Ripponpete | ಅನಧಿಕೃತ ಕಟ್ಟಡ ತೆರವಾಗಲಿಲ್ಲ.!ಕಾಮಗಾರಿ ಮುಗಿದಿಲ್ಲ..! ಧೂಳಿನ ಕಿರಿಕಿರಿ ತಪ್ಪಿಲ್ಲ..! ರಿಪ್ಪನ್‌ಪೇಟೆಯ ರಸ್ತೆ ಅಗಲೀಕರಣದ ಕಾಮಗಾರಿಯ ಕಥೆ..ವ್ಯಥೆ
ರಿಪ್ಪನ್‌ಪೇಟೆ : ರಸ್ತೆ ಅಗಲೀಕರಣಕ್ಕೆ ನಿಗದಿ ಪಡಿಸಲಾದ ಜಾಗ ತೆರವು ಗೊಳಿಸದೇ ಪ್ರಭಾವಿ ವ್ಯಕ್ತಿಗಳು ಇರುವುದರಿಂದ ರಸ್ತೆ ಅಗಲೀಕರಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.ಇದರಿಂದಾಗಿ ಸಾಗರ ರಸ್ತೆಯ ನಿವಾಸಿಗಳು ಮತ್ತು ಸಾರ್ವಜನಿಕರ ಓಡಾಡದಂತಾಗಿ ಎಲ್ಲೆಂದರಲ್ಲಿ ಕುಡಿಯುವ ನೀರಿನ ಪೈಪ್‌ಗಳು ಒಡೆದು ನೀರು ರಸ್ತೆ ಚರಂಡಿ ಪಾಲಾಗುವಂತಾಗಿದೆ.
ಜನಪ್ರತಿನಿಧಿಗಳು ವಿಶೇಷ ಆಸಕ್ತಿ ವಹಿಸಿ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಿಂದ ಸಾಗರ ರಸ್ತೆಯ ಎಪಿಎಂಸಿ ಯಾರ್ಡ್ ಒಂದು ಕೀ ಮೀ ದೂರದ ದ್ವಿ ಪಥ ರಸ್ತೆ ಆಭಿವೃದ್ದಿಗೆ 5.13 ಕೋಟಿ ರೂ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದರೂ ಕೂಡಾ ಕಾಮಗಾರಿ ಅಮೆಗತಿಯಲ್ಲಿ ಸಾಗುವಂತಾಗಿದೆ. ಒಂದು ಕಿಮೀ ರಸ್ತೆ ಮಾಡಲು ಒಂದು ವರ್ಷ ಬೇಕಾ.?? ಎಂದು ಸಾರ್ವಜನಿಕರು ಆಡಿಕೊಳ್ಳುತಿದ್ದಾರೆ.
ಇನ್ನೂ ಸಾಗರ ರಸ್ತೆಯ ಎಡ ಮತ್ತು ಬಲಭಾಗದಲ್ಲಿ ಸಾಕಷ್ಟು ಅಂಗಡಿ ವಾಸದ ಮನೆಗಳು ಇದ್ದು ಅವುಗಳನ್ನು ತೆರವುಗೊಳಿಸುತ್ತಾ ಬಾಕ್ಸ್ ಚರಂಡಿ ಮತ್ತು ಡಿವೈಡರ್ ಕಾಮಗಾರಿ ಜೊತೆ ಡಾಂಬರೀಕರಣವನ್ನು ಸಹ ಅಲ್ಪಸ್ವಲ್ಪ ಮಾಡುತ್ತಾ ಬರುತ್ತಿದ್ದು ವಿನಾಯಕ ವೃತ್ತದ ಹತ್ತಿರದ ಖಾಸಗಿ ಪ್ರಭಾವಿ ವ್ಯಕ್ತಿಯೊಬ್ಬರ ಅಂಗಡಿ ಬಳಿ ಲೋಕೋಪಯೋಗಿ ಇಲಾಖೆಯವರು ನಿಗದಿ ಪಡಿಸಲಾದ ಜಾಗವನ್ನು ತೆರವುಗೊಳಿಸದೇ ಕಾಮಗಾರಿಗೆ ಕಂಟಕವಾಗಿದ್ದಾರೆ.
