ಇಂದು ರಾತ್ರಿಯಿಂದ 108 ಆಂಬ್ಯುಲೆನ್ಸ್ ಬಂದ್..!? ಮುಷ್ಕರಕ್ಕೆ ಕರೆ ಕೊಟ್ಟ ಸಿಬ್ಬಂದಿಗಳು
ಮೂರು ತಿಂಗಳ ವೇತನ ಬಾಕಿ ಬಿಡುಗಡೆಗೆ ಆಗ್ರಹಿಸಿ ಆಂಬುಲೆನ್ಸ್ ನೌಕರರು 108 ಸೇವೆ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. GVK ಯಿಂದ 108 ನೌಕರರಿಗೆ ಎರಡು ತಿಂಗಳ ಅರ್ಧ ವೇತನ ಪಾವತಿಸಿದ ಆರೋಪ ಕೇಳಿ ಬಂದಿದ್ದು, ಮೂರು ತಿಂಗಳ ಪೂರ್ಣ ವೇತನ ನೀಡದೆ ವಿಳಂಬ ಹಿನ್ನೆಲೆ ಇಂದು ರಾತ್ರಿ 8 ರಿಂದ ರಾಜ್ಯಾದ್ಯಂತ ಆಯಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಲು ಸಿಬ್ಬಂದಿ ನಿರ್ಧಾರ ಮಾಡಿದ್ದಾರೆ.
ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಉಪನಿರ್ದೇಶಕ ಪ್ರಭು ಗೌಡ ನೇತೃತ್ವದಲ್ಲಿ ಆಂಬುಲೈನ್ಸ್ ಸಂಘದ ಜೊತೆ ಸಭೆ ನಡೆಸಲಿದ್ದು, ಸಭೆಯಲ್ಲಿ ನೌಕರರ ಪರವಾದ ನಿರ್ಧಾರ ಕೈಗೊಂಡರೆ ಸೇವೆ ಮುಂದೂವರಿಕೆ ಆಗುತ್ತೆ. ಬೇಡಿಕೆ ಈಡೇರಿಕೆಗೆ ವಿಫಲರಾದರೆ, ಇಂದು ರಾತ್ರಿ 8 ರಿಂದ ಸೇವೆ ಬಂದ್ ಮಾಡುತ್ತೇವೆ. ಆಯಂಬುಲೈನ್ಸ್ ನಲ್ಲಿ ಡ್ಯೂಟಿಗೆ ಹಾಜರಾಗಿ, ಯಾವುದೇ ಕೇಸ್ ಅಟೆಂಡ್ ಮಾಡದಿರಲು ಸಿಬ್ಬಂದಿ ನಿರ್ಧಾರ ಮಾಡಿದ್ದಾರೆ.
ಒಟ್ಟು 2,500 ಸಿಬ್ಬಂದಿ ಕಾರ್ಯನಿರ್ವಹಿಸ್ತಿದ್ದು, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಅರ್ಧದಷ್ಟು ಮಾತ್ರ ವೇತನ ನೀಡಿದ್ದಾರಂತೆ. ಕಳೆದ ಮೂರು ತಿಂಗಳಿಂದ ವೇತನವನ್ನೇ ಕೊಟ್ಟಿಲ್ಲ ಅಂತಾ ಪ್ರತಿಭಟನೆಗೆ ಇಳಿಯಲಿದ್ದಾರೆ.
ಈ ಕುರಿತಂತೆ 108 ಆಂಬುಲೈನ್ಸ್ ನೌಕರರಸಂಘದ ಉಪಾಧ್ಯಕ್ಷ ಪರಮಶಿವಯ್ಯ ಮಾಹಿತಿ ನೀಡಿದ್ದು, ಆರೋಗ್ಯ ಕವಚ ಸಿಬ್ಬಂದಿಗಳು ಇಂದು ರಾಜ್ಯದಾದ್ಯಂತ ಸೇವೆ ಬಂದ್ ಮಾಡಲು ನಿರ್ಧಾರ ಮಾಡಿದ್ದೇವು. ವೇತನ ವಿಳಂಬ ಹಾಗೂ ವೇತನ ಕಡಿತ ಆಗಿರುವ ವಿಚಾರವಾಗಿ ಸರ್ಕಾರ ಹಾಗೂ ಸಂಸ್ಥೆಗೆ ಮನವಿ ಮಾಡಿದ್ದೇವು. ಅಲ್ಲದೇ ಸೋಮವಾರ ಸಂಜೆ 8 ಗಂಟೆ ವೇಳೆಗೆ ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಡೆಡ್ಲೈನ್ ಕೊಟ್ಟಿದ್ದೇವು. ಈ ಹಿನ್ನೆಲೆಯಲ್ಲಿ ಇಂದು ಜಿವಿಕೆ ಸಂಸ್ಥೆಯಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ. ಸಭೆಯಲ್ಲಿ ಮೂರು ಸಂಘಟನೆಗಳ ಮುಖಂಡರು ಭಾಗಿ ಆಗಲಿದ್ದಾರೆ. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಮೇರೆಗೆ ನಮ್ಮ ಹೋರಾಟಕ್ಕೆ ಮುಂದಾಗಬೇಕಾ ಅಥವಾ ಹೋರಾಟವನ್ನು ಕೈ ಬಿಡಬೇಕಾ ಅಂತ ನಿರ್ಧಾರ ಮಾಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ.


