Ripponpete | ಭಾರಿ ಮಳೆಗೆ ಮನೆ ಕುಸಿತ : ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ
ರಿಪ್ಪನ್‌ಪೇಟೆ : ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಶಬರೀಶನಗರದಲ್ಲಿ ಬಡ ಮಹಿಳೆಯೊಬ್ಬರ ಮನೆಯ ಗೋಡೆ ಕುಸಿತವಾಗಿರುವ ಘಟನೆ ನಡೆದಿದೆ.
ರಾತ್ರಿ ಸುರಿದ ಮಳೆಗೆ ಮನೆಯ ಛಾವಣಿ ಹಾಗೂ ಗೋಡೆ ಕುಸಿದಿದೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಶಬ್ದ ಬಂದಿದ್ದರಿಂದ ನೋಡಿದಾಗ ಮನೆ ಗೋಡೆ ಕುಸಿದಿರುವುದು ತಿಳಿದು ಕುಟುಂಬ ಸುರಕ್ಷಿತವಾಗಿ ಪಾರಾಗಿದೆ.
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಶಬರೀಶನಗರದ ಬಡ ಮಹಿಳೆ ಪುಟ್ಟಮ್ಮ ಎಂಬುವವರ ಮನೆಯ ಗೋಡೆ ಕುಸಿದಿದೆ, ಮಳೆಯ ರಭಸಕ್ಕೆ ಮನೆಯೊಳಗಿನ ಅಡುಗೆ ಮನೆ ಪಕ್ಕದ ಗೋಡೆ ಕುಸಿದಿದ್ದು , ಸಂಪೂರ್ಣ ಮನೆ ಕುಸಿಯುವ ಹಂತದಲ್ಲಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
ಸ್ಥಳಕ್ಕೆ ಗ್ರಾಪಂ ಪಿಡಿಓ ಮಧುಸೂಧನ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಮಣ್ಣಿನ ಗೋಡೆಯಲ್ಲಿರುವ ಮನೆಯ ಎಲ್ಲಾ ಗೋಡೆಗಳು ಕುಸಿಯುವ ಹಂತದಲ್ಲಿದ್ದೂ ಮನೆಯಲ್ಲಿ ವೃದ್ದೆ ಸೇರಿದಂತೆ ನಾಲ್ವರು ವಾಸಿಸುತಿದ್ದಾರೆ ಸಂಬಂಧಪಟ್ಟವರು ಕೂಡಲೇ ಬಡ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಮುಂದಾಗುವ ಭಾರಿ ಅನಾಹುತವ ತಪ್ಪಿಸಲಿ ಎನ್ನುವುದೇ ಪೋಸ್ಟ್ ಮ್ಯಾನ್ ನ್ಯೂಸ್ ನ ಕಳಕಳಿ…….