ಈ ಹಿಂದೆ ಅಳವಡಿಸಲಾದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಅಗಲೀಕರಣದ ರಸ್ತೆಯ ಬಾಕ್ಸ್ ಚರಂಡಿಯ ಹೊರಗೆ ಅಳವಡಿಸಲಾಗಿದ್ದು ವಿನಾಯಕ ವೃತ್ತದ ಹತ್ತಿರದ ಖಾಸಗಿ ಪ್ರಭಾವಿ ವ್ಯಕ್ತಿಯೊಬ್ಬರ ಅಂಗಡಿ ಬಳಿಯಲ್ಲಿರುವ ವಿದ್ಯುತ್ ಕಂಬ ಹಾಕಲು ಬಿಡದೇ ಪ್ರತಿಷ್ಟೆ ಮಾಡುತ್ತಿದ್ದು ಊರಿಗೆಲ್ಲಾ ಒಂದು ಕಾನೂನು ಆದರೆ ಈ ವ್ಯಕ್ತಿಗೆ ಒಂದು ಕಾನೂನು ಮೆಸ್ಕಾಂ ಇಲಾಖೆಯ 11 ಕೆ.ವಿ.ಲೈನ್‌ಯನ್ನು ಕಟ್ಟಡದ ಮೇಲ್ಬಾಗದಲ್ಲಿ ಎಳೆದುಕೊಂಡು ಹೋಗಿ ಎಂದು ಬೃಹತ್ ಗಾತ್ರದ ವಿದ್ಯುತ್‌ನ ನಾಲ್ಕು ಕಂಬಗಳನ್ನು ತಂದಿರಿಸಿದ್ದು ಸಾರ್ವಜನಿಕರನ್ನು ಇನ್ನಷ್ಟು ಕುಪಿತರನ್ನಾಗಿಸಲು ಕಾರಣವಾಗಿತ್ತು.
ರಸ್ತೆಯ ಮಧ್ಯದಲ್ಲಿ ಅಪಘಾತಕ್ಕೆ ಅಹ್ವಾನಿಸುತ್ತಿರುವ ವಿದ್ಯುತ್ ಕಂಬಗಳು :
ತೀರ್ಥಹಳ್ಳಿ ರಸ್ತೆಯಲ್ಲಿ ಅಗಲೀಕರಣ ಕಾಮಗಾರಿ ಭರದಿಂದ ಸಾಗುತ್ತಿದ್ದರೂ ಕೂಡಾ ರಸ್ತೆಯಂಚಿನಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೇ ಜಲ್ಲಿಕಲ್ಲು ಬಿಚಾವಣೆ ಮಾಡುತ್ತಿದ್ದು ಅಪಘಾತಕ್ಕೆ ಆಹ್ವಾನಿಸುವಂತಿವೆ.
ಗುತ್ತಿಗೆದಾರನಿಗೆ ಬೇಗ ಕೆಲಸ ಮುಗಿದರೆ ಸಾಕು ಎಂಬ ಚಿಂತೆ.! ವಾಹನಸವಾರರಿಗೆ ಯಾವ ಸಂದರ್ಭದಲ್ಲಿ ಏನಾಗುತ್ತದೋ ಎಂಬ ಭಯ ಈ ಎರಡರ ಮಧ್ಯ ಸಾರ್ವಜನಿಕರು ಓಡಾಡದಂತಾಗಿರುವುದು ಮಾತ್ರ ಎಡಗೈಯಲ್ಲಿ ಜೀವ ಹಿಡಿದುಕೊಂಡು ಓಡಾಡಬೇಕಾದ ಆನಿವಾರ್ಯತೆ ಎದುರಾಗಿದೆ.ಸಂಜೆಯಾಯಿತ್ತೆಂದರೆ ತೀರ್ಥಹಳ್ಳಿ ರಸ್ತೆಯ ಬಸ್ ನಿಲ್ದಾಣಕ್ಕೆ ಹತ್ತಿರವಿರುವ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಂದಾಗಿ ರಸ್ತೆಯಂಚಿನಲ್ಲಿ ಬಾರಿ ವಾಹನಗಳ ದಟ್ಟಣೆಯಿಂದಾಗಿ ಪ್ರಯಾಣಿಕರು ವಾಹನಸವಾರರು ಟ್ರಾಫಿಕ್ ಕಿರಿಕಿರಿಯಿಂದ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಎದುರಾಗಿದೆ.ಒಟ್ಟಾರೆಯಾಗಿ ರಿಪ್ಪನ್‌ಪೇಟೆಯಲ್ಲಿ ಕಳೆದ ಐದಾರು ತಿಂಗಳಿಂದ ಧೂಳಿನ ಮಯದಿಂದ ಮುಕ್ತಿಯಿಲ್ಲದೆ ಪರಿತಪ್ಪಿಸುವಂತಾಗಿದೆ.


