Headlines

ಐವತ್ತಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ – ನೋವಿನಲ್ಲಿಯೂ ಎರಡು ವರ್ಷದ ಮಗುವನ್ನು ರಕ್ಷಿಸಿದ ಬಾಲಕ | honey bee attacks

ಐವತ್ತಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ – ನೋವಿನಲ್ಲಿಯೂ ಎರಡು ವರ್ಷದ ಮಗುವನ್ನು ರಕ್ಷಿಸಿದ ಬಾಲಕ


50ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬಾಬಳ್ಳಿ ಎಂಬಲ್ಲಿ ನಡೆದಿದೆ.

ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಸಿದ್ದತೆ ವೇಳೆ ಈ ಘಟನೆ ನಡೆದಿದ್ದು, ಜಾತ್ರೆ ಹಿನ್ನೆಲೆ ಗಂಗೆ ಪೂಜೆ ಮಾಡಲು ಜನ ಹೊರಟ್ಟಿದ್ದ ವೇಳೆ ಈ ಅನಾಹುತ ನಡೆದಿದೆ.


ನಾಳೆ ನಡೆಯಲಿರುವ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಾರ್ವಜನಿಕರು ಗಂಗೆಪೂಜೆಗೆ ಹೋಗುವ ವೇಳೆ ಪೋದೆಯಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ದಾಳಿ ನಡೆಸಿದೆ.

ಹೆಜ್ಜೇನು ದಾಳಿಯಿಂದ ಗಾಯಗೊಂಡವರಿಗೆ ಭದ್ರಾವತಿ ಹಾಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆಜ್ಜೇನು ದಾಳಿ ವೇಳೆ 12 ವರ್ಷದ ಬಾಲಕನೋರ್ವ ಎರಡು ವರ್ಷದ ಮಗುವಿನ ರಕ್ಷಣೆ ಮಾಡಿದ್ದಾನೆ. ಬಾಲಕ ಗಗನ್ 10 ಕ್ಕೂ ಹೆಚ್ಚು ಹೆಜ್ಜೇನು ಕಚ್ಚಿಸಿಕೊಂಡರೂ ಸಹ ಎರಡು ವರ್ಷದ ಬಾಲಕನ ರಕ್ಷಣೆ ಮಾಡಿ ಸಾಹಸ ಮೆರೆದಿದ್ದಾನೆ.

About The Author

Leave a Reply

Your email address will not be published. Required fields are marked *

Exit mobile version