್ರಚಾರ ಸಭೆಯಲ್ಲಿ ರಿಪ್ಪನ್ ಪೇಟೆ ಪಟ್ಟಣದ ಸಾಗರ ರಸ್ತೆಯ ಅಭಿವೃದ್ದಿಗೆ ಅನುದಾನ ಹಾಕಿಸಿಕೊಂಡು ಬಂದವನು ನಾನು ಈಗ ಭರದಿಂದ ಕಾಮಗಾರಿ ಸಾಗುತ್ತಿದೆ. ಎಂದು ಸುಳ್ಳು ಭಾಷಣವನ್ನು ಮಾಡುತ್ತಿದ್ದಾರೆ. ಸುಳ್ಳಿನಲ್ಲಿಯೇ ಐದು ವರ್ಷ ಕಾಲಕಳೆದ ಹರತಾಳು ಹಾಲಪ್ಪ ಕ್ಷೇತ್ರದ ಅಭಿವೃದ್ದಿ ಮಾಡದೆ ತನ್ನ ಪಕ್ಷದ ಕಾರ್ಯಕರ್ತರ ಮನೆಗಳ ಮುಂದೆ 100 ಮೀಟರ್ ರಸ್ತೆ ಮಾಡಿದ್ದು ಬಿಟ್ಟರೆ ಇನ್ನೂ ಏನು ಮಾಡಿದ್ದಾನೆಂದು ಬಹಿರಂಗವಾಗಿ ಹೇಳಲಿ ಎಂದರು.
೨೮ ಕ್ಷೇತ್ರ ಗೆಲ್ಲದಿದ್ದರೆ ಅಪ್ಪಮಗ ರಾಜಿನಾಮೆ ನೀಡುತ್ತಾರಾ;-
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬೆ.ಎಸ್.ಯಡಿಯೂರಪ್ಪನವರು ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ೨೮ ಕ್ಷೇತ್ರಗಳನ್ನು ಗೆಲುತ್ತೇವೆಂದು ಹೇಳಿಕೊಳ್ಳುತ್ತಿದ್ದು ಗೆಲ್ಲದಿದ್ದರೆ ಯಡಿಯೂರಪ್ಪ ಮತ್ತು ಮಗ ರಾಜೀನಾಮೆ ಕೊಡುತ್ತಾರಾ ಎಂದು ಕೇಳಿದರು.
ಹಾಲಪ್ಪ ನನ್ನ ಉಡುಪಿನ ಮತ್ತು ಕನ್ನಡಕದ ಬಗ್ಗೆ ಮಾತನಾಡಿ ಈಗ ಬಿಟ್ಟಿದ್ದಾನೆ ಈಗ ಕುಮಾರ ಬಂಗಾರಪ್ಪ ನನ್ನ ಕಡಕ ಮತ್ತು ಉಡುಪಿನ ಬಗ್ಗೆ ಮಾತನಾಡಲು ಅರಂಭಿಸಿದ್ದಾನೆ ಅವನ ಬಾಯಿಗೆ ಬೀಗ ಹಾಕುವ ಕಾಲ ದೂರವಿಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಬಂಡಿ ರಾಮಚಂದ್ರ ,ಹೆಚ್.ವಿ.ಈಶ್ವರಪ್ಪಗೌಡ, ಅಮೀರ್ ಹಂಜಾ , ಪರಮೇಶ್, ಧನಲಕ್ಷ್ಮೀ ,ಸಾಕಮ್ಮ,ಎನ್.ಚಂದ್ರೇಶ್ , ಉಲ್ಲಾಸ್,ಕೆರೆಹಳ್ಳಿ ರವೀಂದ್ರ, ಉಮಾಕರ್, ರಮೇಶ್‌ಪ್ಯಾನ್ಸಿ, ನವೀನ ಕೆರೆಹಳ್ಳಿ ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.


